ಚೆನ್ನೈ: 17ನೇ ಆವೃತ್ತಿಯ ಐಪಿಎಲ್ (IPL 2024) ಟೂರ್ನಿ ಅದ್ಧೂರಿಯಾಗಿ ಚಾಲನೆಗೊಂಡಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವಿನ ಖಾತೆ ತೆರೆದಿದೆ. ನೂತನ ನಾಯಕ ರುತುರಾಜ್ ಗಾಯಕ್ವಾಡ್ (Ruturaj Gaikwad) ಅವರ ನೇತೃತ್ವದಲ್ಲಿ ಸಿಎಸ್‌ಕೆ ಗೆಲುವು ಸಾಧಿಸಿದೆ. ಆದ್ರೆ ಪಂದ್ಯದ ಬಳಿಕ ರುತುರಾಜ್ ನಾಮಕಾವಸ್ಥೆಗೆ ಮಾತ್ರ ನಾಯಕನಾದ್ರಾ ಅನ್ನೋ ಪ್ರಶ್ನೆ ಎದ್ದಿದೆ.
ಟಾಸ್ ಸೋತು ಆರ್‌ಸಿಬಿ ವಿರುದ್ಧ ಮೊದಲು ಸಿಎಸ್‌ಕೆ ಫೀಲ್ಡಿಂಗ್ (Field) ಮಾಡಿತು. ಈ ವೇಳೆ ರುತುರಾಜ್ ನಾಯಕನಾಗಿದ್ದರೂ, ಎಂ.ಎಸ್ ಧೋನಿ ಅವರ ಮೇಲೆ ಕ್ಯಾಮೆರಾ ಹೆಚ್ಚು ಫೋಕಸ್ ಆಗಿತ್ತು. ರುತುರಾಜ್ ಬೌಲರ್‌ಗಳೊಂದಿಗೆ ಹಾಗೂ ಫೀಲ್ಡಿಂಗ್ ಸೆಟ್ ಮಾಡುತ್ತಿದ್ದ ದೃಶ್ಯ ಕೆಲವು ವೇಳೆ ಕಂಡುಬಂದರೂ ಧೋನಿ (MS Dhoni) ಫೀಲ್ಡಿಂಗ್ ಸೆಟ್ ಮಾಡುತ್ತಿದ್ದಾಗ ಮಾತ್ರ ಅವರನ್ನು ಹೆಚ್ಚಾಗಿ ತೋರಿಸಲಾಗುತ್ತಿತ್ತು.
Advertisement
Advertisement
ಈ ವೇಳೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag), ದಯವಿಟ್ಟು ರುತುರಾಜ್ ಅವರ ಮುಖವನ್ನು ತೋರಿಸು ಗುರು ಅವರು ತಂಡದ ನಾಯಕ, ಕ್ಯಾಮೆರಾ ಮ್ಯಾನ್ ಧೋನಿಯ ಮುಖವನ್ನ ಮಾತ್ರ ತೋರಿಸ್ತಿದ್ದಾರೆ ಅಂತಾ ಹೇಳಿದ್ದಾರೆ. ಸೆಹ್ವಾಗ್ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಇದನ್ನೂ ಓದಿ: IPL 2024: ತವರಿನಲ್ಲಿ ರಾಯಲ್ ಆಗಿ ಚಾಲೆಂಜ್ ಗೆದ್ದ ಚೆನ್ನೈ – 6 ವಿಕೆಟ್‌ಗಳ ಜಯ, ಸಿಎಸ್‌ಕೆ ಶುಭಾರಂಭ
Advertisement
Advertisement
ರುತುರಾಜ್ ನಾಯಕತ್ವ ಹೊಗಳಿದ ಪಠಾಣ್:
ಆರ್‌ಸಿಬಿ ವಿರುದ್ಧ ಚೆನ್ನೈ ಗೆಲುವು ಸಾಧಿಸುತ್ತಿದ್ದಂತೆ ಇರ್ಫಾನ್ ಪಠಾಣ್, ರುತುರಾಜ್ ಅವರ ನಾಯತ್ವವನ್ನು ಹೊಗಳಿದ್ದಾರೆ. ಮೊದಲ 26 ಎಸೆತಗಳ ನಂತರ ಸಿಎಸ್‌ಕೆ ಬ್ರಿಲಿಯಂಟ್ ಕಮ್ ಬ್ಯಾಕ್ ಮಾಡಿತು. ಒತ್ತಡದ ಸಮಯದಲ್ಲಿ ರುತುರಾಜ್ ಬೌಲಿಂಗ್ ಬದಲಾವಣೆ ಮಾಡುತ್ತಿದ್ದ ರೀತಿ ಆಕರ್ಷಕವಾಗಿತ್ತು ಎಂದು ಕೊಂಡಾಡಿದ್ದಾರೆ.
ಚೆನ್ನೈನ ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ (RCB) 173 ರನ್ ಗಳಿತ್ತು. 174 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 18.4 ಓವರ್‌ಗಳಲ್ಲಿ 176 ರನ್ ಬಾರಿ 17ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆಯಿತು. ಇದನ್ನೂ ಓದಿ: IPL 2024: 21 ರನ್ ಬಾರಿಸಿದ್ರೂ ಎರಡೆರಡು ದಾಖಲೆ ಬರೆದ ಕಿಂಗ್ ಕೊಹ್ಲಿ!