ಯಾದಗಿರಿ: ವೈದ್ಯರ (Doctor) ನಡುವೆ ಜಗಳ ನಡೆದು ಕಳೆದ ಒಂದು ವಾರದಿಂದ ಪ್ರಸೂತಿ ತಜ್ಞೆ ರಜೆ ಹಾಕಿ ಹೋಗಿದ್ದು, ಗರ್ಭಿಣಿಯರು ಸಮಸ್ಯೆ ಎದುರಿಸುತ್ತಿರುವ ಘಟನೆ ಶಹಾಪುರ (Shahapur) ತಾಲೂಕು ಆಸ್ಪತ್ರೆಯಲ್ಲಿ (Hospital) ನಡೆದಿದೆ.
ಹತ್ತಾರು ಹಳ್ಳಿಗಳ ಜನರ ಪಾಲಿಗೆ ಈ ಆಸ್ಪತ್ರೆಯೇ ಸಂಜೀವಿನಿಯಾಗಿದ್ದು, ವೈದ್ಯರ ಕೊರತೆಯಿಂದ ರೋಗಿಗಳು ನಿತ್ಯವೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವೈದ್ಯರು ಇಲ್ಲದ ಕಾರಣ ರೋಗಿಗಳು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ಹೋಗುತ್ತಿದ್ದಾರೆ. ಇತ್ತೀಚೆಗೆ ವೈದ್ಯರ ನಡುವೆ ಗಲಾಟೆ ಆಗಿದ್ದು, ಇದೇ ವಿಚಾರಕ್ಕೆ ಪ್ರಸೂತಿ ತಜ್ಞ ವೈದ್ಯೆ ಕಳೆದ ಒಂದು ವಾರದಿಂದ ರಜೆ ಹಾಕಿಕೊಂಡು ಹೋಗಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ. ಇದನ್ನೂ ಓದಿ: ಇಲ್ಲಿಯವರೆಗೆ ಸಿಕ್ಕಿರಲಿಲ್ಲ, ಮೋದಿಗೆ ಖರ್ಗೆ ಮ್ಯಾಚ್ ಆಗಬಲ್ಲ ನಾಯಕ – ಸತೀಶ್ ಜಾರಕಿಹೊಳಿ
Advertisement
ಪ್ರಸೂತಿ ತಜ್ಞೆ ಡಾ.ಸರೋಜಾ ಪಾಟೀಲ್ ಮತ್ತು ಇಲ್ಲಿನ ಕೆಲವು ವೈದ್ಯರ ನಡುವೆ ಹೊಂದಾಣಿಕೆಯ ಕೊರತೆಯಿದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ವೈದ್ಯೆ ರಜೆಯ ಮೇಲೆ ತೆರಳಿದ್ದಾರೆ. ಇದರಿಂದ ಹೆರಿಗೆ ಕೆಲಸವನ್ನ ನರ್ಸ್‍ಗಳಿಗೆ ನೀಡಲಾಗಿದ್ದು, ಸಾಮಾನ್ಯ ಹೆರಿಗೆಗಳನ್ನು ನರ್ಸ್‍ಗಳೆ ಮಾಡುತ್ತಾರೆ. ಸಿಜೇರಿಯನ್ ಕೇಸ್‍ಗಳು ಬಂದಾಗ ನರ್ಸ್‍ಗಳ ಕೈಯಿಂದ ಆಗುವುದಿಲ್ಲ. ಇದರಿಂದ ಯಾದಗಿರಿ ಜಿಲ್ಲಾಸ್ಪತ್ರೆಗೆ ವೈದ್ಯರು ಗರ್ಭಿಣಿಯರನ್ನು ಕಳಿಸುತ್ತಿದ್ದಾರೆ.
Advertisement
Advertisement
ಆಸ್ಪತ್ರೆಗೆ ಕಳೆದ ಒಂದು ವಾರದಲ್ಲೇ ಸುಮಾರು 90 ಕ್ಕೂ ಅಧಿಕ ಗರ್ಭಿಣಿಯರು ಹೆರಿಗೆಗಾಗಿ ಬಂದಿದ್ದಾರೆ. ಇದರಲ್ಲಿ 60 ಜನರಿಗೆ ನಾರ್ಮಲ್ ಹೆರಿಗೆಯಾಗಿದ್ದು, 13 ಮಹಿಳೆಯರಿಗೆ ಸಿಜೇರಿಯನ್‍ಗಾಗಿ ಯಾದಗಿರಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ. ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement
ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಅವರ ಸ್ವಕ್ಷೇತ್ರದಲ್ಲೇ ಈ ಪರಿಸ್ಥಿತಿ ಉಂಟಾಗಿದ್ದು, ಅಲ್ಲಿನ ಜನ ಹೆಚ್ಚಿನ ವೈದ್ಯರನ್ನು ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಭೇಟಿಯಾದ ಸಿಎಂ – ಬರ ಪರಿಹಾರ ಬಿಡುಗಡೆಗೆ ಆಗ್ರಹ