ಮುಂಬೈ: ಕಾಲಿವುಡ್ ನಟ ಕಮಲ್ ಹಾಸನ್ ಪುತ್ರಿ ನಟಿ ಶೃತಿ ಹಾಸನ್ ತಮ್ಮ ಬಾಯ್ ಫ್ರೆಂಡ್ ಸಂತನು ಜೊತೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.
Advertisement
ಸದಾ ಡೇಟಿಂಗ್, ಔಟಿಂಗ್, ಶಾಪಿಂಗ್, ಪಾರ್ಟಿ ಎಂದು ಸುತ್ತಾಡುತ್ತಾ ಬಾಯ್ ಫ್ರೆಂಡ್ ಸಂತನು ಜೊತೆ ಸಖತ್ ಎಂಜಾಯ್ ಮಾಡುತ್ತಿರುವ ಶೃತಿ ಹಾಸನ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಅ.2ರಂದು ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ ನಿರ್ಣಾಯಕ ಪಾದಾಯಾತ್ರೆ- ಎಸ್ಆರ್ ಪಾಟೀಲ್
Advertisement
Advertisement
ಹೌದು ಶೃತಿ ಹಾಸನ್ ಹಾಗೂ ಸಂತನು ಮುಂಬೈನ ಬಾಸ್ತಿನದ ಬಳಿ ಬಾಂದ್ರದಲ್ಲಿ ಡಿನ್ನರ್ಗೆ ಬಂದಿದ್ದಾರೆ. ಈ ವೇಳೆ ಕಾರಿನಿಂದ ಇಳಿದ ಶೃತಿ ಹಾಸನ್ ಬ್ಲಾಕ್ ಆ್ಯಂಡ್ ಬ್ಲಾಕ್ ಕಲರ್ ಡ್ರೆಸ್ ತೊಟ್ಟು ಮಿಂಚಿದ್ದರೆ, ಸಂತನು ಬ್ಲಾಕ್ ಕಲರ್ ಪ್ಯಾಂಟ್ ಹಾಗೂ ಟೀ ಶರ್ಟ್ ಧರಿಸಿದ್ದರು. ಇದನ್ನೂ ಓದಿ: ಅಡವಿಡುವಾಗ ಅಸಲಿ, ತೆಗೆಯುವಾಗ ನಕಲಿ – ಗ್ರಾಮಸ್ಥರಿಂದ ಬ್ಯಾಂಕಿಗೆ ಮುತ್ತಿಗೆ
Advertisement
ಕೈಯಲ್ಲಿ ವ್ಯಾನಿಟಿ ಬ್ಯಾಗ್ ಹಿಡಿದು ಸಂತುನು ಜೊತೆ ಬಂದ ಶೃತಿ ಹಾಸನ್ ರೆಸ್ಟೋರೆಂಟ್ ಮುಂಭಾಗ ಕ್ಯಾಮೆರಾಗೆ ತಮ್ಮ ಬಾಯ್ ಫ್ರೆಂಡ್ ಜೊತೆ ಪೋಸ್ ನೀಡಿದ್ದಾರೆ. ಅಲ್ಲದೇ ಕ್ಯಾಮೆರಾದತ್ತ ಕೈ ಬೀಸಿ ಮುಂದೆ ಹೋಗುತ್ತಿದ್ದ ಶೃತಿ ಹಾಸನ್ ಮತ್ತೆ ಸಿಂಗಲ್ ಆಗಿ ನಿಂತು ಸೊಂಟದ ಮೇಲೆ ಕೈ ಇರಿಸಿಕೊಂಡು ಫೋಟೋಗೆ ಪೋಸ್ ನೀಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತನ್ನಿ: ಪೇಜಾವರ ಶ್ರೀ ಒತ್ತಾಯ
ನಂತರ ಕೈ ಮುಗಿದು ಧನ್ಯವಾದ ತಿಳಿಸಿ ಸಂತನು ಅವರೊಂದಿಗೆ ರೆಸ್ಟೋರೆಂಟ್ ಒಳಗೆ ಹೋದರು. ಸಂತನು ಹಜರಿಕ್ ಒಬ್ಬ ಡೂಡಲ್ ಆರ್ಟಿಸ್ಟ್ ಮತ್ತು ಚಿತ್ರಗಾರ ಆಗಿದ್ದು, ಶೃತಿ ಹಲವು ತಿಂಗಳಿನಿಂದ ಡೇಟಿಂಗ್ನಲ್ಲಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದ ಶೃತಿ ಹಾಸನ್ ಈ ವೇಳೆ ಬಾಯ್ ಫ್ರೆಂಡ್ ಸಂತನುಗೆ ಇಟ್ಟಿದ್ದ ಆಲೂಗಡ್ಡೆ ಎಂಬ ನಿಕ್ ನೇಮ್ ಅನ್ನು ರಿವೀಲ್ ಮಾಡಿದ್ದರು.