ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಮನೆಮಾತಾಗಿದ್ದ ಸ್ಪರ್ಧಿಗಳು ಎಂದರೆ ಅದು ಶುಭಾ ಪೂಂಜಾ ಹಾಗೂ ಮಂಜು. ದೊಡ್ಮನೆಯಲ್ಲಿ ಸದಾ ಪ್ರೇಕ್ಷಕರಿಗೆ ನಗುವಿನ ಕಚಗುಳಿ ನೀಡುತ್ತಿದ್ದ ಶುಭಾ ಪೂಂಜಾ ಮಂಜು ಹಾಗೂ ರಾಜೀವ್ ಜೊತೆಗೆ ಪಾರ್ಟಿ ಮಾಡಿದ್ದಾರೆ.
ತಮ್ಮ ಚೇಷ್ಟೆ ಮತ್ತು ತಮಾಷೆ ಮೂಲಕ ಸದಾ ಮನೆಮಂದಿಯನ್ನೆಲ್ಲಾ ಸಿಕ್ಕಾಪಟ್ಟೆ ಗೋಳು ಹೊಯ್ದುಕೊಳ್ಳುತ್ತಿದ್ದ ಶುಭಾ ಪೂಂಜಾ ತಮ್ಮ ಪ್ರೀತಿ ಪಾತ್ರರಿಗೆ ಒಂದೊಂದು ಕ್ಯೂಟ್ ಕ್ಯೂಟ್ ಹೆಸರಿಟ್ಟಿದ್ದರು. ಅದರಲ್ಲಿ ಶುಭಾ ಪೂಂಜಾಗೆ ಬಹಳ ಹತ್ತಿರವಾಗಿದ್ದ ರಾಜೀವ್‍ರನ್ನು ಗುಡ್ಡು ಅಂತ ಮತ್ತು ಮಂಜುರನ್ನು ಚಂಪೂ ಎಂದು ಕರೆಯುತ್ತಿದ್ದರು. ಅದೇ ರೀತಿ ಶುಭಾ ಪೂಂಜಾಗೆ ಮಂಜು ಕೂಡ ಪ್ರೀತಿಯಿಂದ ಗುಂಡಮ್ಮ ಎಂದು ಕರೆಯುತ್ತಿದ್ದರು. ಇದನ್ನೂ ಓದಿ: ನಾನು ಶಾಲೆಗೆ ಹೋಗ್ಬೇಕು – ಅಫ್ಘಾನ್ ಬಾಲಕಿಯ ಖಡಕ್ ಭಾಷಣ
ಇದೀಗ ಬಿಗ್‍ಬಾಸ್ ಕಾರ್ಯಕ್ರಮ ಮುಕ್ತಾಯದ ನಂತರ ಹಲವು ದಿನಗಳ ಬಳಿಕ ಶುಭಾ ಪೂಂಜಾ, ಮಂಜು ಹಾಗೂ ರಾಜೀವ್ ಒಟ್ಟಿಗೆ ಸೇರಿ ಪಾರ್ಟಿ ಮಾಡಿದ್ದಾರೆ. ವಿಶೇಷವೆಂದರೆ ಈ ಪಾರ್ಟಿಯಲ್ಲಿ ಶುಭಾ ಪೂಂಜಾ ಭಾವಿ ಪತಿ ಸುಮಂತ್, ರಾಜೀವ್ ಪತ್ನಿ ಮತ್ತು ಮಜಾ ಭಾರತ ಕಾರ್ಯಕ್ರಮದ ಕಲಾವಿದರೂ ಕೂಡ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಮೂರು ತಿಂಗಳ ಹಿಂದೆ ಹೂತಿದ್ದ ಶವವನ್ನೇ ಹೊತ್ತೊಯ್ದ ಕಿಡಿಗೇಡಿಗಳು- ವಾಮಾಚಾರದ ಶಂಕೆ
View this post on Instagram
ಸದ್ಯ ಪಾರ್ಟಿಯ ಕೆಲವೊಂದು ಫೋಟೋವನ್ನು ಶುಭಾ ಪೂಂಜಾ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಮಂಜು ಕೂಡ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಫೋಟೋಗಳಿಗೆ ಶುಭಾ ಫ್ರೆಂಡ್ ಶಿಪ್ ಹಾಡುಗಳನ್ನು ಸೆಟ್ ಮಾಡಿಕೊಂಡು ಹಂಚಿಕೊಂಡಿದ್ದಾರೆ. ಒಟ್ಟಾರೆ ಮೂವರು ಒಟ್ಟಾಗಿ ಸೇರಿ ಪಾರ್ಟಿ ಮಾಡಿ ಸಖತ್ ಎಂಜಾಯ್ ಮಾಡಿದ್ದಾರೆ ಎಂದೇ ಹೇಳಬಹುದು.