ಹಿಂದಿನ ಕಾಲದಿಂದಲೂ ಹಳ್ಳಿ ಕಡೆಗಳಲ್ಲಿ ಹೆಚ್ಚಾಗಿ ಅಜ್ಜಂದಿರು ಪಟಾಪಟಿ ಚಡ್ಡಿ ಧರಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಈಗ ಪುರುಷರಿಗೆಂದೇ ಕಲರ್‌ಫುಲ್, ವೆಸ್ಟ್ರನ್, ಸ್ಟೈಲಿಷ್, ವೆರೈಟಿ ಡಿಸೈನರ್ ಚಡ್ಡಿಗಳು ಮಾರುಕಟ್ಟೆಗೆ ಬಂದಿದೆ. ಅಲ್ಲದೇ ಇವುಗಳಿಗೆ ಹೆಚ್ಚಾಗಿ ಬೇಡಿಕೆ ಇದೆ. ಈ ಮಧ್ಯೆ ಆನ್‍ಲೈನ್‍ನಲ್ಲಿ ಪಟ್ಟಾಪಟ್ಟಿ ಚಡ್ಡಿ ಬೆಲೆ ಸಖತ್ ಸದ್ದು ಮಾಡುತ್ತಿದೆ.
ಹೌದು, ಒಂದು ಸ್ಮಾರ್ಟ್ ಫೋನ್‍ನಷ್ಟೇ ದುಬಾರಿ ಬೆಲೆ ಇರುವ ಪಟ್ಟಾಪಟ್ಟಿ ಚಡ್ಡಿಯನ್ನು ಆನ್‍ಲೈನ್‍ನಲ್ಲಿ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಸಾಮಾನ್ಯವಾಗಿ ಒಂದು ಪಟಾಪಟಿ ಚಡ್ಡಿಯ ಬೆಲೆ 200-300 ರೂಪಾಯಿಯಷ್ಟಿರುತ್ತದೆ. ಆದರೆ ಆನ್‍ಲೈನ್‍ನಲ್ಲಿ ಇದಕ್ಕೆ 15,450 ರೂಪಾಯಿ ದರ ನಿಗದಿಪಡಿಸಲಾಗಿದ್ದು, ಈ ವಿಚಾರ ಇದೀಗ ಭಾರೀ ಟ್ರೋಲ್ ಆಗುತ್ತಿದೆ. ಇದನ್ನೂ ಓದಿ: ನಿರ್ಮಾಣ ಹಂತದ ಆಂಜನೇಯನ ದೇಗುಲದ ಮುಂದೆಯೇ ಬಂದು ಪ್ರಾಣಬಿಟ್ಟ ಕೋತಿ!
why is this pattapatti trouser 15k?😭 pic.twitter.com/RrBSeFqd3I
— Arshad Wahid (@vettichennaiguy) July 30, 2022
ಪಟ್ಟಾಪಟ್ಟಿ ಚಡ್ಡಿ ಬೆಲೆಯ ಸ್ಕ್ರೀನ್‍ಶಾಟ್ ಅನ್ನು ಅರ್ಷದ್ ವಹೀದ್ ಎಂಬವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಅಷ್ಟೊಂದು ಬೆಲೆ ಏಕೆ ಎಂದು ಪ್ರಶ್ನಿಸಿದ್ದಾರೆ. ಫೋಟೋದಲ್ಲಿ ನೀಲಿ ಮತ್ತು ಹಸಿರು ಪಟ್ಟೆಗಳು ಕೆಂಪು ಬಣ್ಣದ ಗೆರೆಗಳಿದ್ದು, ಶರ್ಟ್ ಮೇಲೆ ಚೆಕ್ಕರ್ ಪ್ರಿಂಟ್ ಇದೆ. ಅಲ್ಲದೇ ಇದು ಅದೇ ಹಸಿರು ಚೆಕ್ಕರ್ ಪ್ರಿಂಟ್ ಶಾರ್ಟ್ರ್ ನೊಂದಿಗೂ ಲಭ್ಯವಿದೆ.
ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಖತ್ ಟ್ರೋಲ್ ಆಗುತ್ತಿದೆ. ಅನೇಕ ಮಂದಿ ಇದಕ್ಕೆ 15 ಸಾವಿರ ರೂಪಾಯಿ ಕೊಟ್ಟು ಖರೀದಿಸುವುದು ಹುಚ್ಚುತನ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಖಿ ಕಟ್ಟಿದ ಸಹೋದರಿಗೆ ಎಲೆಕ್ಟ್ರಿಕ್ ಸ್ಕೂಟರ್ ಗಿಫ್ಟ್ ಕೊಡಲು ಕಳ್ಳತನ ಮಾಡುತ್ತಿದ್ದ ಯುವಕನ ಬಂಧನ