ಮ್ಯಾಡ್ರಿಡ್: ನಟಿ ಶ್ರೇಯಾ ಶರಣ್ ಪತಿ ಆಂಡ್ರೆ ಅವರಿಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದು, ವೈದ್ಯರು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಶ್ರೇಯಾ ಶರಣ್ 2018ರ ಮಾರ್ಚ್ ತಿಂಗಳಲ್ಲಿ ವಿದೇಶಿಗರಾದ ಆಂಡ್ರೆ ಕೋಶಿವ್ನನ್ನು ಮದುವೆಯಾಗಿದ್ದರು. ಮದುವೆಯ ನಂತರ ಇಬ್ಬರೂ ಸ್ಪೇನ್ನಲ್ಲಿಯೇ ನೆಲೆಸಿದ್ದಾರೆ. ಆದರೆ ಇತ್ತೀಚೆಗೆ ಶ್ರೇಯಾ ಪತಿ ಆಂಡ್ರೆಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ವೈದ್ಯರು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿ ಮನೆಗೆ ವಾಪಸ್ ಕಳುಹಿಸಿದ್ದಾರೆ. ಈ ಬಗ್ಗೆ ಸ್ವತಃ ಶ್ರೇಯಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
Advertisement
Advertisement
ಆಂಡ್ರೆಗೆ ಒಣ ಕೆಮ್ಮು, ತಲೆ ನೋವು, ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಅವರನ್ನು ದಾಖಲಿಸಿಕೊಳ್ಳಲಿಲ್ಲ. ನಿಮಗೆ ಕೊರೊನಾ ಬಂದಿಲ್ಲವಾದರೂ ಆಸ್ಪತ್ರೆಗೆ ಬಂದರೆ ಕೊರೊನಾ ಬರುವ ಸಾಧ್ಯತೆ ಇದೆ. ಆದ್ದರಿಂದ ನೀವು ಆಸ್ಪತ್ರೆಗೆ ಬರುವುದು ಬೇಡ, ಮನೆಯಲ್ಲಿಯೇ ಕ್ವಾರಂಟೈನ್ನಲ್ಲಿ ಇರಿ ಎಂದು ಹೇಳಿ ಕಳುಹಿಸಿದ್ದರು ಎಂದು ತಿಳಿಸಿದ್ದಾರೆ.
Advertisement
ಕೊನೆಗೆ ನಾವು ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಕ್ವಾರಂಟೈನ್ನಲ್ಲಿದ್ದೆವು. ನಾವಿಬ್ಬರು ಬೇರೆ ಬೇರೆ ರೂಂಗಳಲ್ಲಿ ಮಲಗುತ್ತಿದ್ದೆವು. ಅಷ್ಟೇ ಅಲ್ಲದೇ ಪರಸ್ಪರ ಅಂತರವನ್ನು ಕಾಯ್ದುಕೊಂಡಿದ್ದೆವು. ಸದ್ಯ ಆಂಡ್ರೆ ಈಗ ಚೇತರಿಸಿಕೊಳ್ಳತ್ತಿದ್ದಾರೆ ಎಂದು ಶ್ರೇಯಾ ತಿಳಿಸಿದ್ದಾರೆ.
Advertisement
ಶ್ರೇಯಾ ಮತ್ತು ಆಂಡ್ರೆ ಅವರು ಮದುವೆಯಾಗಿ ಎರಡು ವರ್ಷಗಳಾಗಿದ್ದು, ಮಾರ್ಚ್ 13 ರಂದು ಎರಡನೇ ವಿವಾಹ ವಾರ್ಷಿಕೋತ್ಸವ ಇತ್ತು. ನಾವಿಬ್ಬರು ಈ ಖುಷಿಯನ್ನು ಆಚರಿಸಲು ಪ್ಲಾನ್ ಮಾಡಿಕೊಂಡಿದ್ದು, ಅದರಂತೆಯೇ ಸ್ಪೇನ್ ಹೋಟೆಲ್ ಸಹ ಬುಕ್ ಮಾಡಿದೆವು. ಆದರೆ ಅಷ್ಟರಲ್ಲೇ ಕೊರೊನಾ ವ್ಯಾಪಿಸಿದ ಕಾರಣ ಇಡೀ ಸ್ಪೇನ್ ದೇಶವೇ ಲಾಕ್ಡೌನ್ ಆಗಿತ್ತು. ಆಗಲೇ ನಮಗೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದ್ದು. ಪೊಲೀಸರು ಕೂಡ ಮನೆಯಿಂದ ಹೊರಬಾರದೆಂದು ಸೂಚಿಸಿದ್ದರು ಎಂದು ಹೇಳಿದ್ದಾರೆ.