ಮಾಜಿ ಪ್ರಧಾನಿ ದೇವೇಗೌಡರಿಗೆ ‘ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ’ ಪ್ರಶಸ್ತಿ ಪ್ರದಾನ

Public TV
3 Min Read
HD Deve Gowda Sri Ganga Samrata Shree Purusha

– ಪತ್ನಿ ಚೆನ್ನಮ್ಮರ ತ್ಯಾಗ ನೆನೆದು ಕಣ್ಣೀರು ಹಾಕಿದ ಹೆಚ್‌ಡಿಡಿ

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರಿಗೆ (HD Deve Gowda) ‘ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಬೆಂಗಳೂರಿನಲ್ಲಿ (Bengaluru) ದೇವೇಗೌಡ ಅಭಿನಂದನಾ ಸಮಿತಿ ಆಯೋಜಿಸಿದ್ದ ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಶ್ರೀ, ಸುತ್ತೂರು ಶ್ರೀಗಳು, ಮಾದಾರ ಚನ್ನಯ್ಯ ಶ್ರೀಗಳು, ನಂಜಾವಧೂತ ಶ್ರೀಗಳು ದೇವೇಗೌಡರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಇದೇ ವೇಳೆ, ದೇವೇಗೌಡರ ಕುರಿತಾದ ಪುಸ್ತಕ ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ದೇವೇಗೌಡರು, ಜೀವನದ ಕೊನೆ ಹಂತ ಇದು. ನಿಮ್ಮ ಆಶೀರ್ವಾದ ಈ ಹಂತದಲ್ಲಿ ಈ ಆತ್ಮಕ್ಕೆ ಸಮಾಧಾನ ತಂದಿದೆ. ನಾನು ಅನೇಕ ಬಾರಿ ಚುನಾವಣೆಯಲ್ಲಿ ಸೋತಿದ್ದೇನೆ. ರಾಜಕೀಯದಲ್ಲಿ ಸೋಲು, ಗೆಲುವು ಯಾರು ತಲೆ ಕೆಡಿಸಿಕೊಳ್ಳಬಾರದು. ನನ್ನ ಶ್ರೀಮತಿ ಚನ್ನಮ್ಮ ಎಲ್ಲಾ ಹಂತದಲ್ಲಿ ನನ್ನ ಜೊತೆ ನಿಂತಿದ್ದಾರೆ. ಅನೇಕ ಕಷ್ಟದಲ್ಲಿ ನನ್ನ ಗೌರವ ಉಳಿಸಿದ್ದಾರೆ. ನನ್ನ ಬೆಳವಣಿಗೆಗೆ ಅವರ ಕೊಡುಗೆ ಸಾಕಷ್ಟು ಇದೆ ಎಂದು ಚೆನ್ನಮ್ಮರ ತ್ಯಾಗ ನೆನೆದು ಕಣ್ಣೀರು ಹಾಕಿದರು. ಇದನ್ನೂ ಓದಿ: ಕಲಂ 371J ದಶಮಾನೋತ್ಸವ, ಬುಡಕಟ್ಟು ಉತ್ಸವ – ನಾಳೆ ರಾಯಚೂರಿಗೆ ಸಿಎಂ, ಡಿಸಿಎಂ

HD Deve Gowda

ಆದಿಚುಂಚನಗಿರಿ ಹಿಂದಿನ ಗುರುಗಳ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸ ಆಯ್ತು, ಸತ್ಯ ಹೇಳ್ತೀನಿ ಎಲ್ಲರ ಮಧ್ಯೆ ನಾವು ಏನಾದರೂ ಗೌರವ ಸಂಪಾದನೆ ಮಾಡಿದ್ದೇವೆ ಅಂದರೆ ಅದು ಬಾಲಗಂಗಾಧರನಾಥ ಸ್ವಾಮೀಜಿಗಳಿಂದ. ರಾಮಕೃಷ್ಣ ಆಶ್ರಮದಲ್ಲಿ ನನ್ನ ದೊಡ್ಡ ಮಗನನ್ನು ಹಾಸ್ಟೆಲ್‌ಗೆ ಸೇರಿಸಿದ್ದೆ. ಆಗ ಅಲ್ಲಿನ ಶ್ರೀಗಳು ಬಾಲಕೃಷ್ಣ ಹೆಸರಿನಲ್ಲಿ ಗೌಡ ಅನ್ನೋ ಹೆಸರು ತೆಗೆಸು ಎಂದು ಹೇಳಿದರು. ಗೌಡ ಎನ್ನುವ ಹೆಸರು ಇದ್ದರೆ ಡಿಗ್ರಿ ಮಾತ್ರ ಸಿಗುತ್ತೆ. ರ‍್ಯಾಂಕ್ ಸಿಗಲ್ಲ ಅಂದರು. ಬಾಲಗಂಗಾಧರನಾಥ ಸ್ವಾಮೀಜಿ ನಮ್ಮ ಸಮಾಜ ಗುರುತಿಸಲು ದುಡಿದರು. ಈಗ ನಮ್ಮ ಮುಂದೆ ಅವರು ಇಲ್ಲ. ನಿರ್ಮಲಾನಂದ ಶ್ರೀಗಳನ್ನ ಸ್ಥಾನದಲ್ಲಿ ಕೂರಿಸಿದ್ದಾರೆ ಎಂದರು. ಇದನ್ನೂ ಓದಿ: ದರ್ಶನ್ ನೋಡಲು ಮನೆ ಬಳಿ ಕಿಕ್ಕಿರಿದು ಸೇರಿದ ಲೇಡಿಫ್ಯಾನ್ಸ್ !

ಚಿಕ್ಕಬಳ್ಳಾಪುರ, ಕೋಲಾರದ ಜನತೆಗೆ ನೀರು ಸಿಗದೆ ಬವಣೆ ಪಡುತ್ತಿರುವುದನ್ನ ನೋಡಿದರೆ ನನ್ನ ಆತ್ಮಕ್ಕೆ ಶಾಂತಿ ಸಿಗಲ್ಲ. ನರ್ಮದಾ, ಬ್ರಹ್ಮ ಪುತ್ರ ಸೇರಿ ಹಲವು ನದಿ ಸೇರಿಸಿ ಒಂದು ಡ್ಯಾಮ್ ಮಾಡಿದೆ. ಗೋದಾವರಿ ನೀರು ತಮಿಳುನಾಡಿಗೆ ಕೊಡುತ್ತೇವೆ ಅಂತಾರೆ. ಶನಿವಾರ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ. ತಮಿಳುನಾಡು ಸರ್ ಪ್ಲಸ್ ಸ್ಟೇಟ್. ಇದನ್ನು ಟ್ರಿಬ್ಯೂನಲ್ ಹೇಳಿದೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ಈಗ ಆಡಳಿತ ಮಾಡೋರ ಬಗ್ಗೆಯೂ ಟೀಕೆ ಮಾಡಲ್ಲ. ಕರ್ನಾಟಕದಲ್ಲಿ ಕುಡಿಯೋಕೆ ನೀರಿಲ್ಲ ಎಂದು ಹೇಳುತ್ತಾರೆ. ಆಂಧ್ರ ಸಿಎಂ ಬಂದು ಕೂತ್ಕೋ ಅಂತ ನನ್ನನ್ನ ಕೂರಿಸಿದ್ರು. ನಾನು ಯಾವುದೂ ಮರೆಯಲ್ಲ. ತುಂಗಭದ್ರಾದಿಂದ ಮಡಕಶಿರದ ಮೇಲೆ ತೆಗೆದುಕೊಂಡು ಹೋಗುತ್ತಾರೆ ಅಂತೆ. ಹೈಕೋರ್ಟ್‌ನಲ್ಲಿ ರಿಟ್ ಹಾಕಿಸ್ತಾರೆ. ಮಧುಗಿರಿ, ಶಿರಾಗೆ ನೀರು ಕೊಡಿ ಅಂತ ಈಗ ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ. ಅಲ್ಲಿ ರದ್ದು ಮಾಡುತ್ತಾರೆ. ಗೋದಾವರಿ ನೀರಿನ ಬಗ್ಗೆ ಶನಿವಾರ ಡಿಟೇಲ್ ಆಗಿ ಪತ್ರ ಬರೆದಿದ್ದೇನೆ. ನಾನು ಈಗಿನ ಪ್ರಧಾನಿಗಳನ್ನ ಹೊಗೊಳೋಕೆ ಬರಲ್ಲ. ವಾಜಪೇಯಿ ನನಗೆ ಸಹಕಾರ ಕೊಡ್ತೀನಿ ಅಂದರು ನಾನು ಬೇಡ ಅಂದೆ. ನನ್ನ ಜನ ನಾನು ಹೋದ ಮೇಲೆ ಈ ಬವಣೆಯಿಂದ ಪಟ್ಟ ನೋವನ್ನ ಈ ಆತ್ಮ ನೋಡುತ್ತದೆ. ನಾನು ನರಕ, ಸ್ವರ್ಗದಲ್ಲಿ ಇರುತ್ತೇನೋ ಗೊತ್ತಿಲ್ಲ. ಆದರೆ ನನ್ನ ಆತ್ಮಕ್ಕೆ ಶಾಂತಿ ಸಿಗಲ್ಲ. ನರ್ಮದಾ ನೀರು ಬಗ್ಗೆ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಮುಂದಿನ 3 ಗಂಟೆಗಳ ಕಾಲ ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಮುನ್ಸೂಚನೆ

ಚಿಕ್ಕಬಳ್ಳಾಪುರ, ಕೋಲಾರದ ಜನ ನೀರಿಗಾಗಿ ಏನು ಮಾಡಬೇಕು? ಇರೋ ಅವಧಿಯಲ್ಲಿ ರಾಜ್ಯಸಭೆಯಲ್ಲಿ ನನ್ನ ಹೋರಾಟ ಮಾಡುತ್ತೇನೆ. ನನಗೆ ಕಾಲಿಗೆ ನೋವು ಇರಬಹುದು. ಬುದ್ದಿಗೆ ನನಗೆ ನೋವಿಲ್ಲ. ಸಂಸತ್‌ನಲ್ಲಿ ಹೋರಾಟ ಮಾಡೋ ಶಕ್ತಿ ನನಗೆ ಇದೆ. ಪ್ರಧಾನಿಗಳಿಗೆ ಮನವರಿಕೆ ಮಾಡುತ್ತೇನೆ. 17 ಜನರನ್ನು ಕೊಟ್ಟಿದ್ದೇವೆ, ಕೈ ಬಿಡಬೇಡಿ ಅಂತ ಹೇಳುತ್ತೇನೆ. ನೀರಿನ ಸಮಸ್ಯೆ ಪರಿಹಾರ ಮಾಡೋಕೆ ಮೋದಿಯಿಂದ ಮಾತ್ರ ಸಾಧ್ಯ. ನನ್ನ ಜನಕ್ಕೆ ಆಗೋ ಅನ್ಯಾಯವನ್ನ ಈ ದೇಶದ ಪ್ರಧಾನಿ, ವಿಶ್ವವೇ ಗುರುತಿಸೋ ಮೋದಿ ಅವರಿಂದ ಈ ಸಮಸ್ಯೆ ಪರಿಹಾರ ಸಾಧ್ಯ. ಪಕ್ಷರಹಿತವಾಗಿ ನಾವು ಒಗ್ಗಟ್ಟಾಗಿ ನಮಗೆ ಆಗಿರೋ ಅನ್ಯಾಯ ಸರಿ ಮಾಡೋಣ ಎಂದು ಹೇಳಿದರು.  ಇದನ್ನೂ ಓದಿ: ಶೀಘ್ರದಲ್ಲೇ 8,000 ಪೊಲೀಸ್ ಪೇದೆಗಳ ಹುದ್ದೆ ಭರ್ತಿ – ಜಿ.ಪರಮೇಶ್ವರ್

Share This Article