ಬೆಂಗಳೂರು: ಕೊಡಿಗೇಹಳ್ಳಿಯ ಚಿನ್ನದಂಗಡಿ ದರೋಡೆ ಯತ್ನದ ವೇಳೆ ತಮ್ಮ ಗುಂಪಿನವರೇ ಹಾರಿಸಿದ್ದ ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿ ಸೂರಜ್ ಮಧ್ಯಪ್ರದೇಶದ ಗ್ವಾಲಿಯರ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.
ಮಾ.14 ರಂದು ಕೊಡಿಗೇಹಳ್ಳಿಯ ಲಕ್ಷ್ಮೀ ಬ್ಯಾಂಕರ್ಸ್ & ಜ್ಯುವೆಲರ್ಸ್ ದರೋಡೆಗೆ ನಾಲ್ವರ ಗುಂಪು ಯತ್ನಿಸಿತ್ತು. ಈ ವೇಳೆ ದರೋಡೆಕೋರರ ಗುಂಪು ಗುಂಡು ಹಾರಿಸಿತ್ತು. ಪರಿಣಾಮ ಮಾಲೀಕ ಹಾಗೂ ಕೆಲಸಗಾರರೊಬ್ಬರಿಗೆ ಗುಂಡು ತಗುಲಿ ಗಾಯಗೊಂಡಿದ್ದರು. ಇದೇ ವೇಳೆ ಅದೇ ಗ್ಯಾಂಗ್‍ನ ಆರೋಪಿ ಆಶು ಪಂಡಿತ್ ಹಾರಿಸಿದ್ದ ಗುಂಡು ಸೂರಜ್ ಕತ್ತಿಗೆ ತಗುಲಿತ್ತು. ಬಳಿಕ ಜನ ಸೇರುತ್ತಿದ್ದಂತೆ ಆತನನ್ನು ಕರೆದುಕೊಂಡು ಕಳ್ಳರ ಗ್ಯಾಂಗ್ ಪರಾರಿಯಾಗಿತ್ತು. ಇದನ್ನೂ ಓದಿ: ಬೆಂಗ್ಳೂರಲ್ಲಿ ಹಾಡಹಗಲೇ ಚಿನ್ನದಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ
Advertisement
Advertisement
ದರೋಡೆಕೋರರ ಗುಂಪು, ಆಂಧ್ರಪ್ರದೇಶದ ಆನಂತರಪುರಕ್ಕೆ ತೆರಳಿ ಅಲ್ಲಿಂದ ರೈಲಿನಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‍ಗೆ ಪರಾರಿಯಾಗಿತ್ತು. ಬಳಿಕ ಸೂರಜ್‍ನ ಸಹಚರರು ಆತನನ್ನು ಗ್ವಾಲಿಯರ್ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವಿಗೀಡಾಗಿದ್ದಾನೆ. ಈ ಸಂಬಂಧ ಮೂವರು ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆ ಎಂದು ಬುದ್ಧಿಮಾತು – ವಿಷ ಸೇವಿಸಿ ರೈಲ್ವೇ ಹಳಿ ಮೇಲೆ ಮಲಗಿದ ಪ್ರೇಮಿಗಳು