ತಮ್ಮ 60ನೇ ವಯಸ್ಸಿಗೆ 2ನೇ ಮದುವೆಯಾಗಿ (2nd marriage) ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು ನಟ ಆಶಿಶ್ ವಿದ್ಯಾರ್ಥಿ. ಅವರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಆ ಫೋಟೋಗಳ ಕುರಿತಂತೆ ಸಾಕಷ್ಟು ಜನ ನೆಗೆಟಿವ್ ಕಾಮೆಂಟ್ ಮಾಡಿದ್ದರು. ಈ ವಯಸ್ಸಿನಲ್ಲಿ ಮದುವೆ ಯಾಕೆ? ಮದುಕನ ಮದುವೆ ಹೀಗೆ ನಾನಾ ರೀತಿಯಲ್ಲಿ ಮನಸ್ಸಿಗೆ ನೋವನ್ನುಂಟು ಮಾಡುವಂತೆ ಟ್ರೋಲ್ (troll) ಮಾಡಿದ್ದರು.
ಇದೇ ಮೊದಲ ಬಾರಿಗೆ ನೆಗೆಟಿವ್ ಕಾಮೆಂಟ್ ಬಗ್ಗೆ ಆಶಿಶ್ ವಿದ್ಯಾರ್ಥಿ ಮಾತನಾಡಿದ್ದಾರೆ. ‘ಅನೇಕರು ನನ್ನ ಮದುವೆ ಬಗ್ಗೆ ಟ್ರೋಲ್ ಮಾಡಿದ್ದಾರೆ. ಕೆಟ್ಟದ್ದಾಗಿ ಕಾಮೆಂಟ್ ಮಾಡಿದ್ದಾರೆ. ಈ ವಯಸ್ಸಿನಲ್ಲಿ ಮದುವೆ ಆದರೆ ತಪ್ಪೇನು? ನಾನು ಒಂಟಿಯಾಗಿ, ನೆಮ್ಮದಿಯಿಲ್ಲದೇ ಸಾಯಬೇಕಿತ್ತಾ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಮದುವೆ ಅನ್ನುವುದು ವಯಸ್ಸಿಗೆ ಸಂಬಂಧಿಸಿದ್ದಲ್ಲ, ಮನಸ್ಸಿಗೆ ಸಂಬಂಧಿಸಿದ್ದು ಎಂದು ಉತ್ತರ ನೀಡಿದ್ದಾರೆ. ಇದನ್ನೂ ಓದಿ:ಪ್ರಣಿತಾ ಹಾಟ್‌ನೆಸ್‌ಗೆ ಸಂತೂರ್ ಮಮ್ಮಿ ಎಂದ ನೆಟ್ಟಿಗರು
ಕನ್ನಡ ಮಾತ್ರವಲ್ಲದೇ ಬಹುಭಾಷೆಯಲ್ಲಿ ನಟಿಸಿರುವ ಆಶಿಶ್ ವಿದ್ಯಾರ್ಥಿ (Ashish Vidyarthi) ಅವರು ತಮ್ಮ 60ನೇ ವಯಸ್ಸಿಗೆ ಫ್ಯಾಷನ್ ಇಂಡಸ್ಟ್ರಿಯ ಉದ್ಯಮಿ ರೂಪಾಲಿ (Roopali) ಜೊತೆ ದಾಂಪತ್ಯ (Wedding) ಜೀವನಕ್ಕೆ ನಟ ಕಾಲಿಟ್ಟಿದ್ದಾರೆ. ಈ ಮದುವೆ ಬಗ್ಗೆಯೇ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಅದು ಆಶಿಶ್ ಅವರ ನೋವಿಗೆ ಕಾರಣವಾಗಿತ್ತು.
ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅವರು ಈ ಹಿಂದೆ ರಾಜೋಶಿ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಈಗ ಆ ದಾಂಪತ್ಯಕ್ಕೆ ಸಾಕಷ್ಟು ವರ್ಷಗಳ ಹಿಂದೆಯೇ ಬ್ರೇಕ್ ಬಿದ್ದಿತ್ತು. ಮೊನ್ನೆಯಷ್ಟೇ ಉದ್ಯಮಿ ರೂಪಾಲಿ ಅವರನ್ನ ಆಶಿಶ್ 2ನೇ ಮದುವೆಯಾಗಿದ್ದರು. ಕೊಲ್ಕತ್ತಾದ ಕ್ಲಬ್‌ನಲ್ಲಿ ಮೇ25ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ಆಪ್ತರು, ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆ ನಡೆದಿತ್ತು.