ಯುವಕ ಸಾವನ್ನಪ್ಪಿಲ್ಲ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ: ಶ್ರೀ ಶೈಲ ಸ್ವಾಮೀಜಿ

Public TV
2 Min Read
shri saila shree

ಅಮರಾವತಿ: ಯುವಕನು ಸುರಕ್ಷಿತವಾಗಿದ್ದು, ತಲೆಗೆ ಸ್ವಲ್ಪ ಪೆಟ್ಟಾಗಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ ಎಂದು ಶ್ರೀಮದ್ ಶ್ರೀಶೈಲ ಪೀಠ ಜಗದ್ಗುರು ಚನ್ನಸಿದ್ದರಾಮ ಶಿವಾಚರ್ಯರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಶ್ರೀಶೈಲದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ನೀರಿನ ಬಾಟಲ್‍ಗಾಗಿ ನಡೆದ ಗಲಾಟೆಯಲ್ಲಿ ಕನ್ನಡಿಗ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿತ್ತು. ಇದನ್ನೂ ಓದಿ: ಕೇಜ್ರಿವಾಲ್ ಮನೆ ಮೇಲೆ ದಾಳಿ- 8 ಮಂದಿ ಬಂಧನ

WhatsApp Image 2022 03 31 at 7.24.47 PM

ಘಟನೆಯ ಕುರಿತು ಶ್ರೀಶೈಲ ಶ್ರೀಗಳು ಪ್ರತಿಕ್ರಿಯಿಸಿದ್ದು, ಯುವಕನು ಮರಣ ಹೊಂದಿಲ್ಲ. ಅವನು ಸುರಕ್ಷಿತವಾಗಿದ್ದಾನೆ. ತಲೆಗೆ ಸ್ವಲ್ಪ ಪೆಟ್ಟಾಗಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಾವು ನಿನ್ನೆ ರಾತ್ರಿಯೇ ಸ್ವತಃ ಶ್ರೀ ಶೈಲದ ಸಮೀಪದಲ್ಲಿರುವ ಸುನ್ನಿ ಪೇಟೆ ಆಸ್ಪತ್ರೆಗೆ ಹೋಗಿ ಅವನ ಆರೋಗ್ಯವನ್ನು ವಿಚಾರಿಸಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.

ಹೆಚ್ಚಿನ ಚಿಕಿತ್ಸೆ ಕೊಡಲಿಕ್ಕೆ ಮೆದುಳಿನಲ್ಲಿ ಸ್ವಲ್ಪ ರಕ್ತಸ್ರಾವವಾಗಿರುವುದರಿಂದ ವೈದ್ಯರು ಸ್ಕ್ಯಾನ್ ಮಾಡಬೇಕು. ಆದರೆ ಅಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಅವನನ್ನು ತಕ್ಷಣ ಒಂದು ಉತ್ತಮ ಆಸ್ಪತ್ರೆಗೆ ಸೇರಿಸಬೇಕಿದೆ ಎಂದು ಹೇಳಿದರು.

ಆಂಧ್ರಪ್ರದೇಶದ ಶ್ರೀಶೈಲ ಗಲಭೆ ಸದ್ಯ ಶಾಂತವಾಗಿದೆ ಕನ್ನಡಿಗರು ಸುರಕ್ಷಿತವಾಗಿದ್ದಾರೆ ಭಯಪಡುವ ಅಗತ್ಯವಿಲ್ಲ ಎಂದರು.

ಆಂಧ್ರದ ಶ್ರೀಶೈಲ ಹೊಟೇಲ್ ಸಿಬ್ಬಂದಿ ಕನ್ನಡಿಗರ ಮೇಲೆ ಹಲ್ಲೆ ನಡೆದಿದ್ದು ಹಲ್ಲೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎಲ್ಲವೂ ಸುಭಿಕ್ಷವಾಗಿದೆ ಯಾರು ಆತಂಕ ಒಳಗಾಗಬಾರದು ಎಂದು ತಿಳಿಸಿದರು.

ನಡೆದಿದ್ದು ಏನು?
ದೇವಸ್ಥಾನದ ಆವರಣದಲ್ಲಿ ನೀರಿನ ಬಾಟಲ್‍ಗಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದೆ. ಆಂಧ್ರ ಮೂಲದ ವ್ಯಾಪಾರಸ್ಥರು ಹಾಗೂ ಸ್ಥಳೀಯರಿಂದ ಕರ್ನಾಟಕ ಭಕ್ತರ ಮೇಲೆ ಹಲ್ಲೆ ನಡೆದಿದೆ. ಲಾಠಿ ಹಾಗೂ ಮಾರಕಾಸ್ತ್ರದಿಂದ ಹಿಡಿದು ಹೊಡೆದಾಡುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ: ನೀರಿನ ಬಾಟಲ್‌ ವಿಚಾರಕ್ಕೆ ಆಂಧ್ರ ವ್ಯಾಪಾರಸ್ಥರಿಂದ ಗಲಾಟೆ- ಕರ್ನಾಟಕದ ಯುವಕ ಗಂಭೀರ

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಪಾದಯಾತ್ರೆ ಮಾಡಿದ್ದರು. ರಾತ್ರಿ ವೇಳೆ ಕ್ಷುಲ್ಲಕ ಕಾರಣಕ್ಕೆ ಭಕ್ತರು ಹಾಗೂ ವ್ಯಾಪಾರಿಗಳ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿ ಸ್ಥಳೀಯರಿಂದ ಭಕ್ತರ ಜೊತೆ ಹೊಡೆದಾಟವಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *