ಮೈಸೂರು: ಅಧಿಕಾರಿಗಳ ಜೊತೆ ಡೀಲ್ ಹೇಗೆ ಮಾಡಬೇಕೆಂಬುದನ್ನು ನಾನು ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಕಲಿಯಬೇಕಾಗಿಲ್ಲ. ಅಧಿಕಾರಿಗಳ ಜೊತೆ ಡೀಲ್ ಮಾಡುವುದು, ಅವರಿಂದ ಕೆಲಸ ತೆಗೆಸುವುದು ಎಲ್ಲವೂ ನನಗೆ ಗೊತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಒಕ್ಕಲಿಗ ಅಧಿಕಾರಿಗಳು ಟಾರ್ಗೆಟ್ ಆಗಿದ್ದಾರೆ ಎಂಬ ಹೆಚ್‍ಡಿಕೆ ಆರೋಪ ವಿಚಾರವಾಗಿ ಮಾತನಾಡಿದ ಸಿಎಂ, ಕುಮಾರಸ್ವಾಮಿ ರಾಜಕೀಯಕ್ಕೆ ಬರುವ ಮೊದಲೇ ನಾನು ಸಚಿವನಾಗಿ ಕೆಲಸ ಮಾಡಿದ್ದೇನೆ. ಚುನಾವಣೆ ಹತ್ತಿರ ಆಗುತ್ತಿದ್ದಂತೆ ಹೆಚ್‍ಡಿಕೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅಧಿಕಾರಿಗಳ ಜೊತೆ ಹೇಗಿರಬೇಕೆಂಬ ರಾಜಕೀಯ ಪಾಠ ನನಗೆ ಹೆಚ್‍ಡಿಕೆ ಯಿಂದ ಬೇಕಾಗಿಲ್ಲ. ಅವರಿಗಿಂತ ಮುಂಚೆಯೇ ನಾನು ರಾಜಕಾರಣ ಮಾಡಿದ್ದೇನೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಟಾಂಗ್ ಕೊಟ್ಟರು.
Advertisement
Advertisement
ಇದೇ ವೇಳೆ ಕಾವೇರಿ ನಿರ್ವಹಣಾ ಮಂಡಳಿ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿಗಳು, ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಸ್ಕೀಂ ಮಾಡುತ್ತಿದ್ದಾರೆ. ಸ್ಕೀಂ ಮಾಡುವಂತೆ ಕೋರ್ಟ್ ಹೇಳಿದೆ. ನೀರು ನಿರ್ವಹಣಾ ಮಂಡಳಿ ರಚನೆ ಬಗ್ಗೆ ಬೀದಿಯಲ್ಲಿ ನಿಂತು ಮಾತನಾಡೋಲ್ಲ. ನಾರಿಮನ್ ಟೀಂ ಏನು ಹೇಳುತ್ತಾರೆ ಅದನ್ನೆ ಮಾಡುತ್ತೇವೆ, ವಿನಃ ಯಾರೋ ಹೇಳಿದ್ದನ್ನ ನಾವು ಮಾಡೋಕಾಗೋಲ್ಲ ಅಂತಾ ಅಂದ್ರು.
Advertisement
ಬಿಜೆಪಿ ವತಿಯಿಂದ ಹಾಸ್ಟೆಲ್ ದುಸ್ಥಿತಿ ವರದಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ನಮ್ಮ ಕಾಲದಲ್ಲಿ ಸ್ಥಾಪನೆಯಾದಷ್ಟು ಹಾಸ್ಟೆಲ್, ವಸತಿ ಶಾಲೆಗಳು ಬೇರೆ ಯಾವುದೇ ಕಾಲದಲ್ಲೂ ಆಗಿಲ್ಲ. ಹಾಸ್ಟೆಲ್ ಗಳ ನಿರ್ವಹಣೆಗೂ ನಮ್ಮಷ್ಟು ಗಮನ ಕೊಟ್ಟವರು ಇಲ್ಲ. ಚುನಾವಣಾ ಹತ್ತಿರ ಬರುತ್ತಿದೆ ಅಂತ ಏನೇನೋ ಹೇಳೋದಲ್ಲ. ಬಿಜೆಪಿಯವರಿಗೆ ಸುಳ್ಳು ಹೇಳೋದು ಬಿಟ್ಟು ಬೇರೇನೂ ಗೊತ್ತಿಲ್ಲ ಅಂತಾ ವಾಗ್ದಾಳಿ ನಡೆಸಿದ್ರು.