ನಟಿ ಶ್ರುತಿ ಹಾಸನ್ ಬ್ರೇಕಪ್ ಮಾಡಿಕೊಂಡ ಸುದ್ದಿ ತಮಿಳು ಸಿನಿಮಾ ರಂಗದಲ್ಲಿ ಗಿರಕಿ ಹೊಡೆಯುತ್ತಿದೆ. ಇದು ನಿಜ ಎಂದು ಅವರು ಆಪ್ತರು ಮಾತಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಶ್ರುತಿ ಬೆನ್ನ ಮೇಲೆ (Tattoo) ಮತ್ತೊಂದು ಟ್ಯಾಟೋ ಹಾಕಿಸಿಕೊಳ್ಳಲು ಮುಂದಾಗಿದ್ದಾರಂತೆ. ಇದು ನೋವು ಮರೆಯಲು ಮಾಡಿರುವ ಪ್ಲ್ಯಾನ್ ಎಂದು ಹೇಳಲಾಗುತ್ತಿದೆ.
ಶಂತನು ಜೊತೆ ಚೆನ್ನಾಗಿಯೇ ಇದ್ದ ಶ್ರುತಿ ಈಗ ಸಡನ್ನಾಗಿ ಬ್ರೇಕ್ ಅಪ್ ಮಾಡಿಕೊಳ್ಳಲು ಕಾರಣವೇನು ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಮದುವೆ (Marriage) ವಿಚಾರ ಎಂದು ಗೊತ್ತಾಗಿದೆ. ಶಂತನು ಮತ್ತು ಶ್ರುತಿ ಮಧ್ಯೆ ಮದುವೆ ವಿಚಾರದಲ್ಲಿ ಗಲಾಟೆ ಕಾರಣದಿಂದಾಗಿ ಇಬ್ಬರೂ ದೂರವಾಗಿದ್ದಾರೆ ಎನ್ನುವುದು ಸದ್ಯದ ವರ್ತಮಾನ.
ಮೂರು ವರ್ಷಗಳ ಹಿಂದೆಯಷ್ಟೇ ಶ್ರುತಿ ಅವರು ಮೈಕಲ್ ಕೊರ್ಸಲ್ ಎನ್ನುವವರ ಜೊತೆ ಓಡಾಡುತ್ತಿದ್ದರು. ಅವರೇ ತಮ್ಮ ಬಾಯ್ ಫ್ರೆಂಡ್ ಅಂತಾನೂ ಪರಿಚಯಿಸಿದ್ದರು. ಆನಂತರ ಅವರೊಂದಿಗೆ ಅಂತರ ಬಯಸಿದರು. ನಂತರ ಶಂತನು ಹಜಾರಿಕಾ ಜೊತೆ ಸ್ನೇಹ ಬೆಳೆಸಿದ್ದರು.
ಶ್ರುತಿ ಹಾಸನ್ ಮತ್ತು ಶಂತನು ಒಂದು ರೀತಿಯಲ್ಲಿ ಸಹ ಜೀವನವನ್ನೇ ನಡೆಸುತ್ತಿದ್ದರು. ಅದನ್ನು ಅವರೂ ಒಪ್ಪಿಕೊಂಡಿದ್ದರು. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಅವರೊಂದಿಗೂ ಶ್ರುತಿ ಸ್ನೇಹವನ್ನು ಕಡಿದುಕೊಂಡಿದ್ದಾರಂತೆ (Love Break Up). ಅದಕ್ಕೆ ಸಾಕ್ಷಿ ಎನ್ನುವಂತೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಿಂದ ಜೊತೆಗಿರುವ ಫೋಟೋ ಡಿಲಿಟ್ ಮಾಡಿದ್ದಾರೆ. ಮತ್ತು ಸೋಷಿಯಲ್ ಮೀಡಿಯಾ ಖಾತೆಯಿಂದ ಅನ್ ಫ್ರೆಂಡ್ ಮಾಡಿಕೊಂಡಿದ್ದಾರೆ.
ಈ ಹಿಂದೆ ಶ್ರುತಿ ಹಾಸನ್ (Shruti Haasan) ಶಾಂತನೂ ಹಜಾರಿಕಾ ಜೊತೆ ಡೇಟ್ ಮಾಡ್ತಿರೋ ಬಗ್ಗೆ ರಿವೀಲ್ ಮಾಡಿದ್ದರು. ಇಬ್ಬರೂ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು. ಈ ನಡುವೆ ಬಾಯ್‌ಫ್ರೆಂಡ್ (Boyfriend) ಬಗ್ಗೆ ಸ್ವೀಟ್ ಆಗಿ ದೂರು ಹಂಚಿಕೊಂಡಿದ್ದರು. ತನ್ನ ಪಾರ್ಟನರ್ ಅದೆಷ್ಟರ ಮಟ್ಟಿಗೆ ಅನ್‌ರೊಮ್ಯಾಂಟಿಕ್ ಎಂದು ಕಂಪ್ಲೇಟ್‌ವೊಂದನ್ನ ಎಲ್ಲರ ಮುಂದಿಟ್ಟಿದ್ದರು.
ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶಾಂತನು (Shantanu Hazarika) ಜೊತಗಿನ ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಗೆಳೆಯ ಶಾಂತನು ಅವರನ್ನು ಮೋಸ್ಟ್ ಅನ್‌ರೊಮ್ಯಾಂಟಿಕ್ ವ್ಯಕ್ತಿ ಎಂದು ಕರೆದಿದ್ದಾರೆ. ಶ್ರುತಿ ಹಾಸನ್ ಭಾನುವಾರ (ಜುಲೈ 2)ರಂದು ಹೂವುಗಳನ್ನು ಆರ್ಡರ್ ಮಾಡಿಕೊಂಡಿದ್ದರು. ಇದನ್ನು ಶಾಂತನು ತೆಗೆದುಕೊಂಡಿದ್ದಾರೆ. ಇದಕ್ಕೆ ಶ್ರುತಿ ಹಾಸನ್ ಕೋಪಗೊಂಡಿದ್ದರು. ನೀನು ಮೋಸ್ಟ್ ಅನ್‌ರೊಮ್ಯಾಂಟಿಕ್ ವ್ಯಕ್ತಿ. ನನಗಾಗಿ ನೀನು ಎಂದಿಗೂ ಹೂವುಗಳನ್ನು ತಂದುಕೊಡಲಿಲ್ಲ. ಅದಕ್ಕಾಗಿಯೇ ನಾನು ಹೂವುಗಳನ್ನು ಆರ್ಡರ್ ಮಾಡಿಕೊಂಡೆ ಎಂದು ಬರೆದುಕೊಂಡಿದ್ದರು. ಆದರೆ, ಈಗ ಇಬ್ಬರೂ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದೆ.