ಬೆಂಗಳೂರು: ಬಿಗ್ಬಾಸ್ ಸೀಸನ್-8ರ ಸ್ಪರ್ಧಿಗಳಾದ ನಟಿ ಶುಭಾ ಪೂಂಜಾ ಹಾಗೂ ಮಂಜು ಪಾವಗಡ ಟ್ರಿಪ್ ಹೊಡೆಯುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
Advertisement
ಬಿಗ್ಬಾಸ್ ಸೀಸನ್-8ರಲ್ಲಿ ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸಿದ್ದ ಇವರು ದೊಡ್ಮನೆಯಲ್ಲಿ ಎಷ್ಟು ಒಳ್ಳೆಯ ಸ್ನೇಹಿತರಾಗಿದ್ದರೋ ಹಾಗೆಯೇ ಕಾರ್ಯಕ್ರಮ ಮುಗಿದ ನಂತರ ಕೂಡ ಅಷ್ಟೇ ಬೆಸ್ಟ್ ಫ್ರೆಂಡ್ಸ್ ಈಗಲೂ ಇದ್ದಾರೆ. ಈ ಹಿಂದೆ ಕಿಟ್ಟಿ ಪಾರ್ಟಿ, ಬರ್ತ್ಡೇ ಪಾರ್ಟಿ, ಹಬ್ಬ ಸಮಾರಂಭಗಳಲ್ಲಿ ಆಗಾಗ ಭೇಟಿಯಾಗುತ್ತಿದ್ದ ಶುಭಾ ಪೂಂಜಾ ಹಾಗೂ ಮಂಜು ಪಾವಗಡ ಇದೀಗ ಜಾಲಿಯಾಗಿ ಟ್ರಿಪ್ ಹೊಡೆಯುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಪುತ್ಥಳಿಗೆ ಮುತ್ತಿಟ್ಟು ರಾಘವೇಂದ್ರ ರಾಜ್ಕುಮಾರ್ ಭಾವುಕ
Advertisement
Advertisement
ಇಂದು ಶುಭಾ ಪೂಂಜಾ, ಅವರ ಭಾವಿ ಪತಿ ಸುಮಂತ್, ಮಂಜು ಪಾವಗಡ, ಹಾಸ್ಯ ಕಲಾವಿದ ರಾಘವೇಂದ್ರ ಅವರು ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇನ್ನೂ ಈ ಫೋಟೋವನ್ನು ಶುಭಾ ಪೂಂಜಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದು, ಆಶೀರ್ವಾದ ಪಡೆದುಕೊಳ್ಳಲು ಶಿರಸಿಯ ಮಾರಿಕಾಂಬಾ ದೇವಾಲಯಕ್ಕೆ ಆಗಮಿಸಿದ್ದೇವೆ. ಜೊತೆಗೆ ಯಾಣ, ಕುಮಟಾ ಮತ್ತು ಗೋಕರ್ಣಕ್ಕೆ ಒಂದು ಸಣ್ಣ ಪ್ರವಾಸ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್.ನಾರಾಯಣ್ ಪುತ್ರ ಪಂಕಜ್
Advertisement
View this post on Instagram
ಇಷ್ಟೇ ಅಲ್ಲದೇ ಶುಭಾ ಪೂಂಜಾ ಕುದುರೆ ಸವಾರಿ ಮಾಡುತ್ತಿರುವ, ಸಮಂತ್, ಮಂಜು ಹಾಗೂ ರಾಘವೇಂದ್ರ ಅವರೊಟ್ಟಿಗೆ ಸಮುದ್ರದಲ್ಲಿ ಬೋಟ್ನಲ್ಲಿ ಹೋಗುತ್ತಿರುವ ಫೋಟೋಗಳನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.