ಬೀದರ್: ಏಕಾಏಕಿ ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಸಾಲ ತೀರಿಸೋಕೆ ಇಟ್ಟಿದ್ದ 60 ಸಾವಿರ ರೂ. ಹಾಗೂ ಲಕ್ಷಾಂತರ ಮೌಲ್ಯದ ಗೃಹಪಯೋಗಿ ವಸ್ತುಗಳು ಸುಟ್ಟು ಕರಕಲಾದ ಘಟನೆ ಬೀದರ್ (Bidar) ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ನಡೆದಿದೆ.
ದೇವೇಂದ್ರ ವೈಜಿನಾಥ ಎಂಬುವವರ ಮನೆ ಬೆಂಕಿಗಾಹುತಿಯಾಗಿದ್ದು, ಪರಿಣಾಮ ಮನೆಯಲ್ಲಿದ್ದ ಗೃಹಪಯೋಗಿ ಧವಸ-ದಾನ್ಯಗಳು, ನಗದು, ಟಿವಿ, ಫ್ರಿಡ್ಜ್, ಚಿನ್ನಾಭರಣ ಸುಟ್ಟು ಭಸ್ಮವಾಗಿದೆ.ಇದನ್ನೂ ಓದಿ: ಕೇವಲ ಒಂದೂವರೆ ಸಾವಿರಕ್ಕೆ ಸ್ನೇಹಿತನ ಕೊಲೆ – ಆರೋಪಿ ಅರೆಸ್ಟ್
ಇನ್ನೂ ಸಾಲ ತೀರಿಸಲೆಂದು ಕೂಡಿಟ್ಟಿದ್ದ 60 ಸಾವಿರ ರೂ. ನಗದು ಕೂಡ ಸುಟ್ಟು ಭಸ್ಮವಾಗಿದ್ದು, ಮನೆ ಮಾಲೀಕರು ಕಣ್ಣೀರಿಟ್ಟಿದ್ದಾರೆ. ಜನವಾಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
