ಬಿಗ್ ಬಾಸ್ ಮನೆಗೆ ಪತಿಯ ಜೊತೆ ತೆರಳಿದ್ದ ನಟಿ ಅಂಕಿತಾ ಲೋಖಂಡೆ, ಪದೇ ಪದೇ ಡಿವೋರ್ಸ್ ಬಗ್ಗೆ ಮಾತನಾಡಿದ್ದರು. ಪತಿಯ ಜೊತೆಯಲ್ಲೇ ಕೂತು, ಬ್ರೇಕ್ ಅಪ್ ಬಗ್ಗೆ ಹೇಳಿಕೊಂಡಿದ್ದರು. ಆದರೆ, ಮನೆಯಿಂದ ಆಚೆ ಬರುತ್ತಿದ್ದಂತೆಯೇ ಆ ಮಾತಿಗೆ ವಿಷಾದ ವ್ಯಕ್ತ ಪಡಿಸಿದ್ದಾರೆ. ನಾನು ಆ ರೀತಿಯಲ್ಲಿ ಮಾತನಾಡಬಾರದಿತ್ತು. ಪ್ರಬುದ್ಧತೆಯ ಕೊರತೆಯಿಂದಾಗಿ ನಾನು ಹಾಗೆ ಮಾತನಾಡಿದೆ. ನಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ ಎಂದಿದ್ದಾರೆ ನಟಿ ಅಂಕಿತಾ.
Advertisement
ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸುದ್ದಿ ಆಗಿದ್ದರು ಅಂಕಿತಾ ಲೋಖಂಡೆ (Ankita Lokhande) ಹಾಗೂ ವಿಕ್ಕಿ ದಂಪತಿ. ತನ್ನ ಪತಿ ಬಿಗ್ ಬಾಸ್ ಸ್ಪರ್ಧಿ ಮನ್ನಾರಾ ಚೋಪ್ರಾ ಜೊತೆ ಕ್ಲೋಸ್ ಆಗುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಪತಿ ವಿಕ್ಕಿ ಮೇಲೆ ಕೋಪಗೊಂಡಿದ್ದರು. ಆತನನ್ನು ಮದುವೆ ಆಗಿದ್ದಕ್ಕೆ ಕಣ್ಣೀರು ಇಟ್ಟಿದ್ದರು. ಜೊತೆಗೆ ವಿಷಾದವನ್ನೂ ವ್ಯಕ್ತ ಪಡಿಸಿದ್ದರು. ಆಕೆ ನಿನ್ನ ಜೀವನದಲ್ಲಿ ಬಂದಳು. ನೀನು ಇಷ್ಟ ಪಡ್ತಿದ್ದೀಯಾ ಎಂದು ಮಾತನಾಡಿದ್ದರು.
Advertisement
Advertisement
ಬಿಗ್ ಬಾಸ್ (Bigg Boss) ಮನೆಯಲ್ಲಿ ವಿಕ್ಕಿ ಮತ್ತು ಅಂಕಿತಾ ನಡೆಯನ್ನೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಒಂದೇ ಬ್ಲ್ಯಾಂಕೆಟ್ ಹೊದ್ದುಕೊಂಡು ಈ ಜೋಡಿ ಮಲಗಿತ್ತು. ಅದು ರಾತ್ರಿ ವೇಳೆ ಸುಮ್ಮನೆ ಮಲಗಿಲ್ಲ, ಬ್ಲ್ಯಾಂಕೆಟ್ ಒಳಗೆ ಚಲಿಸಿದ್ದರು. ಬ್ಲ್ಯಾಂಕೆಟ್ ಅಸ್ತವ್ಯಸ್ತಗೊಂಡಿತ್ತು. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿತ್ತು.
Advertisement
ಇದೇ ಜೋಡಿ ಬಿಗ್ ಬಾಸ್ ಮನೆಯಲ್ಲಿ ಡಿವೋರ್ಸ್ (Divorce) ಕುರಿತಂತೆ ಮಾತನಾಡಿದ್ದರು. ಈ ನಡೆಯೂ ಅಚ್ಚರಿಗೆ ಕಾರಣವಾಗಿತ್ತು. ಪ್ರೀತಿಸಿ ಮದುವೆ ಆಗಿರೋ ಈ ಜೋಡಿ ಬಿಗ್ ಬಾಸ್ ಮನೆಯಲ್ಲಿ ದಿನವೂ ಕಿತ್ತಾಡುತ್ತಲೇ ಇರುತ್ತಿದ್ದರು. ಟಾಸ್ಕ್ ವಿಚಾರದಲ್ಲಂತೂ ಗಂಡ ಹೆಂಡತಿ ಅನ್ನೋದನ್ನೂ ಮರೆಯುತ್ತಿದ್ದರು. ದಿನವೂ ಕಿರಿಕ್ ಮಾಡಿಕೊಂಡು ಜನರಿಗೆ ಮನರಂಜನೆ ನೀಡುತ್ತಿದ್ದರು. ಡಿವೋರ್ಸ್ ವಿಚಾರ ಮಾತನಾಡಿ ಶಾಕ್ ಮೂಡಿಸಿದ್ದರು.
ಅಂಕಿತಾ ಲೋಖಂಡೆ ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಅದನ್ನು ಬ್ರೇಕ್ ಮಾಡಿಕೊಂಡು ವಿಕ್ಕಿ ಜೈನ್ ಜೊತೆ ಒಂದಾದರು. ಮದುವೆ ಮಾಡಿಕೊಂಡು ಬಿಗ್ ಬಾಸ್ ಮನೆಗೆ ಹೋಗಿದ್ದರು. ಅಲ್ಲಿಯೂ ಕಿತ್ತಾಡಿಕೊಂಡಿದ್ದರು. ವಿಚ್ಛೇದನ ಪಡೆದುಕೊಳ್ಳೋಣ ಎಂದು ಹೇಳುವ ಮೂಲಕ ಶಾಕ್ ನೀಡಿದ್ದರು ಅಂಕಿತಾ. ಈಗ ಎಲ್ಲದಕ್ಕೂ ವಿಷಾದ ವ್ಯಕ್ತ ಪಡಿಸಿದ್ದಾರೆ. ಜೊತೆಯಾಗಿ ಬಾಳುವ ಪ್ರಾಮೀಸ್ ಮಾಡಿದ್ದಾರೆ.