ಆಗಸ್ಟ್ 05 ಬಂದರೆ ಸಾಕು ಸ್ನೇಹ ಬಳಗದಲ್ಲೊಂದು ಸಂಭ್ರಮದ ವಾತಾವರಣ. ಎಲ್ಲ ಸ್ನೇಹಿತರು ಪರಸ್ಪರ ಒಬ್ಬರಿಗೊಬ್ಬರು ಸ್ನೇಹಿತರ ದಿನದ ಶುಭಕೋರುತ್ತಾರೆ. ಮತ್ತೆ ಕೆಲವರು ತಮ್ಮ ನೆಚ್ಚಿನ ಗೆಳೆಯ/ಗೆಳತಿಯರಿಗೆ ಉಡುಗೊರೆಯನ್ನು ನೀಡುತ್ತಾರೆ. ಇಂದು ಸ್ನೇಹಿತರಿಗಾಗಿ ಸ್ನೇಹತನ ಹೇಳುವ ಕಥೆ ನಿಮಗಾಗಿ ಇಲ್ಲಿದೆ
ಕೆಲವು ವರ್ಷಗಳ ಹಿಂದೆ ಅಂಕಿತ್ ಮತ್ತು ಸೂರಜ್ ಎಂಬ ಗೆಳೆಯರಿದ್ದರು. ಬಾಲ್ಯದಿಂದ ಒಟ್ಟಾಗಿಯೇ ಶಿಕ್ಷಣ ಮುಗಿಸಿದ ಗೆಳೆಯರಿಗೆ, ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶವೂ ಸಿಗುತ್ತದೆ. ಆದ್ರೆ ಇಲ್ಲಿ ಇಬ್ಬರು ಉದ್ಯೋಗಕ್ಕಾಗಿ ಬೇರೆ ಬೇರೆ ದೇಶಕ್ಕೆ ಹೋಗುತ್ತಾರೆ. ಇಬ್ಬರು ಗೆಳೆಯರು ಹೋಗುವ ಮುನ್ನ ಮುಂದಿನ 10 ವರ್ಷಗಳ ನಂತರ ನಾವಿಬ್ಬರು ಇದೇ ಸ್ಥಳ, ಇದೇ ಸಮಯಕ್ಕೆ ಭೇಟಿ ಆಗೋಣ. ಅಂದು ಯಾರು ಎಷ್ಟು ಯಶಸ್ಸು ಹೊಂದಿರುತ್ತಾರೆ ಎಂಬುದನ್ನು ಲೆಕ್ಕ ಹಾಕೋಣ ಎಂದು ಹೇಳಿ ಹೊರಡುತ್ತಾರೆ.
Advertisement
10 ವರ್ಷಗಳ ಬಳಿಕ ಇಬ್ಬರು ಭೇಟಿಯಾಗುವ ಸಮಯ ಬರುತ್ತದೆ. ತಮ್ಮ ಯೋಚನೆಯಂತೆಯೇ ಇಬ್ಬರೂ 10 ವರ್ಷಗಳ ಹಿಂದೆ ತೀರ್ಮಾನಿಸಿದ ರೀತಿಯಲ್ಲಿ ಅದೇ ಸ್ಥಳ ಮತ್ತು ಸಮಯಕ್ಕೆ ಭೇಟಿಯಾಗಲು ಬರುತ್ತಾರೆ. ಮೊದಲಿಗೆ ಬಂದ ಅಂಕಿತ್, ಹೋಟೆಲೊಂದರ ಬಾಗಿಲ ಬಳಿಯೇ ಗೆಳೆಯ ಸೂರಜ್ ಗಾಗಿ ಕಾಯುತ್ತಿರುತ್ತಾನೆ. ಅಂಕಿತ್ ಒಳ್ಳೆಯ ಬಟ್ಟೆ ತೊಟ್ಟು ಗೆಳೆಯನ ನಿರೀಕ್ಷೆಯಲ್ಲಿ ಇರುತ್ತಾನೆ. ಅದೇ ವೇಳೆ ಹೋಟೆಲ್‍ಗೆ ಬಂದ ಪೊಲೀಸ್ ಅಧಿಕಾರಿಯೊಬ್ಬ ಅಂಕಿತ್‍ನನ್ನು ಪ್ರಶ್ನಿಸುತ್ತಾರೆ.
Advertisement
Advertisement
ಪೊಲೀಸ್ ಅಧಿಕಾರಿ: ಯಾರು ನೀವು? ರಾತ್ರಿ 10ಗಂಟೆಗೆ ಏನು ಮಾಡುತ್ತಿದ್ರಿ?
ಅಂಕಿತ್: ನಾನೊಬ್ಬ ವ್ಯಾಪಾರಸ್ಥ, ನನ್ನ ಗೆಳೆಯನಿಗಾಗಿ ಕಾಯುತ್ತಿದ್ದೇನೆ.
ಪೊಲೀಸ್ ಅಧಿಕಾರಿ: ಈ ವೇಳೆ ಇಲ್ಲಿ ನೀವು ನಿಲ್ಲೋದು ಸೂಕ್ತವಲ್ಲ ಬೇಗ ಹೊರಡಿ (ಪೊಲೀಸ್ ಅಧಿಕಾರಿ ಹಿಂದಿರುಗುತ್ತಾರೆ)
Advertisement
(ಕೆಲ ಸಮಯದ ನಂತರ) ದೂರದಲ್ಲಿ ಓರ್ವ ವ್ಯಕ್ತಿ ಬರೋದನ್ನು ಅಂಕಿತ್ ಕಾಣುತ್ತಾನೆ. ಆತ ಹತ್ತಿರ ಬರುತ್ತಲೇ ನೀನು ಸೂರಜ್ ಅಲ್ವ ಎಂದು ಅನುಮಾನದ ರೀತಿಯಲ್ಲಿ ಕೇಳುತ್ತಾನೆ. ಆ ವ್ಯಕ್ತಿ ಹೌದು ಎಂದು ತಲೆ ಅಲ್ಲಾಡಿಸುತ್ತಾನೆ. ಇಬ್ಬರು ಹಲವು ಮಾತುಗಳನ್ನಾಡುತ್ತಾರೆ. ಒಳ್ಳೆಯ ಊಟವನ್ನು ಮಾಡುತ್ತಾರೆ.
ಅಂಕಿತ್: ಸೂರಜ್, ಜೀವನಕ್ಕೆ ಏನು ಮಾಡಿಕೊಂಡಿದ್ದೀಯಾ?
ವ್ಯಕ್ತಿ: ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದೇನೆ. ನೀನು ಏನ್ ಮಾಡುತ್ತೀದ್ದಿಯಾ?
ಅಂಕಿತ್: ಬಂಗಾರ ವ್ಯಾಪಾರಿ (ಈ ಮಧ್ಯೆ ಅಂಕಿತ್‍ಗೆ ಇವನು ನನ್ನ ಗೆಳೆಯನಲ್ಲ ಎಂಬ ಅನುಮಾನ ಮೂಡುತ್ತದೆ)
ಅಂಕಿತ್: (ಸಿಟ್ಟಿನಿಂದ) ಯಾರು ನೀನು? ನೀವು ನನ್ನ ಗೆಳೆಯ ಸೂರಜ್ ಅಲ್ಲ ಎಂದು ಕಿರುಚುತ್ತಾನೆ.
ಆ ವ್ಯಕ್ತಿ ಅಂಕಿತ್ ಕೈಗೆ ಪತ್ರವೊಂದನ್ನು ನೀಡುತ್ತಾರೆ. ಈ ಮೊದಲು ಮಾತನಾಡಿಸಿದ್ದ ಪೊಲೀಸ್ ಅಧಿಕಾರಿಯೇ ಸೂರಜ್ ಎಂದು ಆ ವ್ಯಕ್ತಿ ಎಂದು ಹೇಳುತ್ತಾರೆ. ಇಂದು ಸೂರಜ್, ಕಳ್ಳ ಸಾಗಾಟಗಾರನನ್ನು ಹಿಡಿಯಲು ಹೋಟೆಲ್‍ಗೆ ಬಂದಿದ್ದರು. ಆದ್ರೆ ಆ ಸ್ಮಗಲರ್ ತನ್ನ ಆಪ್ತ ಗೆಳೆಯ ಅಂಕಿತ್ ಎಂದು ತಿಳಿದ ಕೂಡಲೇ ಕೇವಲ ಮಾತನಾಡಿಸಿ ನನ್ನ ಬಳಿ ಬಂದರು. ಅಲ್ಲದೇ ನನ್ನ ಗೆಳೆಯನನ್ನು ಬಂಧಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಇದೇ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ರು. ಹಾಗಾಗಿ ನಿಮ್ಮನ್ನು ಬಂಧಿಸಲು ನಾನು ಬಂದಿದ್ದೇನೆ ಎಂದು ಅಲ್ಲಿದ್ದ ಪೊಲೀಸ್ ಅಧಿಕಾರಿ ಹೇಳುತ್ತಾರೆ.
ತನಗಾಗಿ ಸಾವನ್ನಪ್ಪಿದ ಗೆಳೆಯನಿಗಾಗಿ ಅಂಕಿತ್ ತನ್ನ ಎಲ್ಲ ತಪ್ಪುಗಳನ್ನು ಒಪ್ಪಿಕೊಂಡು ಪೊಲೀಸರಿಗೆ ಶರಣಾಗುತ್ತಾನೆ.