ವಾಷಿಂಗ್ಟನ್: ಈಗಾಗಲೇ ಹಲವು ಸಮೀಕ್ಷೆಗಳನ್ನು ನಡೆಸಿ, ಅದರ ಫಲಿತಾಂಶಕ್ಕೆ ತಕ್ಕಂತೆ ನಡೆದುಕೊಂಡಿರುವ ಮಸ್ಕ್ ಇದೀಗ ತಾನು ಟ್ವಿಟ್ಟರ್ ಸಿಇಒ (Twitter CEO) ಸ್ಥಾನದಿಂದ ಕೆಳಗಿಳಿಯಬೇಕಾ ಎಂಬ ಪ್ರಶ್ನೆಯೊಂದಿಗೆ ಸಮೀಕ್ಷೆ ಪ್ರಾರಂಭಿಸಿದ್ದಾರೆ.
ಹೌದು, ಇತ್ತೀಚೆಗಷ್ಟೇ ಟ್ವಿಟ್ಟರ್ ಅನ್ನು ಖರೀದಿಸಿದ ಬಿಲಿಯನೇರ್ ಎಲೋನ್ ಮಸ್ಕ್ (Elon Musk) ತಾವು ಅದರ ಸಿಇಒ ಸ್ಥಾನದಿಂದ ಕೆಳಗಿಳಿಯುವ ಬಗ್ಗೆ ಯೋಜನೆ ಮಾಡಿರುವುದು ತಿಳಿದುಬಂದಿದೆ. ಮಸ್ಕ್ ತಾವು ಟ್ವಿಟ್ಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕೇ? ಎಂದು ಪ್ರಶ್ನೆಯನ್ನು ಕೇಳಿ ಸಮೀಕ್ಷೆಗೆ ‘ಎಸ್’ ಹಾಗೂ ‘ನೋ’ ಗಳಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಬಳಕೆದಾರರಲ್ಲಿ ಕೇಳಿದ್ದಾರೆ.
Advertisement
Should I step down as head of Twitter? I will abide by the results of this poll.
— Elon Musk (@elonmusk) December 18, 2022
Advertisement
ಮಸ್ಕ್ ಕೇವಲ ಸಮೀಕ್ಷೆಯನ್ನು ನಡೆಸದೇ ಇದರ ಫಲಿತಾಂಶಕ್ಕೆ ಬದ್ಧನಾಗಿರುವುದಾಗಿ ತಿಳಿಸಿದ್ದಾರೆ. ವೋಟ್ ಮಾಡುವಾಗ ಜಾಗರೂಕರಾಗಿರಿ. ಟ್ವಿಟ್ಟರ್ ಮುಖ್ಯಸ್ಥನಾಗಿ ನಾನು ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದು ನಿಮ್ಮ ಕೈಯಲ್ಲಿದೆ ಎಂದು ಮಸ್ಕ್ ಬಳಕೆದಾರರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದನ್ನೂ ಓದಿ: ಹ್ಯಾಟ್ರಿಕ್ ವೀರ ಎಂಬಾಪೆಗೆ ಸಮಾಧಾನ ಹೇಳಿದ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್
Advertisement
ಮಸ್ಕ್ ಟ್ವಿಟ್ಟರ್‌ನ ಸಿಇಒ ಆಗಿ ಹೆಚ್ಚು ಕಾಲ ಉಳಿಯಲು ಬಯಸುವುದಿಲ್ಲ ಎಂದು ಈ ಹಿಂದೆಯೇ ತಿಳಿಸಿದ್ದರು. ಮಾತ್ರವಲ್ಲದೇ ಮುಖ್ಯಸ್ಥ ಸ್ಥಾನಕ್ಕೆ ಬೇರೆಯವರನ್ನು ಹುಡುಕುತ್ತಿರುವ ಸುಳಿವನ್ನೂ ನೀಡಿದ್ದರು.
Advertisement
ಟೆಸ್ಲಾ ಸಿಇಒ ಮೈಕ್ರೋ ಬ್ಲಾಗಿಂಗ್ ಸೈಟ್ ಅನ್ನು ವಹಿಸಿಕೊಂಡಾಗಿನಿಂದ ಕಂಪನಿಯಲ್ಲಿ ಮಾಡಿರುವ ಹಲವಾರು ಬದಲಾವಣೆಗಳಿಂದ ಭಾರೀ ಟೀಕೆಗೆ ಒಳಗಾಗಿದ್ದಾರೆ. ಅವುಗಳಲ್ಲಿ ಕಂಪನಿಯ ಅರ್ಧಕ್ಕಿಂತಲೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿರುವುದು, ಹಿಂದೆ ನಿರ್ಬಂಧಿಸಿದ್ದ ಬಳಕೆದಾರರ ಖಾತೆಯನ್ನು ಮರಳಿ ತಂದಿರುವುದು ಸೇರಿವೆ. ಇದನ್ನೂ ಓದಿ: ಫಿಫಾ ವಿಶ್ವಕಪ್ 2026: ಕತಾರ್‌ಗೆ ಬೈ – ಹಾಯ್ ಹಲೋ ಅಮೆರಿಕ