ರಾಜ್‌ಕುಮಾರ್ ರಾವ್, ಶ್ರದ್ಧಾ ಕಪೂರ್ (Shraddha Kapoor) ನಟನೆಯ ‘ಸ್ತ್ರೀ 2’ ಸಿನಿಮಾ ಚಿತ್ರಮಂದಿರದಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. 600 ಕೋಟಿ ರೂ. ಹೆಚ್ಚು ಸಿನಿಮಾ ಕಲೆಕ್ಷನ್ ಮಾಡಿ ‘ಸ್ತ್ರೀ 2’ ಚಿತ್ರ ಮುನ್ನುಗ್ಗುತ್ತಿದೆ. ಇದನ್ನೂ ಓದಿ:ಸನಾತನ ಧರ್ಮದ ಬಗ್ಗೆ 100 ಬಾರಿ ಯೋಚಿಸಿ ಮಾತನಾಡಿ: ಕಾರ್ತಿ ವಿರುದ್ಧ ಪವನ್ ಕಲ್ಯಾಣ್ ಕಿಡಿ
ಸಿನಿಮಾ ರಿಲೀಸ್ ಆಗಿ 39 ದಿನ ಕಳೆದರೂ ಈ ಚಿತ್ರಕ್ಕೆ ಬೇಡಿಕೆ ಕಮ್ಮಿಯಾಗಿಲ್ಲ. ಭಾರತದಲ್ಲಿ 604.22 ಕೋಟಿ ರೂ. ಕಲೆಕ್ಷನ್ ಮಾಡಿದೆ. ಸಿನಿಮಾ ಸದ್ದು ಮಾಡುತ್ತಿದೆ. ಸಿನಿಮಾ ರಿಲೀಸ್ ಆಗಿ ಹಲವು ದಿನಗಳು ಕಳೆದರೂ ಚಿತ್ರಮಂದಿರಕ್ಕೆ ಪ್ರೇಕ್ಷಕರು ದೌಡಾಯಿಸುತ್ತಿದ್ದಾರೆ.
View this post on Instagram
ಶ್ರದ್ಧಾ ಕಪೂರ್, ರಾಜ್‌ಕುಮಾರ್ ರಾವ್ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ವಿಲನ್ ಆಗಿ ಸರ್ಕಟ ಪಾತ್ರದಲ್ಲಿ ಅಬ್ಬರಿಸಿದ್ದ ಸುನೀಲ್ ಕುಮಾರ್ ಅಭಿನಯವನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.
ಅಂದಹಾಗೆ, ‘ಸ್ತ್ರೀ 2’ ಚಿತ್ರ ಆ.15ರಂದು ರಿಲೀಸ್ ಆಗಿತ್ತು. ಚಿತ್ರದಲ್ಲಿ ಶ್ರದ್ಧಾ ಜೊತೆ ತಮನ್ನಾ ಭಾಟಿಯಾ, ಪಂಕಜ್ ತ್ರಿಪಾಠಿ, ವರುಣ್ ಧವನ್ ಸೇರಿದಂತೆ ಅನೇಕರು ನಟಿಸಿದ್ದಾರೆ.