ಚಿಕ್ಕಬಳ್ಳಾಪುರ: ನಾಯಿ ಆಸೆಯನ್ನ ತೋರಿಸಿ ಚಿರತೆಯನ್ನು ಬೋನಿಗೆ ಬೀಳಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ತೋಟದ ಮನೆಯಲ್ಲಿ ಕಟ್ಟಿ ಹಾಕಲಾಗಿದ್ದ ಸಾಕುನಾಯಿಯ ಮೇಲೆ ದಾಳಿ ಮಾಡಿ ಭಕ್ಷಿಸಿದ್ದ ಚಿರತೆಯನ್ನ ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದಾರೆ. ಕಳೆದ ಹಲವು ದಿನಗಳಿಂದ ಕೋಳೂರು ಸಮೀಪದ ಅರಣ್ಯ ಇಲಾಖೆ ನಿರ್ಮಿಸಿರುವ ಪ್ಲಾಂಟೇಷನ್ ಬಳಿ ಚಿರತೆ ಕಂಡುಬಂದಿತ್ತು. ಮೇ 29 ರ ಭಾನುವಾರ ರಾತ್ರಿ ಹರೀಶ್ ಅವರ ತೋಟದ ಮನೆಗೆ ನುಗ್ಗಿ, ಸಾಕುನಾಯಿಯನ್ನು ಕೊಂದು ಹಾಕಿತ್ತು. ಇದನ್ನೂ ಓದಿ: ಯೋಧರು ಪ್ರಯಾಣಿಸುತ್ತಿದ್ದ ವಾಹನ ಸ್ಫೋಟ: 3 ಸೈನಿಕರ ಸ್ಥಿತಿ ಗಂಭೀರ
ಶ್ರೀನಿವಾಸಪುರ, ಮರಳೇನಹಳ್ಳಿ, ಕಮಲೂರು, ಶಿರವಾರ, ಅಂತರಹಳ್ಳಿ, ಕೋಳೂರು ಸುಮಾರು ಎರಡು, ಮೂರು ಕಿಮೀ ಅಂತರದ ಅಕ್ಕಪಕ್ಕದ ಗ್ರಾಮಗಳಲ್ಲಿ ಚಿರತೆ ಇರುವುದು ಪತ್ತೆಯಾಗಿತ್ತು. ಈ ಕುರಿತಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ, ತ್ವರಿತವಾಗಿ ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು.
ಹೀಗಾಗಿ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು, ಅದೇ ದಿನ ಕೋಳೂರು ಪ್ಲಾಂಟೇಷನ್ ಬಳಿ ಬೋನ್ ಅಳವಡಿಸಿ, ಚಿರತೆ ಸೆರೆಗೆ ಕ್ರಮಕೈಗೊಂಡಿದ್ದರು. ಇದರ ಬೆನ್ನಲ್ಲೇ ರಾತ್ರಿ ಭಾನುವಾರ ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರಲ್ಲಿ ನೆಮ್ಮದಿ ತಂದಿದೆ. ಇದನ್ನೂ ಓದಿ: ಹಾಸನ ಕಟ್ಟಿನಕೆರೆ ಮಾರುಕಟ್ಟೆ ಬಂದ್ – 500ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್