ಬಹುಭಾಷಾ ನಟಿ ಶ್ರೀಯಾ ಶರಣ್ (Shriya Saran) ಸದ್ಯ `ದೃಶ್ಯಂ 2′ (Drishyam 2) ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. `ದೃಶ್ಯಂ 2′ ಸಿನಿಮಾ ಸಕ್ಸಸ್‌ನಿಂದ ಬಾಲಿವುಡ್‌ಗೆ ಮರುಜೀವ ಬಂದಂತಾಗಿದೆ. ಈಗ ಈ ಚಿತ್ರದ ಪ್ರಚಾರದ ಸಂದರ್ಭದಲ್ಲಿ ತಾವು ಪ್ರೆಗ್ನೆಂಟ್ ಆಗಿರುವ ವಿಚಾರವನ್ನ ಸೀಕ್ರೆಟ್ ಆಗಿ ಇಟ್ಟಿದ್ಯಾಕೆ ಎಂದು ರಿವೀಲ್ ಮಾಡಿದ್ದಾರೆ.
ಸೌತ್ ಸಿನಿಮಾರಂಗದಲ್ಲಿ ಕನ್ನಡ ಸೇರಿದಂತೆ ಸಾಕಷ್ಟು ಚಿತ್ರಗಳ ಮೂಲಕ ಮೋಡಿ ಮಾಡಿದ್ದ ಚೆಲುವೆ ಶ್ರೀಯಾ ಶರಣ್, 2018ರಲ್ಲಿ ಆಂಡ್ರಿ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2021ರಲ್ಲಿ ಮುದ್ದು ಮಗಳ ಆಗಮನವಾಗಿತ್ತು. ಆದರೆ ಮಗಳು ಹುಟ್ಟುವವೆರೆಗೂ ತಾವು ಪ್ರೆಗ್ನೆಂಟ್ ಆಗಿರುವ ವಿಷ್ಯವನ್ನು ಎಲ್ಲೂ ಕೂಡ ನಟಿ ರಿವೀಲ್ ಮಾಡಿರಲಿಲ್ಲ. ಈಗ ಈ ಬಗ್ಗೆ ನಟಿ ಮಾತನಾಡಿದ್ದಾರೆ.
ನನ್ನ ಮಗಳು ರಾಧ (Radha) ಹೊಟ್ಟೆಯಲ್ಲಿ ಇರುವಾಗ ಒತ್ತಡ ಇಲ್ಲದೇ ದಿನ ದೂಡಬೇಕು ಎಂದುಕೊಂಡಿದ್ದೆ. ಆ ಸಮಯದಲ್ಲಿ ಎಲ್ಲರೂ ದಪ್ಪ ಆಗುತ್ತಾರೆ. ನಾನು ದಪ್ಪ ಆಗುವ ಕಾರಣಕ್ಕೆ ಮತ್ತು ಬಾಡಿ ಶೇಪ್ ಬಗ್ಗೆ ಟ್ರೋಲ್ ಮಾಡಿದರೆ ಎಂಬ ಕಾರಣಕ್ಕೆ ಹೀಗೆ ಮಾಡಿದೆ. ತಾಯ್ತನವನ್ನು ಸುಂದರವಾಗಿ ಅನಿಭವಿಸಬೇಕು ಎಂದುಕೊಂಡಿದ್ದೆ, ಹಾಗಾಗಿ ಪ್ರೆಗ್ನೆನ್ಸಿ ವಿಚಾರವನ್ನೂ ಸೀಕ್ರೆಟ್ ಅಗಿ ಇಟ್ಟಿದ್ದೆ ಎಂದು ಶ್ರೀಯಾ ಮಾತನಾಡಿದ್ದಾರೆ. ಇದನ್ನೂ ಓದಿ: ಸಿನಿಮಾ ಮೂಲಕ ಪತಿಯ ಪ್ರಜಾಕೀಯಕ್ಕೆ ಸಾಥ್ ನೀಡಿದ ಪ್ರಿಯಾಂಕ ಉಪೇಂದ್ರ
ಇನ್ನೂ `ಕಬ್ಜ’ ಚಿತ್ರದಲ್ಲಿ ಉಪ್ಪಿ ಜೊತೆ ಶ್ರೀಯಾ ಶರಣ್ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ.