ನವದೆಹಲಿ: ಆಹಾರ ಪದಾರ್ಥ, ಇಂಧನ ಹಾಗೂ ಅಗತ್ಯ ವಸ್ತುಗಳ ಮೇಲಿನ ಬೆಲೆ ಏರಿಕೆಯಿಂದಾಗಿ ಪ್ರತಿ ಪಕ್ಷಗಳು ಬಿಜೆಪಿ ವಿರುದ್ಧ ಕಿಡಿಕಾರಿವೆ. ಈ ನಡುವೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಸಹ ವಾಗ್ದಾಳಿ ನಡೆಸಿದ್ದಾರೆ.
#WATCH | Guwahati:AIUDF chief says, "…India's money is with FM. How will she know how much a person spends to buy? No inflation for any Min. BJP MPs should ask their wives how're they running the kitchen. Govt should take note otherwise inflation will eat up their Govt in 2024" pic.twitter.com/B1Tk4IChwZ
— ANI (@ANI) August 6, 2022
Advertisement
ಈ ಕುರಿತು ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಿಡಿ ಕಾರಿದ್ದಾರೆ. ಭಾರತದ ಹಣ, ಹಣಕಾಸು ಸಚಿವರ ಬಳಿಯಿದೆ. ಒಬ್ಬ ವ್ಯಕ್ತಿಯು ಖರಿದಿಸಲು ಎಷ್ಟು ಖರ್ಚು ಮಾಡಬೇಕು ಎಂದು ಅವರು ಹೇಗೆ ತಿಳಿಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚೀನಾದೊಂದಿಗಿನ ಉದ್ವಿಗ್ನದ ಮಧ್ಯೆ ತೈವಾನ್ ರಕ್ಷಣಾ ಅಧಿಕಾರಿ ಶವವಾಗಿ ಪತ್ತೆ
Advertisement
Advertisement
ಬೆಲೆ ಏರಿಕೆ ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತಿದೆ. ಯಾವ ಸಚಿವರಿಗೂ ಹಣದುಬ್ಬರವಿಲ್ಲ. ಬಿಜೆಪಿ ಸಂಸದರು ತಮ್ಮ ಪತ್ನಿಯರಿಗೆ ಅಡುಗೆ ಮನೆ ಹೇಗೆ ನಡೆಸುತ್ತಿದ್ದಾರೆ ಎಂದು ಕೇಳಬೇಕು. 2024 ರಲ್ಲಿ ಹಣದುಬ್ಬರವು ಅವರ ಸರ್ಕಾರವನ್ನೇ ತಿನ್ನುತ್ತದೆ. ಈಗಾಗಲೇ ಇದರ ಬೆಳವಣಿಗೆಯನ್ನು ಗಮನಿಸುತ್ತಿರಬೇಕು ಎಂದು ಎಐಯುಡಿಎಫ್ ಮುಖ್ಯಸ್ಥರು ಹೇಳಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ವಾಸುಕಿ ವೈಭವ್ ಎಂಟ್ರಿ: ದೊಡ್ಮನೆಯಲ್ಲಿ ‘ಏನ್ ಕಿತ್ತು ದಬ್ಬಾಕ್ತಿಯೋ’ ಎಂದ ಗಾಯಕ
Advertisement
ರಾಷ್ಟ್ರೀಯ ಕಾಂಗ್ರೆಸ್ ಬೆಲೆ ಏರಿಕೆ, ಜಿಎಸ್‌ಟಿ ನೀತಿಗಳ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.