ಬೆಂಗಳೂರು: ಇಂದು (ಆ.8) ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಈ ಹಿನ್ನೆಲೆ ಹೂವು, ಹಣ್ಣುಗಳ ಬೆಲೆ ದುಪ್ಪಟ್ಟಾಗಿದ್ದು, ಬೆಂಗ್ಳೂರಿನ ಕೆ.ಆರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರಾಗಿದೆ.
ಶ್ರಾವಣ ಮಾಸ ಬಂತೆಂದರೆ ಸಾಕು. ಸಾಲು ಸಾಲು ಹಬ್ಬಗಳ ಬರುವುದರಿಂದ ಹೂವು, ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಆದರೆ ಇಂದು ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಕಳೆದ ವಾರಕ್ಕಿಂತ ಈ ವಾರ ದರ ಹೆಚ್ಚಳವಾಗಿದ್ದು, ಹೂವು, ಹಣ್ಣು ಹಾಗೂ ತರಕಾರಿಗಳ ಬೆಲೆಯಲ್ಲಿಯೂ ಏರಿಕೆಯಾಗಿದೆ.ಇದನ್ನೂ ಓದಿ: ಬೆಂಗಳೂರಿಗೆ ಫಿಲಿಪೈನ್ಸ್ ಅಧ್ಯಕ್ಷರ ಭೇಟಿ – ರಾಜ್ಯಪಾಲರ ಜೊತೆ ಸಂವಾದ
ಯಾವುದರ ಬೆಲೆ ಎಷ್ಟಿದೆ?
ಹೂವು ಇಂದಿನ ದರ
ಕನಕಾಂಬರ – 1600ರೂ.
ಮಲ್ಲಿಗೆ, ಮಳ್ಳೆ ಹೂವು – 900ರೂ.
ಕಾಕಡ ಹೂವು – 800ರೂ.
ಸೇವಂತಿಗೆ – 800ರೂ.
ಗುಲಾಬಿ – 500ರೂ.
ಕಣಗಲೆ – 500ರೂ.
ಸುಗಂಧರಾಜ – 500ರೂ.
ತಾವರೆ ಹೂವು (ಜೋಡಿ) – 150ರೂ.
ಜೋಡಿ ಬಾಳೆಕಂದು – 80ರೂ.
ತರಕಾರಿ (ಆವರಣದ ಒಳಗಡೆ ನೀಡಿರುವುದು ಹಿಂದಿನ ದರ)
ಹುರುಳಿಕಾಯಿ – 150 ರೂ.(80 ರೂ.)
ಕ್ಯಾಪ್ಸಿಕಂ 80ರೂ. (40ರೂ.)
ಬೀನ್ಸ್ 80ರೂ. (40ರೂ.)
ಬದನೆಕಾಯಿ 60ರೂ. (40ರೂ.)
ಹೂಕೋಸು 30ರೂ. (15ರೂ.)
ತೊಂಡೆಕಾಯಿ 45ರೂ. (30ರೂ.)
ಹಣ್ಣುಗಳು
ಹಣ್ಣು (ಆವರಣದ ಒಳಗಡೆ ನೀಡಿರುವುದು ಹಿಂದಿನ ದರ)
ಸೇಬು 300ರೂ. (180ರೂ.)
ದಾಳಿಂಬೆ 280ರೂ. (150ರೂ.)
ಕಿತ್ತಳೆ 200ರೂ. (120ರೂ.)
ಮೂಸಂಬಿ 150ರೂ. (70ರೂ.)
ಸಪೋಟ 150ರೂ. (100ರೂ.)
ದ್ರಾಕ್ಷಿ 200ರೂ. (150ರೂ.)
ಸೀತಾಫಲ 200ರೂ. (60ರೂ.)ಇದನ್ನೂ ಓದಿ: ಆ.14ಕ್ಕೆ ಯುವನಿಧಿ ಯೋಜನೆಯಡಿ ಅಭ್ಯರ್ಥಿಗಳ ನೋಂದಣಿ ಕಾರ್ಯಕ್ರಮ