ಬೆಳಗಾವಿ: ಸರ್ಕಾರ ನೆರೆ ಪರಿಹಾರ ನೀಡದೇ ಇದ್ದರೆ ನನ್ನ ಸ್ವಂತ ಹಣದಿಂದ ಕ್ಷೇತ್ರದ ಜನರಿಗೆ ಪರಿಹಾರ ನೀಡುತ್ತೇನೆ ಎಂದು ಮಾಜಿ ಸಚಿವ ಹಾಗೂ ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಹೇಳಿದ್ದಾರೆ.
Advertisement
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೆಂಪವಾಡ ಗ್ರಾಮದ ನೆರೆ ಪರಿಹಾರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆರೆ ಪೀಡಿತ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದೆ. ಈ ಕುರಿತು ನಾನು ಸಿಎಂ ಬಸವರಾಜ ಬೊಮ್ಮಾಯಿ ಅವರ ಬಳಿ ಮಾತನಾಡಿದ್ದೇನೆ. ಅವರಿಗೆ ಪರಿಹಾರ ನೀಡುವಂತೆ ಮನವಿ ಮಾಡಿದ್ದೇನೆ. ಸಿಎಂ ಪರಿಹಾರ ನೀಡುತ್ತಾರೆಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದನ್ನೂ ಓದಿ:ಕಾರು ಅಪಘಾತಕ್ಕೂ ಮುನ್ನ ಮದ್ಯ ಖರೀದಿಸಿದ್ದ ಇಷಿತಾ, ಬಿಂದು
Advertisement
Advertisement
ಒಂದು ವೇಳೆ ಸರ್ಕಾರ ಪರಿಹಾರ ನೀಡದೇ ಇದ್ದರೆ ನನ್ನ ಜೇಬಿನಿಂದ ನನ್ನ ಕ್ಷೇತ್ರದ ಸಂತ್ರಸ್ತರಿಗೆ ಪರಿಹಾರ ನೀಡುತ್ತೇನೆ. ಪರಿಹಾರ ಸಿಗದ ಕಾರಣ ಕ್ಷೇತ್ರದ ಜನ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದರು. ಯಾರಿಗೂ ಪ್ರತಿಭಟನೆ ಮಾಡದಂತೆ ನಾನು ವಿನಂತಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.ಇದನ್ನೂ ಓದಿ:ಹೆಲಿಕಾಪ್ಟರ್ ಗೆ ಮೃತ ದೇಹವನ್ನು ನೇತು ಹಾಕಿ ಹಾರಾಟ – ಮತ್ತೆ ಶುರುವಾಯ್ತು ಉಗ್ರರ ಅಟ್ಟಹಾಸ
Advertisement
ಪ್ರವಾಹ ಸಂದರ್ಭದಲ್ಲಿ ನದಿ ತೀರದ ಜನರು ತಮ್ಮ ಆಹಾರ ಸಾಮಗ್ರಿ ಹಾಗೂ ಜಾನುವಾರುಗಳ ಸ್ಥಳಾಂತರಕ್ಕೆ ಹಣ ಖರ್ಚು ಮಾಡಿದ್ದಾರೆ. ಹೀಗಾಗಿ ನದಿ ನೀರು ಹೋದ ಮನೆಗಳ ಜೊತೆಗೆ ನದಿ ತೀರದ ಮನೆಗಳಿಗೂ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ನಾನೇ ನನ್ನ ಜೇಬಿನಿಂದ ಪರಿಹಾರ ನೀಡುತ್ತೇನೆ ಎಂದು ಹೇಳಿದರು.ಇದನ್ನೂ ಓದಿ:ಸಾರ್ವಜನಿಕ ಗಣೇಶೋತ್ಸವ ಸೆಪ್ಟೆಂಬರ್ 5 ರಂದು ತೀರ್ಮಾನ : ಬೊಮ್ಮಾಯಿ