ಲಂಡನ್: ವಿಶ್ವಟೆಸ್ಟ್ ಚಾಂಪಿಯನ್ ಶಿಪ್ (WTC) ಫೈನಲ್ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಟೀಂ ಇಂಡಿಯಾಕ್ಕೆ ಶೇ.100 ರಷ್ಟು ದಂಡ ವಿಧಿಸಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಲ್ಲದೇ ಟೀಂ ಇಂಡಿಯಾ (Team India) ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ (Shubman Gill) ಅವರಿಗೆ ಹೆಚ್ಚುವರಿಯಾಗಿ ಶೇ.15 ರಷ್ಟು ದಂಡ ವಿಧಿಸಿದೆ.
Advertisement
ಹೌದು. ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಭಾರತ ತಂಡಕ್ಕೆ ಡಬ್ಲ್ಯೂಟಿಸಿ ಫೈನಲ್ ಪಂದ್ಯದ ಶೇ.100 ರಷ್ಟು ದಂಡ ವಿಧಿಸಿದೆ. ಇನ್ನೂ ಅಂಪೈರ್‌ಗಳ ವಿರುದ್ಧ ಅಸಮಾಧಾನ ತೋರಿದ್ದಕ್ಕಾಗಿ ಶುಭಮನ್ ಗಿಲ್‌ಗೆ ಹೆಚ್ಚುವರಿಯಾಗಿ ಪಂದ್ಯದ 15% ಶುಲ್ಕವನ್ನು ದಂಡ ವಿಧಿಸಿರುವುದಾಗಿ ಐಸಿಸಿ ತಿಳಿಸಿದೆ. ಇದನ್ನೂ ಓದಿ: ಮೋದಿ ಕ್ರೀಡಾಂಗಣದಲ್ಲಿ ಇಂಡೋ ಪಾಕ್ ಕದನ – ರಣರೋಚಕ ಪಂದ್ಯಕ್ಕಾಗಿ ಕಾಯ್ತಿದ್ದಾರೆ ಫ್ಯಾನ್ಸ್
Advertisement
Advertisement
ನಿಗದಿತ ಸಮಯಕ್ಕೆ ಪೂರ್ಣಗೊಳಿಸಬೇಕಿದ್ದ ಓವರ್‌ಗಳಿಗಿಂತಲೂ ಭಾರತ 5 ಓವರ್ ಹಿಂದೆ ಬಿದ್ದ ಪರಿಣಾಮ ರೋಹಿತ್ (Rohit Sharma) ಪಡೆಗೆ 100% ದಂಡ ವಿಧಿಸಿದೆ. ಅತ್ತ ಆಸ್ಟ್ರೇಲಿಯಾ ಕೂಡ ನಾಲ್ಕು ಓವರ್‌ಗಳ ಕೊರತೆ ಎದುರಿಸಿದ್ದು, ಪಂದ್ಯದ 80% ಶುಲ್ಕವನ್ನು ದಂಡ ತೆರಬೇಕಾಗಿದೆ. ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22ರ ಪ್ರಕಾರ, ಯಾವುದೇ ತಂಡದ ಆಟಗಾರರು ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲವಾದ ಪ್ರತಿ ಓವರ್‌ಗೆ ಅವರ ಒಟ್ಟು ಪಂದ್ಯ ಶುಲ್ಕದ 20 ಪ್ರತಿಶತದಷ್ಟು ದಂಡ ವಿಧಿಸಬೇಕಾಗುತ್ತದೆ. ಅದರಂತೆಯೇ 1 ಓವರ್‌ಗಳಿಗೆ 20% ನಂತೆ 5 ಓವರ್‌ಗಳಿಗೆ ಭಾರತವು 100% ದಂಡ ತೆರಬೇಕಾಗಿದೆ. ಇದನ್ನೂ ಓದಿ: ಇಷ್ಟಕ್ಕೆ ಮುಗಿದಿಲ್ಲ – ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಸೋಲಿನ ಬಳಿಕ ಗಿಲ್ ಖಡಕ್ ರಿಯಾಕ್ಷನ್
Advertisement
ಗಿಲ್‌ಗೆ ಹೆಚ್ಚುವರಿ 15% ದಂಡ:
ಡಬ್ಲ್ಯೂಟಿಸಿ ಫೈನಲ್ ಪಂದ್ಯದ ವೇಳೆ ಅಂಪೈರ್‌ಗಳ ವಿರುದ್ಧ ಅಸಮಾಧಾನ ತೋರಿದ್ದಕ್ಕಾಗಿ ಶುಭಮನ್ ಗಿಲ್‌ಗೆ ಹೆಚ್ಚುವರಿಯಾಗಿ 15% ದಂಡ ವಿಧಿಸಲಾಗಿದೆ. ಆಸ್ಟ್ರೇಲಿಯಾ ವಿರುದ್ಧ 2ನೇ ಇನ್ನಿಂಗ್ಸ್‌ನಲ್ಲಿ ಶುಭಮನ್ ಗಿಲ್ ಅವರ ಕ್ಯಾಚ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಭಾರತ ಸೇರಿದಂತೆ ವಿದೇಶದ ಹಿರಿಯ ಕ್ರಿಕೆಟಿಗರು ಕೂಡ ಅದು ನಾಟೌಟ್ ಎಂದೇ ಅಭಿಪ್ರಾಯ ಹೊರಹಾಕಿದ್ದರು. ಆದ್ರೆ ಮೈದಾನದಲ್ಲಿ ಔಟ್ ಎಂದು ಅಂಪೈರ್ ತಿಳಿಸಿದ ನಿರ್ಧಾರದಿಂದ ಅಸಮಾಧಾನಗೊಂಡ ಗಿಲ್, ಮೈದಾನದಲ್ಲೇ ಸಿಟ್ಟನ್ನು ಹೊರಹಾಕಿದ್ದರು. ಇದು ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.7 ಉಲ್ಲಂಘನೆಯಾದ್ದರಿಂದ ಗಿಲ್ ಅವರಿಗೆ ಹೆಚ್ಚುವರಿ ದಂಡ ವಿಧಿಸಲಾಗಿದೆ. ಅಂದರೆ, ಗಿಲ್ ತಮ್ಮ ಪಂದ್ಯ ಶುಲ್ಕದ ಒಟ್ಟು 115% ಶುಲ್ಕವನ್ನು ದಂಡವಾಗಿ ತೆರಬೇಕಿದೆ ಎಂದು ಐಸಿಸಿ ಹೇಳಿದೆ.