ಬೆಂಗಳೂರು: ಇಬ್ಬರು ದರೋಡೆಕೋರರ ಮೇಲೆ ಬೆಂಗಳೂರು ಪೊಲೀಸರು ಶೂಟೌಟ್ ನಡೆಸಿರುವ ಘಟನೆ ವೈಟ್ ಫೀಲ್ಡ್ ನಲ್ಲಿ ನಡೆದಿದೆ.
ಅಮರ್ ಮತ್ತು ಮುಜಾಮಿಲ್ ಮೇಲೆ ಬೆಳ್ಳಂದೂರು ಪೊಲೀಸರು ಶೂಟೌಟ್ ನಡೆಸಿದ್ದು, ಕಾಲಿಗೆ ಗುಂಡು ತಗಲಿದ ಹಿನ್ನೆಲೆಯಲ್ಲಿ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ಆರೋಪಿಗಳು ಶನಿವಾರ ಹೆಚ್‍ಪಿ ಪೆಟ್ರೋಲ್ ಬಂಕ್ ಬಳಿ ಮೊಬೈಲ್ ಕದಿದ್ದರು. ಈ ವೇಳೆ ಇಬ್ಬರು ಆರೋಪಿಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಜಾಡು ಹಿಡಿದು ಪೊಲೀಸರು ದರೋಡೆಕೋರರ ಮೇಲೆ ಶೂಟೌಟ್ ನಡೆಸಿದ್ದಾರೆ.
Advertisement
Advertisement
ವೈಟ್ ಫೀಲ್ಡ್ ಇನ್ಸ್‍ಪೆಕ್ಟರ್ ವಿಕ್ಟರ್ ಸೈಮನ್ ಮತ್ತು ಸುಧಾಕರ್ ನೇತೃತ್ವದಲ್ಲಿ ಫೈರಿಂಗ್ ನಡೆದಿದೆ. ಆರೋಪಿಗಳು 11 ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು ತಮಿಳುನಾಡು ಹೊಸೂರಿನಲ್ಲಿ ಮುಖ್ಯಪೇದೆಯನ್ನು ಹತ್ಯೆ ಮಾಡಿದ್ದರು. ಶೂಟೌಟ್ ವೇಳೆ ಇಬ್ಬರು ಪೇದೆಗಳಿಗೆ ಗಾಯವಾಗಿದ್ದು ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.