ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಬಾಲರಾಮನ ದರ್ಶನಕ್ಕೆ ಸಂಬಂಧಿಸಿದಂತೆ ನಕಲಿ ಲಿಂಕ್ ನಂಬಿ ಮೋಸ ಹೋಗಬೇಡಿ ಎಂದು ಭಕ್ತರಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಎಚ್ಚರಿಕೆ ನೀಡಿದೆ.
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನಕ್ಕೆ ಯಾವುದೇ ಪಾಸ್ ಅಗತ್ಯ ಇಲ್ಲ. ವಿಶೇಷ ಆರತಿಗಳಿಗೆ ಮಾತ್ರ ಪಾಸ್ ಅನ್ನು ವೆಬ್‌ಸೈಟ್ ಮೂಲಕ ಉಚಿತವಾಗಿ ನೀಡಲಾಗುತ್ತದೆ. ಪಾಸ್ ವಿತರಣೆ ಹೆಸರಲ್ಲಿ ನಕಲಿ ವೆಬ್ಸೈಟ್‌ಗಳು ಹುಟ್ಟಿಕೊಂಡಿದ್ದು ಹಣ ವಂಚಿಸುವ ಸಾಧ್ಯತೆಗಳಿದೆ. ಈ ಬಗ್ಗೆ ಭಕ್ತರು ಎಚ್ಚರಿಕೆ ವಹಿಸಬೇಕು ಎಂದು ಶ್ರೀರಾಮ ತೀರ್ಥಕ್ಷೇತ್ರ ಟ್ರಸ್ಟ್ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮೈತ್ರಿ ಮಾತುಕತೆ ಯಶಸ್ವಿ – 13 ಸೀಟು ಶಿಂಧೆ ಬಣಕ್ಕೆ, 4 ರಲ್ಲಿ ಎನ್‌ಸಿಪಿ ಸ್ಪರ್ಧೆ
Advertisement
Advertisement
ದರ್ಶನ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್, ಆಯೋಧ್ಯೆಗೆ ಪ್ರತಿನಿತ್ಯವೂ 1 ರಿಂದ 1.5 ಲಕ್ಷ ಜನ ನಿತ್ಯವೂ ದರ್ಶನಕ್ಕೆ ಬರುತ್ತಿದ್ದಾರೆ. ಬೆಳಗ್ಗೆ 6:30 ರಿಂದ 9:30 ರವರೆಗೆ ದರ್ಶನ ಪಡೆಯಲು ದೇಗುಲಕ್ಕೆ ಬರಬಹುದು. 60-75 ನಿಮಿಷದೊಳಗೆ ರಾಮಲಲ್ಲಾನ ದರ್ಶನ ಮುಗಿಸಿ ಹೊರಗೆ ಬರಬಹುದು. ಮೊಬೈಲ್, ಪರ್ಸ್ ಎಲ್ಲವನ್ನೂ ದೇಗುಲದ ಹೊರಗೆ ಇಟ್ಟು ಬಂದರೆ ಉತ್ತಮ. ಮುಖ್ಯವಾಗಿ ದರ್ಶನಕ್ಕೆ ಬರುವ ಭಕ್ತರು ಹೂವು ಹಣ್ಣು, ಪ್ರಸಾದ ಯಾವುದೂ ತರುವಂತಿಲ್ಲ ಎಂದು ಮನವಿ ಮಾಡಿದೆ.
Advertisement
ಪ್ರತಿದಿನ ಬೆಳಗ್ಗೆ 4 ಗಂಟೆಗೆ ಮಂಗಳ ಆರತಿ ನಡೆಯಲಿದೆ. ಶಯನಾರತಿ 10 ಗಂಟೆ ರಾತ್ರಿ ನಡೆಯಲಿದೆ ಈ ಆರತಿಗಳಿಗೆ ಮಾತ್ರ ವಿಶೇಷ ಪಾಸ್ ಅಗತ್ಯವಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವೆಬ್ ಸೈಟ್ ನಲ್ಲಿ ಈ ಪಾಸ್‌ನ್ನು ಪಡೆಯಬಹುದು. ಪಾಸ್ ನೀಡಲು ಹಣ ಪಾವತಿಸಲು ಕೇಳಿದರೆ ಅದು ನಕಲಿ ಮತ್ತು ವಂಚನೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಅರಿತುಕೊಳ್ಳಬೇಕು. ವಿಶೇಷ ದರ್ಶನಕ್ಕೆ ಯಾವ ವ್ಯವಸ್ಥೆಯೂ ಇಲ್ಲ. ಇದಕ್ಕೆ ದುಡ್ಡು ಪಾವತಿ ಮಾಡಬೇಕಾಗಿಲ್ಲ. ನಕಲಿ ಲಿಂಕ್ ನಂಬಿ ಮೋಸ ಹೋಗಬೇಡಿ ಎಂದು ಟ್ರಸ್ಟ್ ಎಚ್ಚರಿಸಿದೆ. ಇದನ್ನೂ ಓದಿ: 5,8 ಮತ್ತು 9ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಸುಪ್ರೀಂ ತಡೆ – ಎಕ್ಸಾಂ ಮುಂದೂಡಿದ ಶಿಕ್ಷಣ ಇಲಾಖೆ
Advertisement
ವಯಸ್ಸಾದವರಿಗೆ, ವಿಶೇಷ ಚೇತನಕರಿಗೆ, ವ್ಹೀಲ್ ಚೇರ್ ವ್ಯವಸ್ಥೆಯೂ ಇದ್ದು, ವೃದ್ಧರೂ ಬಂದು ಬಾಲರಾಮನ ದರ್ಶನ ಮಾಡಬಹುದು. ಇದಕ್ಕೆ ಬೇಕಾದ ಎಲ್ಕ ಅಗತ್ಯ ವ್ಯವಸ್ಥೆಗಳನ್ನು ದೇವಸ್ಥಾನದಲ್ಲಿ ಮಾಡಿದ್ದು, ಜನರು ಅಯೋಧ್ಯೆಗೆ ಬಂದು ಪ್ರಭು ಶ್ರೀರಾಮನ ದರ್ಶನ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.