ಪತಿಗೆ ರೊಮ್ಯಾಂಟಿಕ್ ಕಿಸ್ ಕೊಟ್ಟ ಶ್ರಿಯಾ ಶರಣ್ – ಫೋಟೋ ವೈರಲ್

Advertisements

ಹೈದರಾಬಾದ್: ನಟಿ ಶ್ರಿಯಾ ಶರಣ್ ಪತಿ ಆಂಡ್ರೆ ಕೊಶ್ಚೆವ್‍ಗೆ ಕಿಸ್ ಮಾಡುತ್ತಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Advertisements

ಶ್ರಿಯಾ ಶರಣ್ ಪತಿ ಆಂಡ್ರೆ ಕೊಶ್ಚೆವ್ ಮತ್ತು ಪುತ್ರಿ ರಾಧಾ ಜೊತೆ ಈ ಬಾರಿ ಹೊಸ ವರ್ಷ ಸೆಲೆಬ್ರಿಟ್ ಮಾಡಲು ಗೋವಾಗೆ ತೆರಳಿದ್ದಾರೆ. ಸದ್ಯ ಗೋವಾದಲ್ಲಿ ಕುಟುಂಬದೊಂದಿಗೆ ಸಖತ್ ಎಂಜಾಯ್ ಮಾಡುತ್ತಿರುವ ಶ್ರಿಯಾ ಒಂದಷ್ಟು ಕ್ಯೂಟ್ ಆ್ಯಂಡ್ ರೊಮ್ಯಾಂಟಿಕ್ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಶ್ರಿಯಾ ಪತಿಗೆ ರೊಮ್ಯಾಂಟಿಕ್ ಆಗಿ ಕಿಸ್ ನೀಡುತ್ತಿರುವ ಫೋಟೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

Advertisements

ದಕ್ಷಿಣ ಭಾರತದ ಕ್ಯೂಟ್ ಕಪಲ್‍ಗಳಲ್ಲಿ ಶ್ರಿಯಾ ಶರಣ್ ಹಾಗೂ ಆಂಡ್ರೆ ಕೊಶ್ಚೆವ್ ಕೂಡ ಒಬ್ಬರು. ಈ ದಂಪತಿ ಆಗಾಗ ಫೋಟೋ ಹಾಗೂ ವೀಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಶ್ರಿಯಾ ತಮಗೆ ಹೆಣ್ಣು ಮಗು ಜನಿಸಿದ ವಿಚಾರ ಬಹಿರಂಗಪಡಿಸಿದ್ದರು. ಅಲ್ಲದೇ ಈ ವಿಚಾರವನ್ನು 2 ವರ್ಷಗಳ ಕಾಲ ರಹಸ್ಯವಾಗಿಟ್ಟಿದ್ದರು. ದನ್ನೂ ಓದಿ: ತಾಯಿಯಾಗಿರುವ ವಿಚಾರ 2 ವರ್ಷಗಳ ನಂತ್ರ ಬಹಿರಂಗ ಪಡಿಸಿದ ಶ್ರಿಯಾ ಶರಣ್

Advertisements

ಸದ್ಯ ಪತಿ ಜೊತೆಗೆ ಗೋವಾ ಟ್ರಿಪ್‍ನಲ್ಲಿ ಬ್ಯುಸಿಯಾಗಿರುವ ಶ್ರಿಯಾ ಇಂದು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಶ್ರಿಯಾ ಸೂರ್ಯಾಸ್ತದ ಸಮಯದಲ್ಲಿ ಪತಿಗೆ ರೊಮ್ಯಾಂಟಿಕ್ ಆಗಿ ಕಿಸ್ ಮಾಡಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಈ ಫೋಟೋವನ್ನು ಸ್ವೀಮ್ಮಿಂಗ್ ಮಾಡಿ ಬಂದ ನಂತರ ಕ್ಲಿಕ್ಕಿಸಿಕೊಂಡಿರುವಂತೆ ಕಾಣಿಸುತ್ತದೆ.

ಅಕ್ಟೋಬರ್‌ನಲ್ಲಿ ತಮಗೆ ಹೆಣ್ಣು ಮಗು ಜನಿಸಿರುವ ವಿಚಾರವನ್ನು ರಿವೀಲ್ ಮಾಡಿದ್ದ ಶ್ರಿಯಾ, 2020ರ ಕ್ವಾರಂಟೈನ್ ತುಂಬಾನೇ ಅದ್ಭುತವಾಗಿತ್ತು. ಇಡೀ ಪ್ರಪಂಚವು ಕಷ್ಟದಲ್ಲಿ ಸಾಗುತ್ತಿರುವಾಗ, ನಮ್ಮ ಪ್ರಪಂಚವು ಬದಲಾಯಿತು. ನಮಗೆ ಆ ಸಂದರ್ಭದಲ್ಲಿ ಹೆಣ್ಣುಮಗುವಾಗಿದೆ ಎಂದು ಬರೆದುಕೊಂಡು ಒಂದು ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿ ಡಿಂಪಲ್ ಕ್ವೀನ್ ರಚಿತಾ ಡಿಸ್ಚಾರ್ಜ್

2018 ರ ಮಾರ್ಚ್‍ನಲ್ಲಿ ಶ್ರಿಯಾ ತಮ್ಮ ರಷ್ಯಾದ ಗೆಳೆಯ ಆಂಡ್ರೆ ಕೊಶ್ಚೆವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ನಿರ್ದೇಶಕ ಎಸ್‍ಎಸ್ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿರುವ ಆರ್‌ಆರ್‌ಆರ್‌ ಸಿನಿಮಾದಲ್ಲಿ ಬಾಲಿವುಡ್ ನಟ ಅಜಯ್ ದೇವ್‍ಗನ್‍ಗೆ ಜೋಡಿಯಾಗಿ ಶ್ರಿಯಾ ಕಾಣಿಸಿಕೊಂಡಿದ್ದಾರೆ. ಚಂದ್ರ, ಅರಸು ಸಿನಿಮಾ ಮೂಲಕ ಕನ್ನಡ ಚಿತ್ರಗಳಲ್ಲಿಯೂ ಅಭಿನಯಿಸಿರುವ ಶ್ರಿಯಾ ಕನ್ನಡ ಅಭಿಮಾನಿಗಳ ಪ್ರೀತಿ ಸಂಪಾದಿಸಿಕೊಂಡಿದ್ದಾರೆ.

Advertisements
Exit mobile version