Bengaluru CityCinemaDistrictsKarnatakaLatestMain PostSandalwood

800 ವರ್ಷಗಳ ಪರಂಪರೆಯ ಮನೆ ಫೋಟೋ ಶೇರ್ ಮಾಡಿದ ಶುಭಾ

Advertisements

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶುಭಾ ಪೂಂಜಾ 800 ವರ್ಷ ಪರಂಪರೆ ಹೊಂದಿರುವ ತಮ್ಮ ಮನೆಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಶುಭಾಪೂಂಜಾ ತಮ್ಮ ಬಹುಕಾಲದ ಗೆಳೆಯ ಸುಮಂತ್ ಜೊತೆ ತಮ್ಮ ಪ್ರೀತಿಯ ಊರು ಮಜಲಬೆಟ್ಟುಬೀಡುವಿನಲ್ಲಿರುವ ಮನೆಯಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮದುವೆಯ ಕೆಲವೊಂದಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಾ ಸಿಹಿ ಕ್ಷಣಗಳನ್ನು ಮೆಲುಕುಹಾಕುತ್ತಿರುತ್ತಾರೆ. ಇದನ್ನೂ ಓದಿ: ಒಂಟಿಯಾಗಿರುವುದನ್ನು ನಿಜಕ್ಕೂ ನಾನು ದ್ವೇಷಿಸುತ್ತೇನೆ: ಖುಷ್ಬೂ

 

ಈ ಮಧ್ಯೆ ಶುಭಾ ಪೂಂಜಾ ತಾವು ವಿವಾಹವಾದ ಮನೆಯ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತಮ್ಮ ಮನೆಯ ಕುರಿತ ಮಾಹಿತಿಯನ್ನು ನೀಡಿದ್ದಾರೆ. ನನ್ನ ಮನೆ ಮಜಲಬೆಟ್ಟುಬೀಡು. ನಾನು ಮದುವೆಯಾದ ಮನೆಯನ್ನು ತೋರಿಸುವಂತೆ ಸಾಕಷ್ಟು ಜನ ಕೇಳಿದ್ದರು. ಇದು ನನ್ನ ಅಜ್ಜಿಯ ಮನೆ. ಇದು 800 ವರ್ಷಗಳ ಪರಂಪರೆ ಹೊಂದಿರುವ ಮನೆಯಾಗಿದೆ. ಈ ಮನೆಯಲ್ಲಿಯೇ ನಾನು ಬೆಳೆದಿದ್ದು, ನಾನು ಯಾವಾಗಲೂ ಈ ಮನೆಯಲ್ಲಿಯೇ ಮದುವೆಯಾಗಬೇಕೆಂದು ಅಂದುಕೊಂಡಿದ್ದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ ಶುಭಾ ಪೂಂಜಾ

 

View this post on Instagram

 

A post shared by shubha Poonja . (@shubhapoonja)

ಹಲವು ವರ್ಷಗಳಿಂದ ಸಮಾಜ ಸೇವಕ ಸುಮಂತ್ ಅವರನ್ನು ಪ್ರೀತಿಸುತ್ತಿದ್ದ ಶುಭಾ, 2021 ಡಿಸೆಂಬರ್ ಅಥವಾ 2022ರ ಜನವರಿ ಮೊದಲ ವಾರದಲ್ಲಿ ಮದುವೆ ಆಗುವುದಾಗಿ ಹೇಳಿಕೊಂಡಿದ್ದರು. ಸುಮಂತ್ ಅವರು ಉಡುಪಿಯಲ್ಲಿರುವುದು ಹಾಗೂ ನನ್ನ ಕುಟುಂಬಸ್ಥರು ಮಂಗಳೂರಿನಲ್ಲಿರುವ ಕಾರಣ ನಾವು ಅಲ್ಲಿಯೇ ಮದುವೆ ಆಗುತ್ತೇವೆ ಎಂದು ಈ ಹಿಂದೆ ಶುಭಾ ಹೇಳಿದ್ದರು. ಅದರಂತೆ ಜನವರಿ 5 ರಂದು ಶುಭಾ ಪೂಂಜಾ ಸುಮಂತ್ ಕೈಹಿಡಿದಿದ್ದು, ಮದುವೆಯ ಕೆಲವೊಂದಷ್ಟು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

Leave a Reply

Your email address will not be published.

Back to top button