ಬಳ್ಳಾರಿ: ಸರ್ಕಾರಿ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ರಾತ್ರಿಯಿಡೀ ಬಾಣಂತಿಯರು ಹಾಗೂ ಪೋಷಕರು ಆಸ್ಪತ್ರೆಯ ಆವರಣದಲ್ಲೆ ಕಾಲ ಕಳೆದ ಘಟನೆಯೊಂದು ಬಳ್ಲಾರಿಯಲ್ಲಿ ನಡೆದಿದೆ.
ಜಿಲ್ಲೆಯ ಕೊಟ್ಟೂರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ರಾತ್ರಿ ಹೆರಿಗೆ ಹಾಗೂ ಮಕ್ಕಳ ಕೋಣೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಫ್ಯಾನ್ ನಲ್ಲಿ ವಿದ್ಯುತ್ ಕಿಡಿಗಳು ಹೊತ್ತುತ್ತಿದ್ದಂತೆಯೇ ಗಾಬರಿಗೊಂಡು ಬಾಣಂತಿಯರು, ಪೋಷಕರು ಕೊಠಡಿಯಿಂದ ಹೊರ ಓಡಿ ಬಂದಿದ್ದಾರೆ.
Advertisement
ಹಸುಗೂಸನ್ನು ಹೊತ್ತಯ್ದು ಹೊರಗೆ ಹೋದ ಪೋಷಕರು ಹಾಗೂ ಬಾಣಂತಿಯರು ರಾತ್ರಿಯಿಡೀ ಸಮುದಾಯ ಕಟ್ಟಡದ ಹೊರಗಡೆ ವಾಸ್ತವ್ಯ ಮಾಡಿದ್ದಾರೆ. ಅಲ್ಲದೇ ಆಸ್ಪತ್ರೆಯಲ್ಲಿ ಈ ಅವ್ಯವಸ್ಥೆ ವಿರುದ್ಧ ಪೋಷಕರು ಬಾಣಂತಿಯರು ಹಿಡಿಶಾಪ ಹಾಕಿದ್ದಾರೆ.
Advertisement