– ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದ ಶಿವಣ್ಣ
ಹುಬ್ಬಳ್ಳಿ: ನಗರದಲ್ಲಿರುವ ಸಿದ್ದಾರೂಢ ಮಠಕ್ಕೆ ನಟ ಶಿವರಾಜಕುಮಾರ್ ಇಂದು ಭೇಟಿ ನೀಡಿದ್ದಾರೆ. ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ ಚಿತ್ರೀಕರಣ ವೇಳೆ ಮಠಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್ ಸಿದ್ದಾರೂಢ ಸ್ವಾಮಿಯ ದರ್ಶನ ಪಡೆದ್ರು.
ಇದೇ ವೇಳೆ ಮಾತನಾಡಿದ ಅವರು, ನಮ್ಮ ಕುಟುಂಬ ಅಪ್ಪಾಜಿ ಕಾಲದಿಂದಲೂ ಮಠಕ್ಕೆ ಭೇಟಿ ನೀಡುತ್ತಾ ಬಂದಿದೆ. ಆ ಪರಂಪರೆಯನ್ನು ನಾವು ಇಂದು ಮುಂದುವರೆಸುತ್ತಾ ಬಂದಿದ್ದೇವೆ ಅಂದ್ರು.
ಹುಬ್ಬಳ್ಳಿಯನ್ನೇ ಆಯ್ಕೆ ಮಾಡಿದ್ದು ಯಾಕೆ?
ಬಂಗಾರ ಸನ್ ಆಫ್ ಬಂಗಾರದ ಮನುಷ್ಯ, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಬಹನಿರಿಕ್ಷಿತ ಚಿತ್ರ. ಯೋಗಿ ಜಿ ರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಈ ಚಿತ್ರದ ಚಿತ್ರೀಕರಣ ಬಹತೇಕ ಮುಕ್ತಾಯ ಹಂತ ತಲುಪಿದೆ. ಈಗಾಗಲೇ ಹಲವಾರು ಸುಂದರ ಲೋಕೆಷನ್‍ಗಳಲ್ಲಿ ಚಿತ್ರತಂಡ ಶೂಟಿಂಗ್ ನಡೆಸಿದೆ. ಚಿತ್ರದ ಹಾಡೊಂದರ ಚಿತ್ರೀಕರಣಕ್ಕಾಗಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯನ್ನು ಆಯ್ಕೆ ಮಾಡಿಕೊಂಡಿದೆ.
ಇದು ಮೊದಲೇ ರೈತ ಪ್ರಧಾನ ಚಿತ್ರದವಾದ್ದರಿಂದ ಈ ಹಾಡನ್ನ ನಾಡಿನ ಅನ್ನದಾತನಿಗೆ ಚಿತ್ರತಂಡ ಅರ್ಪಿಸುತ್ತಿದೆಯಂತೆ. ಉಳುವಾ ಯೋಗಿ ಉಳಿಮೆ ಬಿಟ್ರೆ ಉಳಿಯೋರು ಯಾರು ಅನ್ನೋ ಸೆಂಟಿಮೆಂಟಲ್ ಸಾಹಿತ್ಯದೊಂದಿಗೆ ಹಾಡು ತಯಾರಾಗಿದೆ. ಹೀಗಾಗಿ ಹಾಡಿಗೆ ತಕ್ಕಂತೆ ಚಿತ್ರತಂಡ ಶೂಟಿಂಗ್ ಸ್ಪಾಟ್ ಗಳನ್ನ ಹುಡುಕಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಹಾಡಿನ ಚಿತ್ರೀಕರಣ ಮಾಡ್ಬೇಕು ಅಂದುಕೊಂಡು ಚಿತ್ರತಂಡ ಇವತ್ತು ಹುಬ್ಬಳ್ಳಿಗೆ ಆಗಮಿಸಿತ್ತು. ಅದರಂತೆ ಇಲ್ಲಿನ ಇತಿಹಾಸ ಪ್ರಸಿದ್ಧ ಸಿದ್ದಾರೂಢ ಮಠದಲ್ಲಿ ಹಾಡಿನ ಚಿತ್ರೀಕರಣ ನಡೆಯಿತು. ಉರಿಯುವ ಬಿಸಿಲನ್ನು ಲೆಕ್ಕಿಸದೇ ಶಿವಣ್ಣ, ನಿರ್ದೇಶಕರು ಆಕ್ಷನ್ ಕಟ್ ಹೇಳುತ್ತಲೇ ಅಂತಿಮ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಮಠದ ಆವರಣದಲ್ಲಿ ಸುಮಾರು ಮೂರು ತಾಸುಗಳಿಗಿಂತಲೂ ಹೆಚ್ಚು ಹೊತ್ತು ಚಿತ್ರೀಕರಣದ ನಡೆಸಿದ ತಂಡ ಫುಲ್ ಏಂಜಾಯ್ ಮಾಡ್ತು. ಶಿವಣ್ಣರನ್ನು ನೊಡಲು ಜನ ಸಾಗರವೇ ಮಠದ ಆವರಣಕ್ಕೆ ಹರಿದು ಬಂದಿತ್ತು. ಅಷ್ಟೇ ಅಲ್ಲದೇ ಶಿವಣ್ಣ ಚಿತ್ರೀಕರಣದಲ್ಲಿ ತೊಡಗಿದ್ದರೆ ಇತ್ತ ಅಭಿಮಾನಿಗಳು ಶಿಳ್ಳೆ ಚಪ್ಪಾಳೆ ಹೊಡೆಯುವ ಮೂಲಕ ಪ್ರೋತ್ಸಾಹ ನೀಡಿದರು.
ಬೆಳಿಗ್ಗೆ 11 ಗಂಟೆಯಿಂದಲೇ ಚಿತ್ರೀಕರಣದಲ್ಲಿ ಭಾಗವಹಿಸಿದ ಶಿವಣ್ಣ ಅಭಿಮಾನಿಗಳ ಜೊತೆಗೆ ಸೆಲ್ಫಿಗೂ ಪೋಸ್ ಕೊಟ್ಟರು. ಇನ್ನು ತಮ್ಮ ನೆಚ್ಚಿನ ಕೋರಿಯೋಗ್ರಾಫರ್ ಹರ್ಷ ಶಿವಣ್ಣ ಹಾಡಿನ ನೇತೃತ್ವ ವಹಿಸಿದ್ದರು. ಹರ್ಷ ಜೊತೆಗೆ ನಿರ್ದೇಶಕ ಯೋಗಿ ಕೂಡಾ ಭಾಗವಹಿಸಿ ಶಿವಣ್ಣನಿಗೆ ಸಾಥ್ ನೀಡಿದರು.
ಚಿತ್ರಿಕರಣದ ಬಳಿಕ ಮಾತನಾಡಿದ ನಿರ್ದೇಶಕ ಯೋಗಿ ಜಿ ರಾಜ್, ಇದು ನನ್ನ ಬಹು ನಿರೀಕ್ಷಿತ ಚಿತ್ರ. ಅಷ್ಟೆ ಅಲ್ಲದೆ ಶಿವಣ್ಣ ಕೂಡ ಅದ್ಭುತವಾಗಿ ಅಭಿನಯಿಸಿದ್ದಾರೆ. ಈಗಾಗಾಲೇ ಚಿತ್ರದ ಚಿತ್ರಿಕರಣ ಮುಗಿದಿದ್ದು ಮುಂದಿನ ತಿಂಗಳು ಬಿಡುಗಡೆ ಮಾಡುವ ಪ್ಲಾನ್‍ನಲ್ಲಿದ್ದೇವೆ ಅಂದ್ರು.