ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡಿದ್ದ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್‍ಗೆ ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿಯಿಂದ ಶೋಕಾಸ್ ನೋಟಿಸ್ ನೀಡಿದೆ.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ಲಕ್ಷ್ಮೀನಾರಾಯಣ್ ಹೇಳಿಕೆ ನೀಡಿದ್ದರು. ಈ ಸಂಬಂಧ 7 ದಿನದೊಳಗೆ ಸಮಂಜಸವಾದ ಲಿಖಿತ ಹೇಳಿಕೆ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಹಿಂಸಾಚಾರಕ್ಕೆ ನೀವೇ ಹೊಣೆ, ಇಡೀ ದೇಶದ ಕ್ಷಮೆ ಕೇಳಬೇಕು – ನೂಪುರ್ ಶರ್ಮಾಗೆ ಸುಪ್ರೀಂ ತರಾಟೆ
Advertisement
Advertisement
ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಪಕ್ಷದ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡಿದ್ದೀರಿ. ತಮ್ಮ ಹೇಳಿಕೆಗಳು ಪಕ್ಷದ ಘನತೆ, ಗೌರವಗಳಿಗೆ ಕುಂದುಂಟು ಮಾಡಿದೆ. ಈ ಸಂಬಂಧ ಲಿಖಿತ ವಿವರಣೆ ನೀಡಿದೆ. ಇಲ್ಲವಾದಲ್ಲಿ ಮುಂದಿನ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
Advertisement
Advertisement
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಾಲಾಯಕ್‍ಗಳು ಎಂದು ಎಂ.ಡಿ.ಲಕ್ಷ್ಮೀನಾರಾಯಣ್ ಹೇಳಿಕೆ ನೀಡಿದ್ದರು. ಅಲ್ಲದೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಸಿಎಂ ಸ್ಥಾನದ ಆಸೆ ಬಿಟ್ಟು ಮುಂದೆ ದಲಿತರನ್ನು ಸಿಎಂ ಮಾಡುವುದಾಗಿ ಘೋಷಿಸುವಂತೆ ಬಹಿರಂಗ ಪತ್ರ ಕೂಡ ಬರೆದಿದ್ದರು.