ಹಾವೇರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ 20 ಕ್ಕೂ ಅಧಿಕ ಮೇವಿನ ಬಣವೆಗಳು ಹಾಗೂ ಐದಾರು ಮೆಕ್ಕೆಜೋಳದ ತೆನೆಗಳ ರಾಶಿ ಸುಟ್ಟು ಭಸ್ಮವಾದ ಘಟನೆ ಹಾವೇರಿ ತಾಲೂಕಿನ ಬಮ್ಮನಕಟ್ಟಿ ಗ್ರಾಮದಲ್ಲಿ ನಡೆದಿದೆ.
ಸುಟ್ಟು ಹೋಗಿರುವ ಬಣವೆಗಳು ಗ್ರಾಮದ 15ಕ್ಕೂ ಅಧಿಕ ರೈತರಿಗೆ ಸೇರಿದ್ದಾಗಿವೆ. ಗ್ರಾಮದ ರೈತರಾದ ನಾಗಪ್ಪ, ಮಹಾದೇವಪ್ಪ, ಹನುಮಂತಪ್ಪ, ಬಸನಗೌಡ, ತಿಮ್ಮಣ್ಣ ಪೂಜಾರ ಸೇರಿದಂತೆ ಒಟ್ಟು 15 ರೈತರ ಬಣವೆ ಹಾಗೂ ಮೆಕ್ಕೆಜೋಳದ ರಾಶಿ ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟು ಭಸ್ಮವಾಗಿವೆ. ಇದನ್ನೂ ಓದಿ: ಜೇಮ್ಸ್ ಚಿತ್ರದ 1003 ಟಿಕೆಟ್ ಖರೀದಿ ಮಾಡಿದ ಅಪ್ಪು ಅಭಿಮಾನಿ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಶಾರ್ಟ್ ಸಕ್ಯೂಟ್‌ನಿಮದ ನಷ್ಟ ಅನುಭವಿಸಿದ 15 ರೈತರಿಗೆ ಹೆಸ್ಕಾಂ ಪರಿಹಾರ ನೀಡಬೇಕು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪ್ರಕರಣ ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಅಪ್ಪು ಹುಟ್ಟು ಹಬ್ಬಕ್ಕೆ ನೇತ್ರದಾನದ ವಾಗ್ದಾನ