ಮಂಡ್ಯ: ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಶ್ರೀರಂಗನಾಥ ದೇವಾಲಯದ ಲಕ್ಷ ದೀಪೋತ್ಸವವನ್ನು ರದ್ದು ಮಾಡಲಾಗಿದೆ.
ಕಳೆದ 24 ವರ್ಷಗಳಿಂದ ಲಕ್ಷ ದೀಪೋತ್ಸವವನ್ನು ಆಚರಿಸಲಾಗುತ್ತಿತ್ತು. ಮಕರ ಸಂಕ್ರಾಂತಿಯಂದು ರಾತ್ರಿ ಭಾರೀ ವಿಜೃಂಭಣೆಯಿಂದ ನಡೆಯುತ್ತಿದ್ದ ಲಕ್ಷ ದೀಪೋತ್ಸವ ಇದೇ ಮೊದಲ ಬಾರಿಗೆ ರದ್ದಾಗಿದೆ ಎನ್ನಲಾಗುತ್ತಿದೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಶ್ರೀರಂಗನಾಥ ದೇವಾಲಯವನ್ನು ಮುಚ್ಚಲಾಗಿದ್ದು, ಭಕ್ತರು ಹೊರಾಂಗಣದಲ್ಲೇ ಕೈ ಮುಗಿದು ತೆರಳುತ್ತಿದ್ದಾರೆ. ಇದನ್ನೂ ಓದಿ: ಉಡುಪಿ ಕೃಷ್ಣ ಮಠದಲ್ಲಿ ಹಗಲು ಉತ್ಸವ – ಅಷ್ಟಮಠಾಧೀಶರು ಭಾಗಿ
Advertisement
Advertisement
ದೇವಾಲಯದ ಆಡಳಿತ ಮಂಡಳಿ ಲಕ್ಷ ದೀಪೋತ್ಸವದ ಬದಲು ಲಘು ದೀಪೋತ್ಸವ ಆಚರಿಸಲು ನಿರ್ಧರಿಸಿದೆ. ಹೀಗಾಗಿ ದೇವಾಲಯದ ಪ್ರಾಂಗಣದಲ್ಲಿ ಲಘು ದೀಪೋತ್ಸವ ನಡೆಯಲಿದೆ. ದೇವಾಲಯದಲ್ಲಿ ಸಾವಿರ ದೀಪಗಳನ್ನು ಬೆಳಗಿ ದೇವರಿಗೆ ವಿಶೇಷ ಪೂಜೆ ಸಲ್ಲಲಿದೆ. ಹಾಗೆಯೇ ಕರ್ಫ್ಯೂ ಹಿನ್ನೆಲೆಯಲ್ಲಿ ಈ ವರ್ಷ ಭಕ್ತರಿಗೆ ಇದರ ಭಾಗ್ಯ ಲಭಿಸದೇ ಹೋಗಿದೆ. ಕೇವಲ ದೇವಸ್ಥಾನದ ಅರ್ಚಕರು ಸ್ವಾಮಿಯ ಸೇವೆ ಮಾಡಲಿದ್ದಾರೆ. ಇದನ್ನೂ ಓದಿ: ಶಬರಿಮಲೆ ಅಯ್ಯಪ್ಪನಿಗೆ ವಜ್ರದ ಕಿರೀಟ ಕಾಣಿಕೆ ಕೊಟ್ಟ ಭಕ್ತ