ನವದೆಹಲಿ: ಪಸ್ತುತ ನಡೆಯುತ್ತಿರುವ 2023 ರ ಐಸಿಸಿ ವಿಶ್ವಕಪ್‌ನಲ್ಲಿ ಭಾರತದ ಬ್ಯಾಟರ್ ಶುಭಮನ್ ಗಿಲ್ (Shubman Gill) ವಿಶ್ವದ ನಂ. 1 ODI ಬ್ಯಾಟರ್ ಆಗಿ, ಬಾಬರ್ ಅಜಂರನ್ನು (Babar Azam) ಸಿಂಹಾಸನದಿಂದ ಕೆಳಗಿಳಿಸಿದ್ದಾರೆ.
ಬುಧವಾರ ಐಸಿಸಿ ಪುರುಷರ ODI ಬ್ಯಾಟಿಂಗ್ ಶ್ರೇಯಾಂಕ ಪಟ್ಟಿ ಪ್ರಕಟಿಸಿದ್ದು, ಮೆನ್ ಇನ್ ಬ್ಲೂ ಓಪನರ್ ಪಾಕಿಸ್ತಾನದ ನಾಯಕನ ಸ್ಥಾನವನ್ನು ಅಲಂಕರಿಸಿದ್ದಾರೆ. ಶುಭಮನ್ ಅವರು ಒಟ್ಟು 830 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ. ಆ ಮೂಲಕ ಬಾಬರ್ ಅವರನ್ನು ಹಿಂದಿಕ್ಕಿದ್ದಾರೆ. ಬಾಬರ್ 824 ರೇಟಿಂಗ್‌ನೊಂದಿಗೆ ನಂ. 2 ಸ್ಥಾನಕ್ಕೆ ಕುಸಿದಿದ್ದಾರೆ. 24 ವರ್ಷದ ಭಾರತದ ಆರಂಭಿಕ ಆಟಗಾರ ಗಿಲ್ ನವೆಂಬರ್ 2 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಉತ್ತಮ ಫಾರ್ಮ್ ಪ್ರದರ್ಶಿಸಿದರು. ಅದರೊಟ್ಟಿಗೆ ಭಾರತದ ಗೆಲುವಿಗೆ ಕೊಡುಗೆ ನೀಡಿದರು. ಇದನ್ನೂ ಓದಿ: ಪತಿಯ ಆಟ ನೋಡಲು ಬೆಂಗಳೂರಿಗೆ ಬಂದಿಳಿದ ಅನುಷ್ಕಾ
Advertisement
Advertisement
ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಯುವ ತಾರೆ ರೆಡ್-ಹಾಟ್ ಫಾರ್ಮ್‌ನಲ್ಲಿದ್ದಾರೆ. ರನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಈ ವರ್ಷ 26 ODIಗಳಲ್ಲಿ 63.00 ಸರಾಸರಿಯಲ್ಲಿ 1,149 ರನ್ ಗಳಿಸಿದ್ದಾರೆ. 103.72 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
Advertisement
ಬಲಗೈ ಆಟಗಾರ ಶ್ರೀಲಂಕಾ ವಿರುದ್ಧ 92 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 23 ರನ್ ಗಳಿಸಿದ್ದಾರೆ. ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಇದುವರೆಗೆ ಆರು ಇನ್ನಿಂಗ್ಸ್‌ಗಳಿಂದ ಗಿಲ್ 219 ರನ್ ಗಳಿಸಿದ್ದಾರೆ. ಪಾಕಿಸ್ತಾನದ ನಾಯಕ ವಿಶ್ವಕಪ್‌ನಲ್ಲಿ ಎಂಟು ಪಂದ್ಯಗಳಿಂದ 282 ರನ್‌ಗಳನ್ನು ಗಳಿಸಿದ್ದಾರೆ. ಕಳೆದ 2 ವರ್ಷಗಳಿಂದ ಬಾಬರ್ ಮೊದಲ ಸ್ಥಾನದಲ್ಲಿದ್ದರು. ಇದನ್ನೂ ಓದಿ: ಮ್ಯಾಕ್ಸಿ ಬೆಂಕಿ ಆಟಕ್ಕೆ ಹಲವು ದಾಖಲೆಗಳು ಭಸ್ಮ – ವಿಶ್ವದಾಖಲೆಯ ಪಟ್ಟಿ ಓದಿ
Advertisement
ಏತನ್ಮಧ್ಯೆ, ದ.ಆಫ್ರಿಕಾ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಮೂರನೇ ಸ್ಥಾನ ಪಡೆದಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಡೇವಿಡ್ ವಾರ್ನರ್ 5 ಮತ್ತು ಭಾರತ ತಂಡದ ಹಾಲಿ ಕ್ಯಾಪ್ಟನ್ ರೋಹಿತ್ ಶರ್ಮಾ 6 ನೇ ಸ್ಥಾನ ಪಡೆದಿದ್ದಾರೆ.
ಗಿಲ್ ತನ್ನ ಅತ್ಯುತ್ತಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಅಗ್ರಸ್ಥಾನ ಪಡೆದಿದ್ದಾರೆ. ಭಾರತದ ಬ್ಯಾಟರ್ ಶ್ರೇಯಸ್ ಅಯ್ಯರ್ ಏಕದಿನ ಬ್ಯಾಟರ್‌ಗಳ ಪಟ್ಟಿಯಲ್ಲಿ 18 ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಆರಂಭಿಕ ಆಟಗಾರ ಫಖರ್ ಜಮಾನ್ ಮೂರು ಸ್ಥಾನ ಏರಿಕೆಯಾಗಿದ್ದು, 11ನೇ ಸ್ಥಾನ ಮತ್ತು ಅಫ್ಘಾನಿಸ್ತಾನದ ಇಬ್ರಾಹಿಂ ಝದ್ರಾನ್ 12ನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ನೋವಿನಲ್ಲೂ ಮ್ಯಾಕ್ಸಿ ಬೆಂಕಿ ಆಟಕ್ಕೆ ಅಫ್ಘಾನ್ ಧೂಳಿಪಟ – ಸೆಮೀಸ್‌ಗೆ ಆಸೀಸ್ ಗ್ರ್ಯಾಂಡ್ ಎಂಟ್ರಿ