ಬೆಂಗಳೂರು: ಸ್ಯಾಂಡಲ್ವುಡ್ ನ `ಬ್ಯೂಟಿಫುಲ್ ಮನಸಿನ’ ಬ್ಯೂಟಿಫುಲ್ ಹುಡುಗಿ ಶೃತಿ ಹರಿಹರನ್ ರಹಸ್ಯವಾಗಿ ಮದುವೆ ಆಗಿದ್ದಾರೆ ಎಂಬ ಗಾಳಿಸುದ್ದಿಯೊಂದು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರೋ ನಟಿ ಶೃತಿ ಹರಿಹರನ್, ನಾನು ಎಲ್ಲಿಯೂ ರಹಸ್ಯವಾಗಿ ಮದುವೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನನಗೆ ಈ ವಿಷಯ ಗೊತ್ತಿರಲಿಲ್ಲ. ಇಂದು ಬೆಳಗ್ಗೆ ನನ್ನ ಮದುವೆ ವಿಷಯವಾಗಿ ವದಂತಿ ಹಬ್ಬಿರುವ ಬಗ್ಗೆ ಗೊತ್ತಾಗಿದೆ. ಮದುವೆ ಆಗುತ್ತೇನೆ, ಈ ಸಂಬಂಧ ನಮ್ಮ ಕುಟುಂಬಸ್ಥರಲ್ಲಿ ಮಾತುಕತೆಯೂ ಸಹ ನಡೆದಿದೆ. ಜೀವನದಲ್ಲಿ ಎಲ್ಲರೂ ಮದುವೆ ಆಗ್ತಾರೆ. ನಾನು ಸಹ ಮದುವೆ ಮಾಡಿಕೊಳ್ಳುತ್ತೇನೆ. ಆದರೆ ನಾನು ಎಲ್ಲರಿಗೂ ತಿಳಿಸಿಯೇ ಮದುವೆ ಆಗುತ್ತೇನೆ. ಸದ್ಯ ನಾನು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದೇನೆ ಅಂತ ಹೇಳಿದ್ರು.
Advertisement
ಶೃತಿ ಅವರು ಡ್ಯಾನ್ಸ್ ಮಾಸ್ಟರ್ ರೊಂದಿಗೆ ವಿವಾಹ ಮಾಡಿಕೊಂಡಿದ್ದಾರೆ ಎಂಬ ವದಂತಿಗೆ ಪ್ರತಿಕ್ರಿಯಿಸಿದ ಅವರು, ಹಾಗೇನಿಲ್ಲ ನಾನು ಮದುವೆ ಆಗುವವರು ಡ್ಯಾನ್ಸ್ ಮಾಸ್ಟರ್ ಅಲ್ಲ. ನಾನು ಇಂಡಸ್ಟ್ರಿಗೆ ಬಂದು ಆರು ವರ್ಷಗಳಾಯ್ತು. ನನಗೆ ಅವರು ಅದಕ್ಕಿಂತ ಮೊದಲಿನಿಂದಲೂ ಪರಿಚಯ ಎಂದು ಹೇಳಿದರು.
Advertisement
Advertisement
Advertisement