– ಸೂಪರ್ ಸಂಡೇ ಇಂದೋರ್‌ನಲ್ಲಿ ಭಾರತ-ಕಿವೀಸ್ ನಿರ್ಣಾಯಕ ಪಂದ್ಯ
ಇಂದೋರ್: ದೇಶದ ಅತ್ಯಂತ ಸ್ವಚ್ಛ ನಗರಿ ಎಂದೇ ಹೆಸರುವಾಸಿಯಾಗಿರುವ ಮಧ್ಯಪ್ರದೇಶದ ಇಂದೋರ್‌ನಲ್ಲಿ (Indore) ಕಲುಷಿತ ನೀರು (Contaminated Water) ಸೇವಿಸಿ ಕಳೆದ ಕೆಲ ದಿನಗಳಲ್ಲಿ 23 ಮಂದಿ ಸಾವನ್ನಪ್ಪಿದ್ದರು. ನೂರಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ದುರಂತದ ಬೆನ್ನಲ್ಲೇ ಟೀಂ ಇಂಡಿಯಾ ಆಟಗಾರರು ಮುನ್ನೆಚ್ಚರಿಕೆ ವಹಿಸಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದ್ದು, ಭಾನುವಾರ (ಜ.18) ಸರಣಿಯ ಕೊನೇ ಪಂದ್ಯ ನಡೆಯಲಿದೆ. ಈಗಾಗಲೇ ಇಂದೋರ್‌ನ ಪಂಚತಾರಾ ಹೋಟೆಲ್‌ನಲ್ಲಿ ತಂಗಿರುವ ಟೀಂ ಇಂಡಿಯಾ ಆಟಗಾರರು ಕಲುಷಿತ ನೀರಿನ ದುರಂತದ ಬಗ್ಗೆ ಎಚ್ಚೆತ್ತುಕೊಂಡಿದ್ದು, ಆರೋಗ್ಯದ ಕಡೆಗೆ ಗಮನಹರಿಸಿದೆ. ಇದನ್ನೂ ಓದಿ: ಇಂದೋರ್ ದುರಂತ – ಕಲುಷಿತ ನೀರು ಸೇವನೆಯಿಂದ ದೇಹದ ಮೇಲಾಗುವ ಪರಿಣಾಮಗಳೇನು?
ಟೀಂ ಇಂಡಿಯಾದ ನಾಯಕ ಶುಭಮನ್ ಗಿಲ್ 3 ಲಕ್ಷ ರೂ. ಮೌಲ್ಯದ ನೀರು ಶುದ್ಧೀಕರಣ ಯಂತ್ರವನ್ನು ಹೋಟೆಲ್‌ನಲ್ಲಿರುವ ತಮ್ಮ ರೂಮಿಗೆ ಕೊಠಡಿ ತರಿಸಿಕೊಂಡಿದ್ದಾರೆ. ಈ ಯಂತ್ರವು ಸಂಸ್ಕರಿಸಿದ ಮತ್ತು ಬಾಟಲ್ ನೀರನ್ನ ಮರು ಶುದ್ಧೀಕರಿಸುವ ಸಾಮೃರ್ಥ್ಯ ಹೊಂದಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: RCB ಅಭಿಮಾನಿಗಳಿಗೆ ಗುಡ್ ನ್ಯೂಸ್ – ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್
ಆದಾಗ್ಯೂ ಈ ಬಗ್ಗೆ ಟೀಂ ಇಂಡಿಯಾದ ಮಾಧ್ಯಮ ವ್ಯವಸ್ಥಾಪಕರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಈ ಬೆಳವಣಿಗೆಗೆ ಇಂದೋರ್‌ನಲ್ಲಿ ಉಂಟಾಗಿರುವ ಕಲುಷಿತ ನೀರಿನ ಬಿಕ್ಕಟ್ಟು ಕಾರಣವೇ? ಅಥವಾ ಪ್ರೋಟೋಕಾಲ್‌ನ ಭಾಗವಾಗಿದೆಯೇ ಎಂಬುದನ್ನ ಸ್ಪಷ್ಟಪಡಿಸಿಲ್ಲ. ಇದನ್ನೂ ಓದಿ: ʻನನಗೆ ಸೂರ್ಯಕುಮಾರ್ ತುಂಬಾ ಮೆಸೇಜ್ ಕಳಿಸ್ತಿದ್ದʼ ಎಂದಿದ್ದ ನಟಿ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ!



