Chikkamagaluru
ನೋಡ ನೋಡ್ತಿದ್ದಂತೆ 2 ಕಾರು ಬೆಂಕಿಗಾಹುತಿಯಾಯ್ತು!

ಚಿಕ್ಕಮಗಳೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಗ್ಯಾರೇಜ್‍ನಲ್ಲಿ ನಿಲ್ಲಿಸಿದ್ದ ಎರಡು ಕಾರು ಸಹಿತ 6 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ವಸ್ತುಗಳು ಬೆಂಕಿಗಾಹುತಿಯಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಮ್ಮರಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸೈಯದ್ ಮಮ್ತಾಜ್‍ಗೆ ಸೇರಿದ ಅಮೀರ್ ಜಾನ್ ಆಟೋ ವರ್ಕ್ಸ್ ನಲ್ಲಿ ಕಾರಿನ ಬ್ಯಾಟರಿ ಪರಿಶೀಲನೆ ಮಾಡುತ್ತಿದ್ದಾಗ ಅವಘಡ ಸಂಭವಿಸಿದೆ. ಮಾಲೀಕನ ಕಾರೂ ಸೇರಿದಂತೆ ಎರಡು ಕಾರುಗಳು ಸುಟ್ಟು ಭಸ್ಮವಾಗಿದೆ.
ಕೊಪ್ಪ ಹಾಗೂ ತೀರ್ಥಹಳ್ಳಿಯಿಂದ ಆಗಮಿಸಿದ ಅಗ್ನಶಾಮಕ ದಳದ ವಾಹನಗಳಿಂದ ಬೆಂಕಿ ನಂದಿಸಲಾಯಿತು. ಸ್ಥಳಕ್ಕೆ ಹರಿಹರಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
https://www.youtube.com/watch?v=ZN2ThPKm3U4
