ಚಂದನವನದ ಚೆಂದದ ನಟಿ ಶ್ರುತಿ ಕೃಷ್ಣ (Shruthi Krishna) ತಮ್ಮ ಜನ್ಮದಿನದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಣ್ಣದ ಲೋಕಕ್ಕೆ ಶ್ರುತಿ ಮಗಳು ಗೌರಿ (Gowri) ಎಂಟ್ರಿ ಕೊಡ್ತಿದ್ದಾರೆ. ಈ ಬಗ್ಗೆ ನಟಿ ಶ್ರುತಿ ಮಾಹಿತಿ ನೀಡಿದ್ದಾರೆ.
90ರ ದಶಕದಿಂದ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ಶ್ರುತಿ ಅವರಿಗೆ ಈಗಲೂ ಚಿತ್ರರಂಗದಲ್ಲಿ ಬೇಡಿಕೆಯಿದೆ. ನಟಿಯಾಗಿ, ರಿಯಾಲಿಟಿ ಶೋಗಳ ಜಡ್ಜ್ ಆಗಿ ಹೈಲೆಟ್ ಆಗುತ್ತಿದ್ದಾರೆ. ಅವರ ಮಗಳು ಗೌರಿ (Gowri) ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ರೀಲ್ಸ್, ಹಾಡುಗಾರಿಕೆ ಮೂಲಕ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:‘ಜವಾನ್ 2’ ಜೊತೆ ಮತ್ತೊಂದು ಸರ್ ಪ್ರೈಸ್ ನೀಡಿದ ನಿರ್ದೇಶಕ ಅಟ್ಲಿ
ಶ್ರುತಿಗೆ, ಪ್ರತಿ ಸಲ ಮಗಳು ಚಿತ್ರರಂಗಕ್ಕೆ (Films) ಬರುತ್ತಾರಾ ಎಂಬ ಪ್ರಶ್ನೆ ಎದುರಾಗುತ್ತಿತ್ತು. ಇದೀಗ ಈ ಪ್ರಶ್ನೆಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಶ್ರುತಿ ಅವರ ಜನ್ಮದಂದು, ತಮ್ಮ ಮಗಳು ಇಂಡಸ್ಟ್ರಿಗೆ ನಟಿಯಾಗಿ ಬರುವ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ. ಒಂದೂವರೆ ತಿಂಗಳ ಹಿಂದಷ್ಟೇ ನನ್ನ ಮಗಳು ನಟಿಸೋದಾಗಿ ಹೇಳಿದ್ದಾಳೆ. ನಾನು ಒಪ್ಪಿಗೆ ನೀಡಿದ್ದೇನೆ ಎಂದು ತಿಳಿಸಿದ್ದರು.
ನಟನೆಗೆ ಬೇಕಾಗಿರುವ ತಯಾರಿ ಮಾಡಿಕೊಂಡೇ ಮಗಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾಳೆ ಎಂದು ನಟಿ ಮಾಹಿತಿ ನೀಡಿದ್ದಾರೆ. ಗೌರಿಗೆ ಒಳ್ಳೆಯ ಕಥೆಗಳು ಅರಸಿ ಬರುತ್ತಿವೆ. ಬೇರೆಯವರ ಬ್ಯಾನರ್‌ನಲ್ಲಿ ಲಾಂಚ್ ಆಗುತ್ತಾಳೆ ಎಂದು ನಟಿ ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಅಕ್ಕನ ಮಗಳು ಬಣ್ಣದ ಲೋಕಕ್ಕೆ ಬರುವ ಬಗ್ಗೆ ಸಿಹಿಸುದ್ದಿ ನೀಡಿದ್ದರು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]