ಬೆಂಗಳೂರು: ತಾಕತ್ತು ಎನ್ನುವ ಭಾಗ್ಯವನ್ನು ಚುನಾವಣೆಗೂ ಮೊದಲೇ ಘೋಷಣೆ ಮಾಡಿ. ಭಾಗ್ಯಗಳನ್ನು ಆಧರಿಸಿ ಅಧಿಕಾರಕ್ಕೆ ಬಂದಿರುವ ನೀವು ಭ್ರಷ್ಟಾಚಾರ ರಹಿತವಾದ ಆಡಳಿತ ಕೊಟ್ಟು ನಿಮ್ಮ ತಾಕತ್ತು ತೋರಿಸಿ ಎಂದು ಸಿಎಂ ಸಿದ್ದರಾಮಯ್ಯಗೆ (Siddaramaiah) ಮಾಜಿ ಸಚಿವ ಅಶ್ವಥ್ ನಾರಾಯಣ್ (Ashwath Narayan) ಸವಾಲು ಹಾಕಿದ್ದಾರೆ.
ಗ್ಯಾರಂಟಿ ಘೋಷಣೆ ಮಾಡಿ ಎಂದು ಸಿದ್ದರಾಮಯ್ಯ ಮೋದಿಗೆ ಸವಾಲು ಹಾಕಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ತಿರುಗೇಟು ನೀಡಿರುವ ಅಶ್ವಥ್ ನಾರಾಯಣ್, ಅನ್ ಕಂಡೀಷನ್ ಆಗಿ ಭಾಗ್ಯ ಘೋಷಣೆ ಮಾಡಿದ್ರಿ, ಷರತ್ತು ಇಲ್ಲದೇ ಯೋಜನೆಗಳನ್ನು ಜಾರಿಗೆ ತರುತ್ತೀರಿ ಎಂದು ಹೇಳಿದ್ರಿ. ಈಗ ಮಾತು ಉಳಿಸಿಕೊಳ್ಳದೇ ಗ್ಯಾರಂಟಿ ಯೋಜನೆಗಳನ್ನು ನಾಡಿಗೆ ಕೊಟ್ಟಿದ್ದಾರೆ ಎಂದರು.
ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಬೇಕು. ಬಡವರು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕೌಶಲ್ಯತೆ ಹಾಗೂ ಗುಣಮಟ್ಟ ಶಿಕ್ಷಣ ಕೊಡುವ ತಾಕತ್ತು ನಿಮಗೆ ಇದ್ದರೆ ತೋರಿಸಿ. ಸಿದ್ದರಾಮಯ್ಯ ಅವರೇ, ನಿಮಗೆ ಬಹಳ ವರ್ಷದ ಅನುಭವ ಇದೆ ಅಲ್ವಾ? ನಿಮಗೆ ತಾಕತ್ತು ಇದ್ದರೆ ನಿಮ್ಮ ಕಾಳಜಿ ಹಾಗೂ ಅನುಭವಗಳನ್ನು ಗುಣಮಟ್ಟದ ಶಿಕ್ಷಣ ಕೊಡುವ ಮೂಲಕ ತೋರಿಸಿ. ನಿಮಗೆ ಯಾರು ವಿದ್ಯಾವಂತರು ಆಗಬಾರದು. ನಿಮಗೆ ಎಲ್ಲರೂ ಅವಿದ್ಯಾವಂತರು, ಅಸಹಾಯಕರು ಆಗಿರಬೇಕು. ಉತ್ತಮ ಗುಣಮಟ್ಟದ ಶಿಕ್ಷಣ ಏಕೆ ಕೊಡಬೇಕು ಎಂಬುದು ನಿಮಗೆ ಗೊತ್ತಿದ್ಯಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕನಸು ಭಗ್ನಗೊಂಡ ಹೆಚ್‌ಡಿಕೆ, ಭಗ್ನಪ್ರೇಮಿಯಂತೆ ವ್ಯಾಘ್ರರಾಗಿದ್ದಾರೆ: ದಿನೇಶ್ ಗುಂಡೂರಾವ್ ತಿರುಗೇಟು
ಭ್ರಷ್ಟಾಚಾರ ರಹಿತವಾದ ಆಡಳಿತ ಕೊಟ್ಟು ನಿಮ್ಮ ತಾಕತ್ತು ತೋರಿಸಿ. ಬರೀ ವರ್ಗಾವಣೆಗೆ, ಎಲ್ಲ ಪೇಮೆಂಟ್.. ಪೇಮೆಂಟ್.. ಪೇಮೆಂಟ್.. ನಿಮ್ಮ ಸರ್ಕಾರದ ಮೇಲೆ, ನಿಮ್ಮ ಕುಟುಂಬದ ಮೇಲೆ ಎಲ್ಲಾ ಆಪಾದನೆ ಇದೆ. ನೀವು ಭ್ರಷ್ಟಾಚಾರ ಇಲ್ಲದೇ ಆಡಳಿತ ತೋರಿಸಿ ಎಂದು ಅಶ್ವಥ್ ನಾರಾಯಣ್ ಸವಾಲು ಹಾಕಿದರು. ಇದನ್ನೂ ಓದಿ: ಕಾಂಗ್ರೆಸ್ ಸುಳ್ಳು ಹೇಳುವ ಸ್ಪರ್ಧೆಗಿಳಿದಿದೆ: ಪ್ರಹ್ಲಾದ್ ಜೋಶಿ
Web Stories