DistrictsKolarLatestLeading NewsMain Post

ರಮೇಶ್ ಜಾರಕಿಹೊಳಿ ಇನ್ನೊಂದು ವೀಡಿಯೋ ಮಾಡೋದಕ್ಕೆ ಅಧಿಕಾರಕ್ಕೆ ಬರಬೇಕಾ? ಹೆಚ್‌ಡಿಕೆ ವ್ಯಂಗ್ಯ

ಕೋಲಾರ: ರಮೇಶ್ ಜಾರಕಿಹೊಳಿ (Ramesh Jarkiholi) ಅವರು ಇನ್ನೊಂದು ವೀಡಿಯೋ ಮಾಡೋದಕ್ಕೆ ಅಧಿಕಾರಕ್ಕೆ ಬರಬೇಕಾ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ವ್ಯಂಗ್ಯವಾಡಿದ್ದಾರೆ.

ಕೋಲಾರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್ (Congress) ಅಧಿಕಾರಕ್ಕೆ ಬರೋದಕ್ಕೆ ಕುಮಾರಸ್ವಾಮಿ ಪಂಚರತ್ನ ಯಾತ್ರೆ ಮಾಡ್ತಿದ್ದಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ರಷ್ಯಾಗೆ ಕೌಂಟರ್ ಕೊಡಲು 125 ಆ್ಯಂಟಿ ಏರ್‌ಕ್ರಾಫ್ಟ್ ಗನ್ – ಉಕ್ರೇನ್ ಬೆಂಬಲಕ್ಕೆ ಬ್ರಿಟನ್

ನಾವು ಅಧಿಕಾರಕ್ಕೆ ಬರದೇ ಇನ್ಯಾರು ಬರಬೇಕು. ರಮೇಶ್ ಜಾರಕಿಹೊಳಿ ಅವರು ಇನ್ನೊಂದು ವೀಡಿಯೋ ಮಾಡೋಕೆ ಅಧಿಕಾರಕ್ಕೆ ಬರಬೇಕಾ ಎಂದು ಸಿಡಿ ಲೇಡಿಯ ವೀಡಿಯೋ ಘಟನೆಯನ್ನು ಮತ್ತೆ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: 2047ರ ವೇಳೆಗೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಭಾರತಕ್ಕೆ ಈಗಿಂದಲೇ ತಯಾರಿ ಅಗತ್ಯ – ಪ್ರಹ್ಲಾದ್ ಜೋಶಿ

ಸಿಎಂಗೆ ಧಮ್, ತಾಕತ್ ಇದಿಯಾ?
ಚಿಲುಮೆ ಸಂಸ್ಥೆ (Chilume NGO) ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ತಾಕತ್ತು, ಧಮ್ ಬಗ್ಗೆ ಮಾತನಾಡುವ ಬಿಜೆಪಿ ಸಚಿವರ ಖಾಲಿ ಚೆಕ್ ಸಿಕ್ಕಿದೆ. ದುಡ್ಡು ಸಹ ಸಿಕ್ಕಿದೆ ಅನ್ನೊ ಮಾಹಿತಿಯಿದೆ. ಮಂತ್ರಿಯ ದುಡ್ಡು, ಚೆಕ್‌ನಲ್ಲಿ ಏಕೆ ಸಿಕ್ತು? ಆ ಮಂತ್ರಿಯನ್ನು ಇಟ್ಟುಕೊಂಡು ಯಾವ ತನಿಖೆ ನಡೆಸುತ್ತೀರಿ? ಮುಖ್ಯಮಂತ್ರಿಗಳಿಗೆ ಧಮ್, ತಾಕತ್ತು ಇದ್ದರೆ, ಆ ಸಚಿವರನ್ನು ವಜಾ ಮಾಡಿ ಎಂದು ಸವಾಲ್ ಹಾಕಿದ್ದಾರೆ.

ಜೆಡಿಎಸ್, ಕಾಂಗ್ರೆಸ್ ಮತ ಹೆಚ್ಚಿರುವ ಕಡೆ ಮತದಾರರನ್ನು ಕೈಬಿಟ್ಟಿದ್ದಾರೆ. ಕಾಂಗ್ರೆಸ್ ಈಗಾಗಲೇ ದೂರನ್ನ ಕೊಟ್ಟಿದ್ದಾರೆ. ನಮ್ಮ ಪಕ್ಷದಿಂದಲೂ ಚುನಾವಣಾ ಆಯೋಗಕ್ಕೆ ದೂರು ಕೊಡಲು ಹೇಳಿದ್ದೇನೆ. ಚಿಲುಮೆ ಕಚೇರಿ ಮೇಲೆ ದಾಳಿಯಾಗಿದೆ. ಇಂತಹ ಸಂದರ್ಭದಲ್ಲಿ ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆಯಾಗಿ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button