ನವದೆಹಲಿ: ಮುಂಬೈ ಮೂಲದ ಯುವತಿ ಶ್ರದ್ಧಾ ವಾಕರ್ (Shraddha) ಹತ್ಯೆ ಪ್ರಕರಣ (Delhi Murder) ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಹೊರ ಬರುತ್ತಿದ್ದು, ಸಾಕ್ಷ್ಯಗಳ ನಾಶಕ್ಕೆ ನಿರ್ಧರಿಸಿದ್ದ ಆರೋಪಿ ಅಫ್ತಾಬ್ (Aftab) ಯುವತಿಯ ಮುಖ ಸುಟ್ಟು ಹಾಕಿದ್ದ ಎಂದು ತಿಳಿದು ಬಂದಿದೆ.
ಭೌತಿಕ ಸಾಕ್ಷ್ಯಗಳ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ತಲೆ ಬುರುಡೆ ಮತ್ತು ತುಂಡರಿಸಿದ ಕೈ ಸಿಕ್ಕಿದ್ದು, ತಲೆ ಸುಟ್ಟ ಸ್ಥಿತಿಯಲ್ಲಿತ್ತು ಎಂದು ತಿಳಿದು ಬಂದಿದೆ. ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ ಅಫ್ತಾಬ್ ನಿತ್ಯ 2 ತುಂಡುಗಳನ್ನು ಎಸೆದು ಬರುತ್ತಿದ್ದ. ಕೊನೆಯವರೆಗೂ ತಲೆ ಬುರುಡೆ ಉಳಿಸಿಕೊಂಡಿದ್ದ ಅಫ್ತಾಬ್ ಅದರ ಗುರುತು ಸಿಗದಂತೆ ಸುಟ್ಟು ಎಸೆದಿದ್ದ ಎಂದು ಮೂಲಗಳು ಹೇಳಿವೆ.
Advertisement
Advertisement
ಸಾಕ್ಷಿ ಮತ್ತು ಮುಖದ ಗುರುತು ಅಳಿಸುವ ಬಗ್ಗೆ ಗೂಗಲ್‌ನಿಂದ ಮಾಹಿತಿ ಹುಡುಕಿ, ಅದರಂತೆ ತಲೆ ಸುಟ್ಟ ಹಾಕಿ, ಬಳಿಕ ಅದನ್ನು ಕೈ ಭಾಗದೊಂದಿಗೆ ಎಸೆದು ಬಂದಿರುವುದಾಗಿ ಅಫ್ತಾಬ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಇದನ್ನೂ ಓದಿ: ಶ್ರದ್ಧಾ ಕೊಲೆ ಪ್ರಕರಣ- ಸಾಕ್ಷಿ ನಾಶಕ್ಕೆ OLXನಲ್ಲಿ ಫೋನ್ ಮಾರಿದ್ದ ಅಫ್ತಾಬ್!
Advertisement
Advertisement
ಸದ್ಯ ಪತ್ತೆಯಾಗಿರುವ ತಲೆ ಬರುಡೆಯನ್ನು ಡಿಎನ್‌ಎ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದು, ಈವರೆಗೂ ಸಿಕ್ಕಿರುವ ಸಾಕ್ಷ್ಯಗಳನ್ನು ಏಮ್ಸ್‌ನಲ್ಲಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ಶ್ರದ್ಧಾ ತಂದೆ ವಿಕಾಸ್ ವಾಕರ್ ಅವರ ಸ್ಯಾಂಪಲ್ ಪಡೆದಿದ್ದು ಅದನ್ನು ಮ್ಯಾಚ್ ಮಾಡುವ ಕಾರ್ಯ ನಡೆಯಲಿದೆ. ಇದನ್ನೂ ಓದಿ: ಶ್ರದ್ಧಾ ದೇಹ ತುಂಡರಿಸಿದ್ರೂ ತಲೆಬುರುಡೆಗೆ ಹಾನಿ ಮಾಡಿಲ್ಲ- ಫ್ರಿಡ್ಜ್‌ನಲ್ಲಿಟ್ಟು ಆಗಾಗ ನೋಡ್ತಿದ್ದ ಅಫ್ತಾಬ್