ಬೆಂಗಳೂರು: ಬಂಧಿಸಲು ಹೋದಾಗ ತನ್ನ ಮೇಲೆ ಹಲ್ಲೆ ನಡೆಸಿದಕ್ಕೆ ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ ಕೊಲೆ ಆರೋಪಿಯ ಮೇಲೆ ಗುಂಡು ಹಾರಿಸಿದ್ದಾರೆ.
ಹೆಣ್ಣೂರು ಇನ್ಸ್ಪೆಕ್ಟರ್ ಎಸ್.ಪಿ ಕುಲಕರ್ಣಿ ಆರೋಪಿ ಅಭಿಷೇಕ್(19) ಮೇಲೆ ಸೋಮವಾರ ರಾತ್ರಿ ಗುಂಡು ಹಾರಿಸಿ ಸೆರೆ ಹಿಡಿದ್ದಾರೆ. ಗುಂಡಿನ ದಾಳಿಯಿಂದ ಬಿದ್ದಿದ್ದ ಆತನನ್ನು ಈಗ ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ
Advertisement
Advertisement
ಏನಿದು ಪ್ರಕರಣ?
ಕಳೆದ ಶುಕ್ರವಾರ ರಾತ್ರಿ ಲಾರಿ ಚಾಲಕ ಕೇಶವ ಎಂಬಾತನನ್ನು ಮಚ್ಚಿನಿಂದ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗೆ ಇನ್ಸ್ಪೆಕ್ಟರ್ ಕುಲಕರ್ಣಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಈ ಕೊಲೆಯನ್ನು ಅಭಿಷೇಕ್ ಮಾಡಿದ್ದಾನೆ ಎನ್ನುವ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದರು.
Advertisement
ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಸೋಮವಾರ ರಾತ್ರಿ ಹೆಣ್ಣೂರು ಬಂಡೆ ಬಳಿ ಆರೋಪಿ ಇರುವ ಬಗ್ಗೆ ಖಚಿತ ಮಾಹಿತಿ ದೊರಕಿತ್ತು. ಈ ಮಾಹಿತಿ ಆಧಾರದಲ್ಲಿ ಬಂಧಿಸಲು ಹೋದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಸಂತೋಷ್ ಮೇಲೆ ಚಾಕುವಿನಿಂದ ಅಭಿಷೇಕ್ ಹಲ್ಲೆ ನಡೆಸಿದ್ದಾನೆ.
Advertisement
ಈ ವೇಳೆ ಎಚ್.ಡಿ ಕುಲಕರ್ಣಿ ಮೊದಲು ಆರೋಪಿಯನ್ನು ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದ್ಯಾವುದಕ್ಕೂ ಆರೋಪಿ ಹೆದರದೇ ಕುಲಕರ್ಣಿ ಮೇಲೆಯೇ ಹಲ್ಲೆ ನಡೆಸಲು ಬಂದಾಗ ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
https://www.youtube.com/watch?v=nXkG2Xs-PS0
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv