ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಯುವ ನಾಯಕ ಶುಭಮನ್ ಗಿಲ್ (Shubman Gill) ಮತ್ತೊಂದು ಶತಕ ಸಿಡಿಸುವ ಮೂಲಕ ಡಾನ್ ಬ್ರಾಡ್ಮನ್ (Don Bradman), ಸುನೀಲ್ ಗವಾಸ್ಕರ್, ರನ್ ಮಿಷನ್ ಕೊಹ್ಲಿ (Virat Kohli) ಅವರಂತಹ ದಿಗ್ಗಜರ ದಾಖಲೆಗಳನ್ನ ಸರಿಗಟ್ಟಿದ್ದಾರೆ.
A CAPTAIN’S HUNDRED BY SHUBMAN GILL IN MANCHESTER. 🇮🇳pic.twitter.com/YrAoC0X0wB
— Mufaddal Vohra (@mufaddal_vohra) July 27, 2025
ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಕೊನೆಯ ದಿನದಾಟದ ಹೊತ್ತಿಗೆ ಒಟ್ಟು 238 ಎಸೆತಗಳನ್ನು ಎದುರಿಸಿದ ಗಿಲ್ 12 ಬೌಂಡರಿ ಸಹಿತ 103 ರನ್ ಚಚ್ಚಿದರು. ಇದರಿಂದ ಹಲವು ದಾಖಲೆಗಳನ್ನ ನುಚ್ಚುನೂರು ಮಾಡಿ, ದಿಗ್ಗಜರ ಎಲೈಟ್ ಲಿಸ್ಟ್ ಸೇರಿಕೊಂಡಿದ್ದಾರೆ. ಇದನ್ನೂ ಓದಿ: Asia Cup T20 | ಏಷ್ಯಾ ಕಪ್ ಟೂರ್ನಿಗೆ ದಿನಾಂಕ ಪ್ರಕಟ; ಭಾರತ – ಪಾಕ್ ಕದನಕ್ಕೆ ಮುಹೂರ್ತ ಫಿಕ್ಸ್!
Shubman Gill in the list of Bradman and Gavaskar. 🔥 pic.twitter.com/Yg8PXmfcix
— Mufaddal Vohra (@mufaddal_vohra) July 27, 2025
2ನೇ ಭಾರತೀಯನೆಂಬ ಹೆಗ್ಗಳಿಕೆ
ಟೆಸ್ಟ್ ಕ್ರಿಕೆಟ್‌ನಲ್ಲಿ 9ನೇ ಶತಕ ಸಿಡಿಸಿರುವ ಶುಭಮನ್ ಗಿಲ್ ವೃತ್ತಿಜೀವನದ 18ನೇ ಅಂತಾರಾಷ್ಟ್ರೀಯ ಶತಕ ದಾಖಲಿಸಿದ್ದಾರೆ. ಈ ಮೂಲಕ 35 ವರ್ಷಗಳ ಬಳಿಕ ಮ್ಯಾಂಚೆಸ್ಟರ್‌ನಲ್ಲಿ ಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ವಿಶೇಷ ಸಾಧನೆಗೂ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಧನುಷ್ ಬಾಬುಗೆ ಏಷ್ಯನ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ
SHUBMAN GILL – THE FIGHTER. pic.twitter.com/cn7ePaULfR
— Mufaddal Vohra (@mufaddal_vohra) July 27, 2025
ಡಾನ್, ಗವಾಸ್ಕರ್ ದಾಖಲೆ ಸರಿಗಟ್ಟಿದ ಗಿಲ್
ಟೀಂ ಇಂಡಿಯಾದ 37ನೇ ಟೆಸ್ಟ್ ಕ್ಯಾಪ್ಟನ್ ಆಗಿರುವ ಶುಭಮನ್ ಗಿಲ್ ಚೊಚ್ಚಲ ಸರಣಿಯಲ್ಲೇ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಇಂದು ಸಿಡಿಸಿದ ಶತಕದೊಂದಿಗೆ ಈ ಸರಣಿಯಲ್ಲಿ ಒಟ್ಟು 4 ಶತಕ, ಒಂದು ದ್ವಿಶತಕವನ್ನ ದಾಖಲಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ 2 ವರ್ಷಗಳಿಂದ ಅತ್ಯಾಚಾರ ಎಸಗಿದ ಆರೋಪ – RCB ಸ್ಟಾರ್ ಯಶ್ ದಯಾಳ್ ವಿರುದ್ಧ ಪೋಕ್ಸೊ ಕೇಸ್
ಇದರೊಂದಿಗೆ ಟೆಸ್ಟ್ ಸರಣಿಯೊಂದರಲ್ಲಿ ನಾಯಕನಾಗಿ ಅತಿಹೆಚ್ಚು ಶತಕ ಸಿಡಿಸಿದ ಅಗ್ರ ಬ್ಯಾಟರ್‌ಗಳ ಎಲೈಟ್ ಲಿಸ್ಟ್ ಸೇರಿಕೊಂಡಿದ್ದಾರೆ. 1947-48ರಲ್ಲಿ ಡಾನ್ ಬ್ರಾಡ್ಮನ್ ಮೊದಲ ಬಾರಿಗೆ 4 ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಆ ಬಳಿಕ 1978-79ರಲ್ಲಿ ಟೀಂ ಇಂಡಿಯಾದ ಸುನೀಲ್ ಗವಾಸ್ಕರ್ ಈ ಸಾಧನೆ ಮಾಡಿದ್ದರು. ಇದಾದ 46 ವರ್ಷಗಳ ಬಳಿಕ ಶುಭಮನ್ ಗಿಲ್ ಸರಣಿಯೊಂದರಲ್ಲಿ 4 ಶತಕದ ಸಾಧನೆ ಮಾಡಿದ್ದಾರೆ.
ಶತಕ ಸಿಡಿಸಿದ 3ನೇ ಭಾರತೀಯ
ಅಲ್ಲದೇ ಟೆಸ್ಟ್ ಕ್ರಿಕೆಟ್‌ನ ಸರಣಿಯೊಂದರಲ್ಲಿ 4 ಶತಕ ಸಿಡಿಸಿದ ಟೀಂ ಇಂಡಿಯಾದ 3ನೇ ಆಟಗಾರನಾಗಿಯೂ ಹೊರಹೊಮ್ಮಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.