ಕನ್ನಡ ಸಿನಿಮಾ ಸೆಟ್ಟೇರುವ ಮೊದಲೇ ಬಾಲಿವುಡ್‍ಗೆ ಹಾರಿದ ಶೃತಿ ಪ್ರಕಾಶ್

Public TV
1 Min Read
Shruthi Prakash 2

ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಶೃತಿ ಪ್ರಕಾಶ್‍ಗೆ ಸಿನಿಮಾಗಳ ಅವಕಾಶಗಳು ಹುಡುಕಿಕೊಂಡು ಬಂದಿದೆ. ಕನ್ನಡದಲ್ಲಿ ಸಿನಿಮಾವೊಂದಕ್ಕೆ ಸಹಿ ಹಾಕಿದ ಶೃತಿ ಆ ಸಿನಿಮಾ ಸೆಟ್ಟೇರುವ ಮೊದಲೇ ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಕನ್ನಡದಲ್ಲಿ ಹೊಸಬರು ಸೇರಿ ಮಾಡುತ್ತಿರುವ ‘ಲಂಡನ್ ನಲ್ಲಿ ಲಂಬೋದರ’ ಚಿತ್ರದಲ್ಲಿ ಶೃತಿ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶೃತಿ ನಟಿಸುವ ಮೊದಲೇ ಬಾಲಿವುಡ್‍ಗೆ ಎಂಟ್ರಿ ನೀಡಿದ್ದಾರೆ. ಈ ಹಿಂದೆ ಶೃತಿ ಪ್ರಕಾಶ್ ಬಾಲಿವುಡ್‍ನಲ್ಲಿ ಸಾಕಷ್ಟು ಆಲ್ಬಂ ಹಾಡುಗಳನ್ನು ಹಾಡಿ, ಹಿಂದಿ ಕಿರುತರೆಯಲ್ಲಿ ಮಿಂಚಿದ್ದರು.

Shruthi Prakash 1

ಈಗ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಶೃತಿ ಮಿಂಚುತ್ತಿದ್ದಾರೆ. ಕನ್ನಡದ ಮೊದಲ ಸಿನಿಮಾ ಪ್ರಾರಂಭವಾಗುತ್ತಲೇ ಬಾಲಿವುಡ್ ಚಿತ್ರ ಕೂಡ ಸೆಟ್ಟೇರುತ್ತಿದೆ ಎಂದು ಶೃತಿ ಟ್ವಿಟ್ಟರಿನಲ್ಲಿ ತಮ್ಮ ಬಾಲಿವುಡ್ ಚಿತ್ರದ ಬಗ್ಗೆ ಟ್ವೀಟ್ ಮಾಡಿ ವಿಚಾರ ತಿಳಿಸಿದ್ದಾರೆ.

ಶೃತಿ ನಟಿಸುತ್ತಿರುವ ಈ ಚಿತ್ರಕ್ಕೆ ಗುಮ್ನಾಮ್ ಎಂದು ಹೆಸರಿಟ್ಟಿದ್ದು, ಈ ಸಿನಿಮಾದಲ್ಲಿ ಶೃತಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರದ ಬಗ್ಗೆ ಶೃತಿ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಲಂಡನ್‍ನಲ್ಲಿ ಲಂಬೋದರ ಚಿತ್ರದಲ್ಲಿ ನಟಿಸುತ್ತಿರುವ ಶೃತಿ ಇತ್ತೀಚಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಅಭಿನಯಿಸಿ ಒಂದು ಹಾಡನ್ನು ಕೂಡ ಹಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *