ಮುಂಬೈ: ಬಾಲಿವುಡ್ ತಾರೆಯರು ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಫೇಸ್‍ಬುಕ್, ಟ್ವಿಟ್ಟರ್, ಇನ್ ಸ್ಟಾಗ್ರಾಂ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆ್ಯಕ್ಟೀವ್ ಇರುತ್ತಾರೆ. ಆದರೆ ಶಕ್ತಿ ಕಪೂರ್ ಪುತ್ರಿ ಆಶಿಕಿ ಬೆಡಗಿ ಶ್ರದ್ಧಾ ಮತ್ತು ನಟ ರಾಜ್‍ಕುಮಾರ್ ರಾವ್ ತಮ್ಮ ಇನ ಸ್ಟಾಗ್ರಾಂನ ಫೋಟೋಗಳನ್ನು ಡಿಲೀಟ್ ಮಾಡಿಕೊಂಡಿದ್ದಾರೆ.
ಆಶಿಕಿ ಸಿನಿಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದ ಶ್ರದ್ಧಾ ಭಿನ್ನ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ.ಎಲ್ಲ ಫೋಟೋಗಳು ಡಿಲೀಟ್ ಮಾಡಿದ ಶ್ರದ್ಧಾ ಮೂರು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಫೋಟೋಗಳಲ್ಲಿ ‘ಮರ್ದ್ ಕೋ ದರ್ದ್ ಹೋಗಾ’ (ಪುರುಷನಿಗೆ ನೋವು ಆಗುತ್ತೆ) ಎಂಬ ಸಾಲುಗಳನ್ನು ಮಾತ್ರ ಬರೆಯಲಾಗಿದೆ.
ಇಬ್ಬರ ಖಾತೆಯಿಂದ ಫೋಟೋಗಳು ಡಿಲೀಟ್ ಆಗುತ್ತಿದ್ದಂತೆ ಅಭಿಮಾನಿಗಳು ಖಾತೆ ಹ್ಯಾಕ್ ಆಗಿರಬಹುದು ಎಂದು ತಿಳಿದಿದ್ದರು. ಆದ್ರೆ ಫೋಟೋ ಡಿಲೀಟ್ ಮಾಡಿರುವ ಉದ್ದೇಶವನ್ನು ಸದ್ಯ ಶ್ರದ್ಧಾ ರಿವೀಲ್ ಮಾಡಿದ್ದಾರೆ. ಸದ್ಯ ಶ್ರದ್ಧಾ ನಟನೆಯ `ಸ್ತ್ರೀ’ ಚಿತ್ರ ಬಿಡುಗಡೆಯಾಗಲಿದ್ದು, ಸಿನಿಮಾ ಪ್ರಮೋಶನಕ್ಕಾಗಿ ಫೋಟೋಗಳನ್ನು ಡಿಲೀಟ್ ಮಾಡಿಕೊಂಡಿದ್ದಾರೆ. ಮಹಿಳಾ ಪ್ರಧಾನ ಆಧರಿತ ಚಿತ್ರ ಇದಾಗಿದ್ದು, ಕಾಮಿಡಿ ಮತ್ತು ಸಸ್ಪೆನ್ಸ್ ಕಥೆಯನ್ನು ಹೊಂದಿದೆ. ಚಿತ್ರದಲ್ಲಿ ಶ್ರದ್ಧಾಗೆ ಜೊತೆಯಾಗಿ ರಾಜ್‍ಕುಮಾರ್ ರಾವ್ ನಟಿಸಿದ್ದಾರೆ.
ಇತ್ತ ಚಿತ್ರದ ನಾಯಕ ನಟ ರಾಜ್‍ಕುಮಾರ್ ರಾವ್ ಸಹ ಇನ್ ಸ್ಟಾಗ್ರಾಂನ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ರಾಜ್‍ಕುಮಾರ್ ಸಹ ಮೂರು ಫೋಟೋಗಳನ್ನು ಪೋಸ್ಟ್ ಮಾಡಿದ್ದು, `ಓ ಸ್ತ್ರೀ ಕಲ್ ಆನಾ’ (ಓ ಮಹಿಳೆ ನಾಳೆ ಬಾ) ಎಂಬ ಸಾಲುಗಳನ್ನು ಬರೆಯಲಾಗಿದೆ. ಚಿತ್ರದ ಪ್ರಮೋಶನ್ ಗಾಗಿ ಶ್ರದ್ಧಾ ಮತ್ತು ರಾಜ್‍ಕುಮಾರ್ ತಮ್ಮ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿಕೊಂಡಿದ್ದಾರೆ. ಚಿತ್ರ ಆಗಸ್ಟ್ 31ಕ್ಕೆ ಬಿಡುಗಡೆಯಾಗಲಿದೆ.