ಹಾವೇರಿ: ಮೊಬೈಲ್ ಚಾರ್ಜ್ ಹಾಕಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಮನೆಯಲ್ಲಿದ್ದ ಟಿವಿ, ಬಟ್ಟೆ ಹಾಗೂ 25 ಸಾವಿರ ರೂ. ನಗದು ಹಣ ಸುಟ್ಟು ಕರಕಲಾದ ಘಟನೆ ಹಾವೇರಿ ನಗರದ ಸುಭಾಶ್ ವೃತ್ತದಲ್ಲಿ ಬಳಿ ನಡೆದಿದೆ.
ನಗರದ ಪ್ರಕಾಶ್ ಹುಲಕೋಟಿ ಎಂಬುವರ ಮನೆಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Advertisement
Advertisement
ಪ್ರಕಾಶ್ ಅವರ ಮಗಳು ಹಳೆಯ ನೋಕಿಯಾ ಮೊಬೈಲ್ ಚಾರ್ಜ್ ಹಾಕಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮೊಬೈಲ್ ನಿಂದಾಗಿ ಶಾರ್ಟ್ ಸರ್ಕ್ಯೂಟ್ ಆಗಿದ್ಯಾ ಅಥವಾ ಚಾರ್ಜರ್ ಸಮಸ್ಯೆಯಿಂದ ಆಗಿದ್ಯಾ ಎನ್ನುವುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
Advertisement
ಈ ಹಿಂದೆ ಮೊಬೈಲ್ ಫೋನ್ ಸ್ಟೋಟ ಪ್ರಕರಣಗಳು ಬೆಳಕಿಗೆ ಬಂದಾಗ ಕಂಪೆನಿಗಳು, ಫೋನ್ ಸ್ಫೋಟಗಳ್ಳಲು ಮೊಬೈಲ್ ಕಾರಣವಲ್ಲ, ಕಳಪೆ ಗುಣಮಟ್ಟದ ಚಾರ್ಜರ್ ಬಳಸಿದ ಕಾರಣ ಸ್ಫೋಟಗೊಂಡಿದೆ ಎಂದು ಹೇಳಿಕೆ ನೀಡಿತ್ತು.