ಶ್ರೀ ಕ್ಷೇತ್ರ ಧರ್ಮಸ್ಥಳದ ದರ್ಶನ ಸಮಯ ಬದಲಾವಣೆ

Public TV
1 Min Read
Modi Dharmasthala 2

ಮಂಗಳೂರು: ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ದರ್ಶನ ಸಮಯವನ್ನು ದೇವಳದ ಆಡಳಿತ ಮಂಡಳಿಯು ಬದಲಾವಣೆ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವ ಹಾಗೂ ದೇವರ ದರ್ಶನ ಪಡೆಯುವ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ದೇವಳದ ಆಡಳಿತ ಮಂಡಳಿಯು ದರ್ಶನ ಸಮಯವನ್ನು ಬದಲಾಯಿಸಿದೆ.

Dharmasthala Temple

ಸಾಮಾನ್ಯ ದಿನಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ದೇವರ ದರ್ಶನಕ್ಕೆ ಬೆಳಗ್ಗೆ 6.30 ರಿಂದ ಮಧ್ಯಾಹ್ನ 2.30ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಸಂಜೆ 5 ಗಂಟೆಯಿಂದ ರಾತ್ರಿ 8.30 ರವರೆಗೆ ದೇವರ ದರ್ಶನ ಪಡೆಯಬಹುದುದಾಗಿದೆ.

ಭಾನುವಾರ, ಸೋಮವಾರ ಹಾಗೂ ವಿಶೇಷ ದಿನಗಳಲ್ಲೂ ದರ್ಶನ ಸಮಯ ಬದಲಾವಣೆಯಾಗಿದೆ. ವಿಶೇಷ ದಿನಗಳಲ್ಲಿ ಬೆಳಗ್ಗೆ 6.30ರಿಂದ ಮಧ್ಯಾಹ್ನ 4 ಗಂಟೆಯವರೆಗೆ ದೇವರ ದರ್ಶನ ಪಡೆಯಬಹುದಾಗಿದೆ. ಬಳಿಕ ಸಂಜೆ 5.30ರಿಂದ ರಾತ್ರಿ 9 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

 Dharmasthala A

ಈ ಹಿಂದಿನ ಸಮಯ ಹೀಗಿತ್ತು:
ಬೆಳಗ್ಗೆ 6.30 ಗಂಟೆಯಿಂದ11.30ವರೆಗೆ ದರ್ಶನ ಬಳಿಕ ಮಧ್ಯಾಹ್ನ 12.30 ರಿಂದ 2.30 ವರೆಗೆ ದೇವರ ದರ್ಶನಕ್ಕೆ ಅವಕಾಶವಿತ್ತು. ಮಧ್ಯಾಹ್ನ 2.30 ರಿಂದ4 ಗಂಟೆಯವರೆಗೆ ದೇವಸ್ಥಾನದ ಬಾಗಿಲು ಬಂದ್ ಆಗುತ್ತಿತ್ತು. ನಂತರ 4 ಗಂಟೆಯಿಂದ ರಾತ್ರಿ 8.30ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಭಕ್ತರ ಅನುಕೂಲಕ್ಕಾಗಿ ದರ್ಶನದ ಸಮಯವನ್ನು ಹೆಚ್ಚುವರಿಯಾಗಿ‌ ಮಾಡಿದ್ದು, ಭಕ್ತರು ಸಹಕಾರಿಸುವಂತೆ ಆಡಳಿತ ಮಂಡಳಿ ವಿನಂತಿ ಮಾಡಿದೆ.

Dharmasthala Security 30

Share This Article
Leave a Comment

Leave a Reply

Your email address will not be published. Required fields are marked *