ಅದೃಷ್ಟ, ಸಂತೋಷ ಎರಡೂ ಅವಳ ಸ್ನೇಹಿತರಾಗಿರಲಿ – ಮುದ್ದಿನ ಮಗಳಿಗೆ ಶ್ರಿಯಾ ವಿಶ್

Public TV
6 Min Read
shriya saran 1

ಬೆಂಗಳೂರು: ನಟಿ ಶ್ರಿಯಾ ಶರಣ್ ಪುತ್ರಿಗೆ ಇಂದು ಒಂದು ವರ್ಷ ತುಂಬಿದ್ದು, ಇದೇ ಖುಷಿಯಲ್ಲಿ ಶ್ರಿಯಾ ಪುತ್ರಿ ಜೊತೆಗಿರುವ ಕೆಲವೊಂದು ಕ್ಯೂಟ್ ಫೋಟೋ ಹಾಗೂ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

shriya_saran

ಒಂದು ಕಾಲದಲ್ಲಿ ಟಾಲಿವುಡ್‍ನ ಟಾಪ್ ನಟಿಯರಲ್ಲಿ ಒಬ್ಬರಾಗಿ ಸ್ಟಾರ್ ನಟರೊಂದಿಗೆ ಮಿಂಚಿದ್ದ ನಟಿ ಶ್ರಿಯಾ ಸದ್ಯ ಮದುವೆಯ ಬಳಿಕ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೂ ಸೋಶಿಯಲ್ ಮೀಡಿಯಾದಲ್ಲಿ ಆಗಾಗಾ ಫೋಟೋ ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸಖತ್ ಆ್ಯಕ್ಟೀವ್ ಆಗಿರುವ ಶ್ರಿಯಾ ಇದೀಗ ಪುತ್ರಿ ರಾಧಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

shriya_saran

ಸದ್ಯ ಈ ಕುರಿತಂತೆ ಶ್ರಿಯಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ರಾಧಾ ನಿದ್ರೆ ಮಾಡುತ್ತಿದ್ದ ವೇಳೆ ಮುದ್ದಾಡುತ್ತಿರುವ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಮಗಳು ಹಾಗೂ ಪತಿ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಕೆಲವು ಒಂದೆರಡು ಫೋಟೋವನ್ನು ಹಂಚಿಕೊಂಡಿದ್ದಾರೆ. ಮತ್ತೊಂದರಲ್ಲಿ ಮಗಳನ್ನು ತಮ್ಮ ಎದೆಯ ಮೇಲೆ ಮಲಗಿಸಿಕೊಂಡು ಮುದ್ದಾಡುತ್ತಿರುವ ಹಾಗೂ ಮಗಳ ಪುಟ್ಟ ಬೆರಳಿಗೆ ಹೂವಿನಿಂದ ರಿಂಗ್ ಮಾಡಿ ಹಾಕಿರುವ ಪುಟ್ಟ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಟಿ, ಭರತನಾಟ್ಯ ಕಲಾವಿದೆ ಶೋಬನಾಗೆ ಓಮಿಕ್ರಾನ್ ಪಾಸಿಟಿವ್

shriya_saran

ವೀಡಿಯೋ ಹಾಗೂ ಫೋಟೋಗಳ ಜೊತೆಗೆ ಇಂದು ನನ್ನ ಮಗಳಿಗೆ ಒಂದು ವರ್ಷ ತುಂಬಿದೆ. ಕಳೆದ ವರ್ಷ 7.40ಕ್ಕೆ ಜನಿಸಿದ ನನ್ನ ಮಗಳು ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಯುರಿದಳು. ನಮ್ಮನ್ನು ತಂದೆ, ತಾಯಿಯನ್ನಾಗಿ ಮಾಡಿ, ಇಡೀ ಕುಟುಂಬಕ್ಕೆ ಅವಳು ನೀಡಿದ ಪ್ರೀತಿಗೆ ಧನ್ಯವಾದ. ನಾನು ಗರ್ಭಿಣಿಯಾಗಿದ್ದ ಸಮಯದಲ್ಲಿ ನನಗೆ ಸಹಾಯ ಮತ್ತು ಸಲಹೆ ನೀಡಿದ ನಾಟಾಕೊಶ್ಚೆವ್, ನಿರ್ಜ ಶರಣ್, ಆರತಿ ಶರಣ್, ಶೌರ್ಯ, ಧೃತಿದಾವೆ ನನ್ನ ಎಲ್ಲಾ ಸ್ನೇಹಿತರಿಗೂ ಧನ್ಯವಾದಗಳು. ನಮಗೆ ನಿಮ್ಮೆಲ್ಲರ ಆಶೀರ್ವಾದಬೇಕು. ರಾಧಾ ನೋಡಲು ಆಂಡ್ರೆ ಕೊಶ್ಚೆವ್‍ನಂತೆ ಕಾಣುತ್ತಾಳೆ ಎಂದು ರಿಯಾಜಮ್ಲಾನಿ ಹೇಳುತ್ತಾರೆ ಎಂದಿದ್ದಾರೆ.

ಅವಳು ಎಲ್ಲಾ ಕಡೆಯೂ ಸ್ನೇಹಿತರನ್ನು ಮಾಡಿಕೊಂಡು ವಿಶ್ವದಲ್ಲಿ ಎಲ್ಲರ ಪ್ರೀತಿಗಳಿಸಲಿ. ಅದೃಷ್ಟ ಮತ್ತು ಸಂತೋಷ ಎರಡು ಅವಳ ಸ್ನೇಹಿತರಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಾನಸಿಕವಾಗಿ ಕುಗ್ಗಿ, ಸುಧಾರಿಸಿಕೊಂಡು ಮತ್ತೆ ಯಶಸ್ವಿಯಾಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಸಮಂತಾ

ಇತ್ತೀಚೆಗಷ್ಟೇ ಶ್ರಿಯಾ ಶರಣ್ ಪತಿ ಆಂಡ್ರೆ ಕೊಶ್ಚೆವ್ ಮತ್ತು ಪುತ್ರಿ ರಾಧಾ ಜೊತೆ ಹೊಸ ವರ್ಷ ಸೆಲೆಬ್ರಿಟ್ ಮಾಡಲು ಗೋವಾಗೆ ತೆರಳಿದ್ದರು. ಈ ವೇಳೆ ಶ್ರಿಯಾ ಪತಿಗೆ ರೊಮ್ಯಾಂಟಿಕ್ ಆಗಿ ಕಿಸ್ ನೀಡಿದ್ದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದನ್ನೂ ಓದಿ: ‘ಪುಷ್ಪ-2’ಗೆ ಶೇ.50 ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ!

Share This Article
Leave a Comment

Leave a Reply

Your email address will not be published. Required fields are marked *