ಮುಂಬೈ: ಟೀಂ ಇಂಡಿಯಾದ (Team India) ಯುವ ಆಟಗಾರ ಶುಭಮನ್ ಗಿಲ್ (Shubman Gill) ದ್ವಿಶತಕ (Double Hundred) ಬಾರಿಸಿ ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್ (Sachin Tendulkar), ವೀರೇಂದ್ರ ಸೆಹ್ವಾಗ್ (Virender Sehwag) ಅವರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
Advertisement
ಗಿಲ್ 7ನೇ ದ್ವಿಶತಕ ವೀರನಾಗಿ ದಿಗ್ಗಜರ ಪಟ್ಟಿಗೆ ಎಂಟ್ರಿಕೊಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದ 23 ವರ್ಷದ ಗಿಲ್ ಬರೋಬ್ಬರಿ 19 ಬೌಂಡರಿ, 9 ಭರ್ಜರಿ ಸಿಕ್ಸ್ ಸಹಿತ 149 ಎಸೆತಗಳಲ್ಲಿ 208 ರನ್ ಚಚ್ಚಿದರು. ಈ ಮೂಲಕ ಏಕದಿನ ಮಾದರಿ ಕ್ರಿಕೆಟ್‍ನಲ್ಲಿ ದ್ವಿಶತಕ ಸಿಡಿಸಿದ ಯುವ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಹ್ಯಾಟ್ರಿಕ್ ಸಿಕ್ಸ್ ಸಿಡಿಸಿ ದ್ವಿಶತಕ ಬಾರಿಸಿದ ಗಿಲ್
Advertisement
Advertisement
Advertisement
ಟೀಂ ಇಂಡಿಯಾದ ದ್ವಿಶತಕ ವೀರರು:
ಟೀಂ ಇಂಡಿಯಾ ಪರ ಈವರೆಗೆ 7 ದ್ವಿಶತಕ ದಾಖಲಾಗಿದೆ. ಈ ಪೈಕಿ ಟೀಂ ಇಂಡಿಯಾದ ಕ್ಯಾಪ್ಟನ್ ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ (Rohit Sharma) ಒಬ್ಬರೇ 3 ದ್ವಿಶತಕ ಬಾರಿಸಿದ್ದಾರೆ. ಉಳಿದಂತೆ ಸಚಿನ್, ಸೆಹ್ವಾಗ್, ಇಶಾನ್ ಕಿಶನ್ (Ishan Kishan) ಮತ್ತು ಶುಭಮನ್ ಗಿಲ್ ತಲಾ ಒಂದೊಂದು ದ್ವಿಶತಕ ಬಾರಿಸಿ ಸಾಧನೆ ಮಾಡಿದ್ದಾರೆ.
ಟೀಂ ಇಂಡಿಯಾ ಪರ ಮೊದಲ ದ್ವಿಶತಕ ಸಚಿನ್‍ರಿಂದ ಬಂತು. 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ 200 ರನ್ ಸಿಡಿಸಿದ್ದರು. 2ನೇ ದ್ವಿಶತಕ ಸೆಹ್ವಾಗ್ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬಾರಿಸಿದ್ದರು. ನಂತರ 2013, 2014 ಮತ್ತು 2017ರಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ ದ್ವಿಶತಕ ಸಿಡಿಸಿ ಮಿಂಚಿದ್ದರು. ಆ ಬಳಿಕ 2022ರಲ್ಲಿ ಬಾಂಗ್ಲಾದೇಶ ವಿರುದ್ಧ ಇಶಾನ್ ಕಿಶನ್ ದ್ವಿಶತಕ ಸಾಧನೆಗೈದಿದ್ದರು. ಇದೀಗ 2023ರಲ್ಲಿ ಗಿಲ್ ನ್ಯೂಜಿಲೆಂಡ್ ವಿರುದ್ಧ ದ್ವಿಶತಕ ಸಿಡಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ತರಬೇತುದಾರರಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ – ವಿನೇಶ್ ಫೋಗಟ್ ಗಂಭೀರ ಆರೋಪ
ದ್ವಿಶತಕಗಳ ಪೈಕಿ ರೋಹಿತ್ 264 ರನ್ ಸಿಡಿಸಿದ್ದರೆ, ಸೆಹ್ವಾಗ್ 219, ಇಶಾನ್ ಕಿಶನ್ 210, ಗಿಲ್ 208 ಮತ್ತು ಸಚಿನ್ ತೆಂಡೂಲ್ಕರ್ 200 ರನ್ ಬಾರಿಸಿ ಏಕದಿನ ಮಾದರಿ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಭಾರತೀಯ ಆಟಗಾರರಾಗಿಯೂ ಗುರುತಿಸಿಕೊಂಡಿದ್ದಾರೆ.
ಗಿಲ್ ಏಕದಿನ ಮಾದರಿ ಕ್ರಿಕೆಟ್‍ನಲ್ಲಿ ವೇಗವಾಗಿ ಕೇವಲ 19 ಇನ್ನಿಂಗ್ಸ್‌ಗಳಿಂದ 1,000 ರನ್ ಪೂರ್ತಿಗೊಳಿಸಿದ ಆಟಗಾರ ಎಂಬ ದಾಖಲೆ ಬರೆದರು. ಈ ಮೊದಲು ವಿರಾಟ್ ಕೊಹ್ಲಿ 24 ಇನ್ನಿಂಗ್ಸ್‌ಗಳಿಂದ ಸಾವಿರ ರನ್ ಪೂರೈಸಿದ ದಾಖಲೆ ಬರೆದಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k