ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಕೂದಲಿನ ಬಿಡ್ ನಡೆದಿದ್ದು, ಪ್ರತಿ ಕೆ.ಜಿ.ಗೆ 15,535 ರೂ. ನಂತೆ 4,595 ಕೆ.ಜಿ. ತುಂಡು ಕೂದಲು, 951 ಕೆ.ಜಿ. ಉದ್ದದ ಕೂದಲು ಮಾರಾಟವಾಗಿದ್ದು, ಇದರಿಂದ ಬರೋಬ್ಬರಿ 1,49,40,391 ರೂ. ಆದಾಯ ಬಂದಿದೆ.
Advertisement
ನಾಡಿನ ಪ್ರಮುಖ ದೇಗುಲಗಳಲ್ಲಿ ಒಂದಾದ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹರಕೆ ಕೂದಲಿನ ಬಿಡ್ ನಡೆದಿದ್ದು, ಪ್ರತಿ ಕೆಜಿಗೆ 15,535 ರೂ. ನಂತೆ 4,595 ಕೆಜಿ ತುಂಡು ಕೂದಲು, 951 ಕೆ.ಜಿ. ಉದ್ದ ಕೂದಲು ಮಾರಾಟವಾಗಿದ್ದು, ಬರೋಬ್ಬರಿ 1,49,40,391 ರೂ. ಆದಾಯ ಬಂದಿದೆ. ಹುಂಡಿಯಲ್ಲಿ ಸಂಗ್ರಹವಾಗುತ್ತಿದ್ದ ಹಣದಿಂದ ಗಮನ ಸೆಳೆಯುತ್ತಿದ್ದ ಮಲೆ ಮಾದಪ್ಪ ಈಗ ಮತ್ತಷ್ಟು ಶ್ರೀಮಂತನಾಗಿದ್ದು, ಹರಕೆ ಕೂದಲಿನ ಹರಾಜಿನಿಂದ ಬರೋಬ್ಬರಿ 1.49 ಕೋಟಿ ರೂ. ಸಂಗ್ರಹವಾಗಿದೆ. ಇದನ್ನೂ ಓದಿ: ನಿನ್ನ ವಾಹನದಿಂದ ಬೆಳೆ ಉಳಿಸು- ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ
Advertisement
Advertisement
ಈ ಕುರಿತು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿ, ಕಳೆದ ವರ್ಷಕ್ಕಿಂತ ಈ ವರ್ಷ ಪ್ರತಿ ಕೆ.ಜಿ.ಗೆ 8,135 ರೂ. ಹೆಚ್ಚಿನ ಲಾಭ ಬಂದಿದ್ದು, ಒಟ್ಟು ಹಣ 1.49 ಕೋಟಿ ರೂ. ಸಂಗ್ರಹವಾಗಿರುವುದು ಸಾರ್ವಕಾಲಿಕ ದಾಖಲೆಯಾಗಿದೆ. ಈ ಮುಡಿ ಕೂದಲು 99 ದಿನಗಳಲ್ಲಿ ಸಂಗ್ರಹವಾಗಿತ್ತು ಎಂದು ತಿಳಿಸಿದ್ದಾರೆ.